More

    ಕೈಮಗ್ಗ ಉತ್ಪಾದನೆ ಹೆಚ್ಚಿನ ಪ್ರೋತ್ಸಾಹ ಅವಶ್ಯ


    ಯಾದಗಿರಿ: ನಮ್ಮ ದೇಶ ವಿವಿಧ ರೀತಿಯ ಸೀರೆ ಹಾಗೂ ಇನ್ನಿತರ ಉಡುಪುಗಳನ್ನು ಮಹಿಳಾ ಪ್ರಧಾನವಾಗಿ ತಯಾರಿಸುತ್ತಿದ್ದು, ಇಲ್ಲಿನ ಮಹಿಳೆ ತನ್ನ ಸೀರೆಯಲ್ಲಿ ಗುರುತಿಸುವಂತೆ ಇನ್ಯಾವುದೇ ಉಡುಪಿನಲ್ಲಿ ಗುರುತಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಶಾಸಕ ಚೆನ್ನಾರೆಡ್ಡಿ ಪಾಟೀಲ ತುನ್ನೂರ ತಿಳಿಸಿದರು.

    ನಗರದ ವಿದ್ಯಾಮಂಗಲ ಕಾರ್ಯಾಲಯದಲ್ಲಿ ಬುಧವಾರ ಜಿಲ್ಲಾಡಳಿತ, ಜಿಪಂ ಹಾಗೂ ಜವಳಿ ಮತ್ತು ಕೈಮಗ್ಗ ಇಲಾಖೆ ಸಹಯೋಗದಡಿ ಆಯೋಜಿಸಿದ್ದ ವಸ್ತ್ರ ಮಯೂರಿ ಕೈಮಗ್ಗ ಮೇಳ ಉದ್ಘಾಟಿಸಿ ಮಾತನಾಡಿ, ನೇಕಾರರಿಂದ ಗ್ರಾಹಕರಿಗೆ ನೇರ ಮಾರಾಟ ಮಾಡುವ ಉದ್ದೇಶದಿಂದ ಆಯೋಜಿಸಿರುವ ಈ ಮೇಳದಲ್ಲಿ ಗುಣಮಟ್ಟದ ಬಟ್ಟೆ ಹಾಗೂ ಇತರ ವಸ್ತುಗಳು ಲಭ್ಯವಿದ್ದು ನಗರ ಹಾಗೂ ಜಿಲ್ಲೆಯ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ಮಾಡಿದರು.

    ರಾಜ್ಯದಲ್ಲಿ ಸರಿಸುಮಾರು ನಲವತ್ತು ಸಾವಿರ ಕೈಮಗ್ಗಗಳು ಹೊಂದಿದ್ದು ರೇಷ್ಮೆ ಹತ್ತಿ ಹಾಗೂ ಉಣ್ಣೆ ಬಟ್ಟೆಗಳನ್ನು ನೇಯಲಾಗುತ್ತಿದೆ ಈ ಕ್ಷೇತ್ರವು ಅತ್ಯಧಿಕ ಗ್ರಾಮಾಂತರ ಮಹಿಳೆಯರಿಗೆ ಉದ್ಯೋಗವನ್ನು ನೀಡಿದೆ. ತಮ್ಮ ಕಲೆ ಮತ್ತು ವಿನ್ಯಾಸಗಳನ್ನು ಸೃಷ್ಠಿಸಿ ಜೀವನೋಪಾಯಕ್ಕೆ ಆಸರೆಯಾಗಿದೆ. ಈ ಪ್ರಾಚೀನ ಉದ್ದಿಮೆಯನ್ನು ಉಳಿಸಿ ಬೆಳೆಸುವ ಅಗತ್ಯವಿದೆ ಹಾಗಾಗಿ ಸರಕಾರವು ಅಭಿವೃದ್ಧಿ ನಿಗಮ ಸ್ಥಾಪಿಸಿ ಕೈ ಮಗ್ಗಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದರು.

    20 ಜಿಲ್ಲೆಗಳಿಂದ ನೇಕಾರ ಸಹಕಾರಿ ಸಂಘಗಳು ಈ ಮೇಳದಲ್ಲಿ ಭಾಗವಹಿಸಿದ್ದು, ಅಪ್ಪಟ ರೇಷ್ಮೆ ಸೀರೆಗಳು, ಮದುವೆ ಸೀರೆಗಳು, ಇಲಕಲ್ ಸೀರೆಗಳು, ಕಾಟನ್ ಬಟ್ಟೆಗಳು, ಡ್ರೆಸ್ ಮೆಟರಿಯಲ್, ಶಾರ್ಟ್, ಲುಂಗಿ, ಟವೆಲ್, ಖಾದಿ ಶರ್ಟ್, ಪೂಜಾ ಉಣ್ಣೆ ಕಂಬಳಿಗಳು, ಶಾಲುಗಳು, ಧೋತಿ, ಪಂಜೆ ಲಭ್ಯವಿರುತ್ತವೆ ಎಂದು ನುಡಿದ ಅವರು ಕೈಮಗ್ಗ ಉತ್ಪಾದನೆ ಖರೀದಿಸಿ ಪ್ರೋತ್ಸಾಹಿಸುವಂತೆ ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts