More

    ಕೊಟ್ಟಿಗೇರಿ ಸೀಲ್​ಡೌನ್ ಸ್ಥಳಕ್ಕೆಎಸಿ ಭೇಟಿ

    ಬಂಕಾಪುರ: ಪಟ್ಟಣದ ಕೊಟ್ಟಿಗೇರಿಯಲ್ಲಿ ಕರೊನಾ ಪಾಸಿಟಿವ್ ಪ್ರಕರಣ ಪತ್ತೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ ಭೇಟಿ ನೀಡಿ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

    ಸೋಂಕಿತ ವ್ಯಕ್ತಿ ವಾಸಿಸುತ್ತಿದ್ದ ಮನೆಯ ಸುತ್ತಲಿನ 100 ಮೀ. ಪ್ರದೇಶ ಸೀಲ್​ಡೌನ್ ಮಾಡಲಾಗಿದೆ. ಸುತ್ತಲಿನ 7 ಕಿ.ಮೀ. ಬಫರ್ ಜೋನ್ ಎಂದು ಘೊಷಣೆ ಮಾಡಲಾಗಿದೆ. ಅಲ್ಲದೆ, ಸಮೀಪದ ಉಡಚೇಶ್ವರಿ ಸಭಾಭವನದಲ್ಲಿ ಫಿವರ್ ಕ್ಲಿನಿಕ್ ಕೇಂದ್ರ, ಅಂಬೇಡ್ಕರ್ ನಗರದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಂಟ್ರೋಲ್ ರೂಂ ತೆರೆಯಲಾಗಿದೆ. ಸೋಂಕಿತನ ಹತ್ತಿರದ ಜನರನ್ನು ಜೇಕಿನಕಟ್ಟಿ ಗ್ರಾಮದ ಮುರಾರ್ಜಿ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ ಎಂದರು.

    ಸೀಲ್​ಡೌನ್ ಪ್ರದೇಶಕ್ಕೆ ಒಳ ಹೋಗಲು ಮತ್ತು ಹೊರಬರಲು ಒಂದೇ ಗೇಟ್ ನಿಗದಿಪಡಿಸಲಾಗಿದೆ. ಸೀಲ್​ಡೌನ್ ಪ್ರದೇಶದಿಂದ ಹೊರ ಮತ್ತು ಒಳ ಪ್ರವೇಶ ನಿಷೇಧಿಸಲಾಗಿದೆ. ಸೀಲ್​ಡೌನ್​ಗೆ ಒಳಗಾದ ಎಲ್ಲ ಜನರು ಸಹಕರಿಸಿ ನಿಯಮ ಪಾಲಿಸಬೇಕು. ಈ ಅವಧಿಯಲ್ಲಿ ಬೇಕಾದ ಎಲ್ಲ ಅಗತ್ಯ ವಸ್ತುಗಳನ್ನು ಪೂರೈಸಲಾಗುವುದು ಎಂದರು.

    ಸಿಪಿಐ ಬಸವರಾಜ ಹಳಬಣ್ಣವರ, ತಹಸೀಲ್ದಾರ್ ಪ್ರಕಾಶ ಕುದರಿ, ಉಪತಹಸೀಲ್ದಾರ್ ಎಂ.ಎಸ್. ಪಾಟೀಲ. ಮುಖ್ಯಾಧಿಕಾರಿ ರೇಣುಕಾ ದೇಸಾಯಿ, ಡಾ.ಅನಿಲ ಹೊಸಳ್ಳಿ, ಡಾ. ಮನೋಜಕುಮಾರ ನಾಯ್ಕ, ಪಿಎಸ್​ಐ ಸಂತೋಷ ಪಾಟೀಲ, ವಿಜಯ ರಾಣೋಜಿ ಹಾಗೂ ಆಶಾ ಕಾರ್ಯಕರ್ತೆಯರು, ಆರೋಗ್ಯ ಸಹಾಯಕರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts