More

    ಕೇಂದ್ರದ ಮಾದರಿಯಲ್ಲಿ ವೇತನ ಕೊಡಿ

    ಹುಬ್ಬಳ್ಳಿ: ಕೇಂದ್ರದ ಮಾದರಿಯಲ್ಲಿ ವೇತನ ನೀಡಬೇಕು. ಈ ಬೇಡಿಕೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

    ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಸರ್ಕಾರಿ ನೌಕರರು ಹಾಗೂ ಶಿಕ್ಷಕರೊಂದಿಗೆ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ಬೇಡಿಕೆ ಈಡೇರಿಸುವ ಸಂಬಂಧ ಮುಂಬರುವ ದಿನಗಳಲ್ಲಿ ಆರು ಲಕ್ಷ ನೌಕರರು ಬೀದಿಗಿಳಿಯಲಿದ್ದಾರೆ. ಸಾಕಷ್ಟು ಜ್ವಲಂತ ಸಮಸ್ಯೆಗಳಿದ್ದು, ಸೈನಿಕರಂತೆ ಹೋರಾಟ ಮಾಡಬೇಕಿದೆ ಎಂದು ಹುರಿದುಂಬಿಸಿದರು.

    ದೇಶದ 90, ರಾಜ್ಯದ 6 ಲಕ್ಷ ಜನರು ಡಿಎ ಪಡೆಯಲು ಎದುರು ನೋಡುತ್ತಿದ್ದಾರೆ. ಶೀಘ್ರದಲ್ಲಿಯೇ ಸಿಗುವ ನಿರೀಕ್ಷೆಯಿದೆ. ರಾಜ್ಯ ಸರ್ಕಾರ ಆರೋಗ್ಯ ಸಿರಿ ಯೋಜನೆ ಜಾರಿಗೆ ತರಲು ಹೊರಟಿದೆ. ಈ ಮೊದಲು ತೀವ್ರ ಕಾಯಿಲೆಗೆ ಶೇ. 15ರಷ್ಟು ರಿಯಾಯಿತಿ ನೀಡಲಾಗುತ್ತಿತ್ತು. ಈಗ ಯಾವುದೇ ಕಾಯಿಲೆಗೆ 50 ಲಕ್ಷ ರೂ.ವರೆಗೆ ನಗದು ರಹಿತ ಚಿಕಿತ್ಸೆ ನೀಡಲು ಮುಂದಾಗಿದೆ. ತಾಲೂಕಿನ ಎಲ್ಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು. 1500 ಕೋಟಿ ರೂ. ವೆಚ್ಚದ ಈ ಯೋಜನೆ 2021ರ ಏಪ್ರಿಲ್​ನಿಂದ ಜಾರಿಗೆ ಬರುವ ಸಾಧ್ಯತೆ ಇದೆ ಎಂದರು.

    ಎನ್​ಪಿಎಸ್ ನೌಕರರು ಅತಂತ್ರರಾಗಿದ್ದಾರೆ. ಹೋರಾಟದ ಗುರಿ ಸ್ಪಷ್ಟವಾಗಿದೆ. ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಶಾಲೆ-ಕಾಲೇಜ್, ಸರ್ಕಾರಿ ಕಚೇರಿಗಳನ್ನು ಬಂದ್ ಮಾಡಿ ಹೋರಾಟಕ್ಕೆ ಬರಬೇಕು. ಒಗ್ಗಟ್ಟು ಪ್ರದರ್ಶಿಸಬೇಕು. ನೌಕರರ ಮೇಲೆ ಕ್ರಮ ಕೈಗೊಳ್ಳಲು ಮುಂದಾದರೆ, ಸರ್ಕಾರವೇ ಅತಂತ್ರವಾಗಲಿದೆ. ಸರ್ಕಾರ ಅಭಿವೃದ್ಧಿಯಲ್ಲಿದೆ ಎಂದರೆ ಇದಕ್ಕೆ ಸರ್ಕಾರಿ ನೌಕರರೇ ಕಾರಣ. ಅದಕ್ಕಾಗಿ ಸರ್ಕಾರ, ನೌಕರರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದರು.

    ಸಂಘದ ಪ್ರಧಾನ ಕಾರ್ಯದರ್ಶಿ ಜಗದೀಶಗೌಡಪ್ಪ ಪಾಟೀಲ ಮಾತನಾಡಿ, ಎನ್​ಪಿಎಸ್ ಬಗ್ಗೆ ಯಾರೂ ಚಿಂತೆ ಮಾಡಬಾರದು. ಹೋರಾಟಕ್ಕೆ ಜಯ ಸಿಕ್ಕೆ ಸಿಗುತ್ತದೆ. ಉತ್ತರ ಕರ್ನಾಟಕ ಭಾಗದಲ್ಲಿ ಆರಂಭವಾದ ಹೋರಾಟಕ್ಕೆ ರ್ತಾಕ ಅಂತ್ಯ ಒಗ್ಗಟ್ಟಿನಿಂದ ನೀಡಬೇಕಿದೆ ಎಂದರು. ಧಾರವಾಡ ಜಿಲ್ಲಾಧ್ಯಕ್ಷ ಎಸ್.ಎಫ್. ಸಿದ್ದನಗೌಡರ ಪ್ರಾಸ್ತಾವಿಕವಾಗಿ ಮಾತನಾಡಿದರು.

    ಪದಾಧಿಕಾರಿಗಳಾದ ಆರ್. ಶ್ರೀನಿವಾಸ, ವಿ.ವಿ. ಶಿವರುದ್ರಯ್ಯ, ಸುರೇಶ ಶಡಶ್ಯಾಳ, ಮಲ್ಲಿಕಾರ್ಜುನ ಬಳ್ಳಾರಿ, ಎಸ್.ಜಿ. ಸುಬ್ಬಾಪೂರಮಠ, ರಮೇಶ ಲಿಂಗದಾಳ, ಡಾ. ಪ್ರಲ್ಹಾದ ಗೆಜ್ಜಿ, ವಿ.ಎಫ್. ಚುಳಕಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts