More

    ಕೊಚ್ಚಿ ಹೋದ ಕೆರೆ ಏರಿ, ರಸ್ತೆಗಳು

    ಹನಗೋಡು: ಹೋಬಳಿಯ ಚಿಲ್ಕುಂದ ಭಾಗದಲ್ಲಿ ಶನಿವಾರ ಹಾಗೂ ಭಾನುವಾರ ಸುರಿದ ಭಾರಿ ಮಳೆಯಿಂದ ಕೆರೆ ಏರಿ, ರಸ್ತೆಗಳು ಕೊಚ್ಚಿ ಹೋಗಿದೆ.

    ಚಿಲ್ಕುಂದ-ಹುಲ್ಲುಕೆರೆ ಕೋಡಿ ಬಿದ್ದ ಹಿನ್ನೆಲೆಯಲ್ಲಿ ಕೆಳಭಾಗ ಹಾಗೂ ಹಿಂಭಾಗದಲ್ಲಿನ ಜಮೀನಿನಲ್ಲಿ ಬೆಳೆದಿದ್ದ ಶುಂಠಿ, ರಾಗಿ, ಬದನೆ, ಜೋಳ ಮತ್ತಿತರ ಬೆಳೆಗಳು ಜಲಾವೃತವಾಗಿವೆ. ಅಲ್ಲದೆ ದೇವೇಂದ್ರ ಎಂಬವರು ಇತ್ತೀಚೆಗೆ ಕೆರೆಗೆ ಬಿಟ್ಟಿದ್ದ ಮೀನು ಮರಿಗಳು ಕೋಡಿ ನೀರಿನಲ್ಲಿ ಕೊಚ್ಚಿ ಹೋಗಿವೆ.

    ಶಾಸಕ ಎಚ್.ಪಿ.ಮಂಜುನಾಥ್ ಅಧಿಕಾರಿಗಳೊಂದಿಗೆ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ನೊಂದ ಜನತೆಗೆ ಸಾಂತ್ವನ ಹೇಳಿ ಸರ್ಕಾರದಿಂದ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು.

    ಕೆರೆ ಏರಿ ಮೇಲೆ ನೀರು: ನೇರಳಕುಪ್ಪೆ ಗ್ರಾಪಂ ವ್ಯಾಪ್ತಿಯ ಕೆ.ಜಿ.ಹೆಬ್ಬನಕುಪ್ಪೆಯ ತಾವರೆಕೆರೆ ತುಂಬಿ ಕೆರೆ ಏರಿ ಮೇಲೆ ಒಂದು ಅಡಿಗೂ ಹೆಚ್ಚು ನೀರು ಹರಿಯುತ್ತಿದೆ. ಇದರಿಂದ ಭತ್ತದ ಬೆಳೆಗೆ ಸಾಕಷ್ಷು ಪ್ರಮಾಣದಲ್ಲಿ ಹಾನಿಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts