More

    ಕೇವಲ 16 ದಿನದ ಕೂಸಿಗೆ ಯಶಸ್ವಿ ಹೃದಯ ಶಸ್ತ್ರಚಿಕಿತ್ಸೆ!

    ಕೆಎಲ್‌ಇ ಡಾ.ಪ್ರಭಾಕರ ಆಸ್ಪತ್ರೆಯ ವೈದ್ಯರ ತಂಡದ ಕಾರ್ಯಕ್ಕೆ ಡಾ.ಪ್ರಭಾಕರ ಕೋರೆ ಮೆಚ್ಚುಗೆ

    ಬೆಳಗಾವಿ: ಹೃದಯದ ತೊಂದರೆಯಿಂದ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದ ಕೇವಲ 16 ದಿನಗಳ ನವಜಾತ ಶಿಶುವಿಗೆ ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಯ ವೈದ್ಯರು ಯಶಸ್ವಿ ಹೃದಯ ಚಿಕಿತ್ಸೆ ನೀಡುವುದರ ಮೂಲಕ ಶಿಶುವಿನ ಬಾಳಿಗೆ ಬೆಳಕಾಗಿದ್ದಾರೆ.
    2.50ಕೆಜಿ ತೂಕವಿರುವ ನವಜಾತ ಶಿಶುವೊಂದು ಆಮ್ಲಜನಕ ಭರಿತ ರಕ್ತದ ಕೊರತೆಯಿಂದ ಮೈಬಣ್ಣ ನೀಲಿ ಬಣ್ಣಕ್ಕೆ ತಿರುಗಿತ್ತು. ಅಲ್ಲದೇ ಹೃದಯ ಬಡಿತದೊಂದಿಗೆ ನಾಡಿಮಿಡಿತವೂ ಕಡಿಮೆಗೊಂಡ ಪರಿಣಾಮ ಜೀವಕ್ಕೆ ಅಪಾಯವಿತ್ತು. ಇದು ಅತ್ಯಂತ ಅಪರೂಪದ ಜನ್ಮತಃ ಹೃದಯ ದೋಷವಾಗಿದ್ದು, ಮಗು ತಾಯಿಯ ಗರ್ಭದಲ್ಲಿರುವಾಗ ಕೆಲವೊಮ್ಮೆ ತಪಾಸಣೆ ಸಂದರ್ಭದಲ್ಲಿಯೂ ಬೆಳಕಿಗೆ ಬರುವುದಿಲ್ಲ. ಮಹಾರಾಷ್ಟ್ರದ ಚಂದಗಡ ತಾಲೂಕಿನ ನವಜಾತ ಶಿಶುವನ್ನು ಚಿಕ್ಕಮಕ್ಕಳ ಹೃದಯ ತಜ್ಞವೈದ್ಯರಾದ ಡಾ. ಡ್ಯಾನಿಶ ಮೆಮನ್ ಅವರು ಪರೀಕ್ಷಿಸಿದಾಗ ಹೃದಯದ ಮುಖ್ಯ ರಕ್ತನಾಳವು ಅದಲು-ಬದಲಾಗಿ ಆಮ್ಲಜನಕ ಭರಿತ ರಕ್ತದ ಸಂಚಾರದ ತೊಂದರೆಯಿಂದ ತೀವ್ರ ಅನಾರೋಗ್ಯಕ್ಕೀಡಾಗಿತ್ತು.

    ಕೇವಲ 16 ದಿನದ ಕೂಸಿಗೆ ಯಶಸ್ವಿ ಹೃದಯ ಶಸ್ತ್ರಚಿಕಿತ್ಸೆ!

    ಕೂಡಲೇ ಶಸಚಿಕಿತ್ಸೆ ನೀಡಲು ಅಣಿಯಾದ ವೈದ್ಯರು, ಅತ್ಯಂತ ಅಪರೂಪವಾದ ಇದನ್ನು ಅಪಧಮನಿಯ ಸ್ವಿಚ್ ಆಪರೇಷನ್ ಮೂಲಕ ಸರಿಪಡಿಸಿದರು. ಈ ಶಸಚಿಕಿತ್ಸೆಯನ್ನು ಕೂಸು ಜನಿಸಿದ 3 ವಾರಗಳಲ್ಲಿ ಮಾಡಬೇಕಾಗುತ್ತದೆ. ಹೃದಯದ ದೊಡ್ಡ ಅಪಧಮನಿಗಳನ್ನು ಅವುಗಳ ಕೋಣೆಗೆ ಸಾಮಾನ್ಯ ಸಂಪರ್ಕಕ್ಕೆ ಬದಲಾಯಿಸಲಾಗುತ್ತದೆ. ನವಜಾತ ಶಿಶುಗಳ ಹೃದಯ ಶಸಚಿಕಿತ್ಸೆಯಲ್ಲಿ ಇದು ಅತ್ಯಂತ ಮುಖ್ಯವಾಗಿದೆ. ತಾಂತ್ರಿಕವಾಗಿ ಬೇಡಿಕೆಯಿರುವ ಅತಿ ಸಂಕೀರ್ಣ ಶಸಚಿಕಿತ್ಸೆಯಾಗಿದೆ. ಚಿಕ್ಕಮಕ್ಕಳ ಹೃದಯತಜ್ಞ ಡಾ. ಗಣಂಜಯ್ ಸಾಳ್ವೆ ಅವರು ಯಶಸ್ವಿ ಚಿಕಿತ್ಸೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಡಾ. ಆನಂದ ವಾಘರಾಳಿ ಮತ್ತು ಡಾ. ಶರಣಗೌಡ ಪಾಟೀಲ ಅವರು ಅರಿವಳಿಕೆ ನೀಡಿದರೆ, ಚಿಕ್ಕಮಕ್ಕಳ ಇಂಟೆನ್ಸಿವಿಸ್ಟ್ ಡಾ. ನಿಧಿ ಗೋಯೆಲ್ ಮಾನ್ವಿ, ಚಿಕ್ಕಮಕ್ಕಳ ಹೃದ್ರೋಗ ತಜ್ಞ ಡಾ. ವೀರೇಶ್ ಮಾನ್ವಿ ಮತ್ತು ಡಾ. ಡ್ಯಾನಿಶ್ ಮೆಮನ್ ಸಹಕಾರ ನೀಡಿದರು. ಶಸಚಿಕಿತ್ಸೆಯ 10ನೆಯ ದಿನಕ್ಕೆ ಮಗುವನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಕೆಎಲ್‌ಇ ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.ಡಾ. ಗನಂಜಯ್ ಸಾಳ್ವೆ ಮತ್ತು ಅವರ ಸಿಬ್ಬಂದಿ ತಂಡಕ್ಕೆ ತಮ್ಮ ಮಗುವಿನ ಕುಟುಂಬಸ್ಥರು ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.

    ವೈದ್ಯರ ತಂಡಕ್ಕೆ ಮೆಚ್ಚುಗೆ:
    ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರವು ವಿಶ್ವ ದರ್ಜೆಯ ವೈದ್ಯಕೀಯ ಸೌಲಭ್ಯಗಳನ್ನು ಹೊಂದಿದೆ. ಮುಖ್ಯ ಹೃದಯಶಸ್ತ್ರಚಿಕಿತ್ಸಕ ಡಾ. ರಿಚರ್ಡ್ ಸಲ್ಡಾನ್ಹಾ ವಿಭಾಗ ಮುಖ್ಯಸ್ಥ ಡಾ. ಮೋಹನ್ ಗಾನ ಸೇರಿದಂತೆ ಶಿಶುವಿಗೆ ಹೊಸ ಜೀವನ ನೀಡಿದ ವೈದ್ಯರ ತಂಡವನ್ನು ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಹಾಗೂ ಆಡಳಿತ ಮಂಡಳಿ ಸದಸ್ಯರು, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. (ಕರ್ನಲ್) ಎಂ. ದಯಾನಂದ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    Related articles

    Share article

    Latest articles