More

    ಕೆಸರು ಗದ್ದೆಯಂತಾದ ಸದಲಗಾ ನಿಲ್ದಾಣ

    ಬೋರಗಾಂವ: ಕೋಟಿ ಕೋಟಿ ಹಣ ಸುರಿದು ಹೈಟೆಕ್ ಬಸ್ ನಿಲ್ದಾಣ ನಿರ್ಮಿಸಲಾಗಿದೆ. ಆದರೆ, ನಿಲ್ದಾಣದ ಆವರಣದಲ್ಲಿ ಸಿಮೆಂಟ್ ಬೆಡ್, ಡಾಂಬರೀಕರಣ ಮಾಡದೇ ಇರುವುದರಿಂದ ಮಳೆಗಾಲದಲ್ಲಿ ಕೆಸರುಗದ್ದೆಯಂತಾಗುತ್ತಿದ್ದು, ತಗ್ಗು ಗುಂಡಿಗಳಲ್ಲಿ, ಕೆಸರಿನಲ್ಲೇ ಪ್ರಯಾಣಿಕರು ಬಸ್ ಹತ್ತುವ ಅನಿವಾರ್ಯತೆ ಎದುರಾಗಿದೆ.

    ಸಮೀಪದ ಸದಲಗಾ ಪಟ್ಟಣದಲ್ಲಿ 2.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಹೈಟೆಕ್ ಬಸ್ ನಿಲ್ದಾಣದ ಆವರಣದ ತುಂಬ ಕೆಸರು ತುಂಬಿಕೊಂಡಿದ್ದು, ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ.

    ಪಟ್ಟಣದ 1.35 ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಿರುವ ಹೈಟೆಕ್ ಬಸ್ ನಿಲ್ದಾಣದಲ್ಲಿ 14 ಪ್ಲಾಟ್ ಾರ್ಮಗಳು, ಸಂಚಾರ ನಿಯಂತ್ರಣ ಕಕ್ಷ, ಉಪಹಾರ ಗೃಹ, ವಿದ್ಯಾರ್ಥಿಗಳ ರಿಯಾಯಿತಿ ಬಸ್ ಪಾಸ್ ನೀಡಲು ಪ್ರತ್ಯೇಕ ಕೊಠಡಿ, ಚಾಲಕ, ನಿರ್ವಾಹಕರಿಗಾಗಿ ವಿಶ್ರಾಂತಿ ಕೊಠಡಿ, ಪ್ರವಾಸಿ ಮಹಿಳೆ ಯರಿಗಾಗಿ 4 ಮತ್ತು ಪುರುಷರಿಗಾಗಿ 3 ಪ್ರತ್ಯೇಕ ಶೌಚಾಲಯ, ಪ್ರಯಾಣಿಕರಿಗಾಗಿ ಆಸನ ವ್ಯವಸ್ಥೆ ಅಳವಡಿಸಲಾಗಿದೆ.
    ಎರಡು ವರ್ಷಗಳಲ್ಲಿ ಬಸ್ ನಿಲ್ದಾಣ ಕಟ್ಟಡ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಆದರೆ, ಹಲವು ವರ್ಷಗಳ ಕಾಲ ಸರ್ಕಾರದಿಂದ ಅಧಿಕೃತವಾಗಿ ಬಸ್ ನಿಲ್ದಾಣ ಉದ್ಘಾಟನೆ ಮಾಡದ ಕಾರಣದಿಂದಾಗಿ, ಬಸ್ ನಿಲ್ದಾಣದ ಹೊರಗಡೆ ರಸ್ತೆ ಮೇಲೆಯೇ ಬಸ್ ನಿಲುಗಡೆ ಮಾಡಲಾಗುತ್ತಿತ್ತು. ಇದರಿಂದಾಗಿ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗುತ್ತಿತ್ತು. 2019 ನವೆಂಬರ್‌ನಲ್ಲಿ ಗ್ರಾಮದ ವಿವಿಧ ಸಂಘಟನೆಗಳ ಮುಖಂಡರು ಮತ್ತು ವಿದ್ಯಾರ್ಥಿಗಳು ಸೇರಿಕೊಂಡು ಬಸ್‌ಗಳನ್ನು ನಿಲ್ದಾಣದಲ್ಲಿ ನಿಲುಗಡೆ ಮಾಡಿಸಲು ಪ್ರಾರಂಭಿಸಿದರು.

    ನಿಪ್ಪಾಣಿ, ಚಿಕ್ಕೋಡಿ ಘಟಕಗಳಿಂದ ನಿತ್ಯವೂ ಹಲವು ಬಸ್‌ಗಳು ಸಂಚರಿಸುವ ಈ ನಿಲ್ದಾಣದ ಆವರಣದಲ್ಲಿ ಸಿಮೆಂಟ್ ಕಾಂಕ್ರಿಟ್, ಡಾಂಬರೀಕರಣ ಮಾಡದೇ ಇರದೇ ಇರುವುದರಿಂದ ನಿಲ್ದಾಣದ ತುಂಬ ತಗ್ಗು ಗುಂಡಿಗಳು ನಿರ್ಮಾಣವಾಗಿದ್ದು, ಮಳೆಗಾಲದಲ್ಲಿ ನಿಲ್ದಾಣ ಕೆಸರು ಗದ್ದೆಯಾಗಿ ಪರಿವರ್ತನೆಯಾಗುತ್ತಿದೆ. ವಿದ್ಯಾರ್ಥಿಗಳು, ವಯೋವೃದ್ಧರು ಸೇರಿದಂತೆ ಪ್ರಯಾಣಿಕರಿಗೆ ತೊಂದರೆ ಉಂಟಾಗುತ್ತಿದೆ.

    ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಗಮನ ಹರಿಸಿ ಬಸ್ ನಿಲ್ದಾಣದ ಆವರಣದಲ್ಲಿ ಡಾಂಬರೀಕರಣ ಮಾಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಸದಲಗಾದ ಏಕವೀರಿ ೌಂಡೇಷನ್ ಅಧ್ಯಕ್ಷ ರಾಜಕುಮಾರ ಡಾಂಗೆ ಒತ್ತಾಯಿಸಿದ್ದಾರೆ.ಸದಲಗಾ ಬಸ್ ನಿಲ್ದಾಣದ ಆವರಣದಲ್ಲಿ ಕಾಂಕ್ರಿಟ್ ಮಾಡಲು 1.25 ಕೋಟಿ ವೆಚ್ಚದ ಪ್ರಸ್ತಾವನೆಯನ್ನು ಕೇಂದ್ರ ಕಚೇರಿಗೆ ಸಲ್ಲಿಸಲಾಗಿದೆ. 2022-23ನೇ ಸಾಲಿನಲ್ಲಿ ಅನುದಾನ ಮಂಜೂರಾತಿ ದೊರಕಲಿದೆ. ಅಲ್ಲಿಯವರೆಗೆ ತಾತ್ಕಾಲಿಕವಾಗಿ ತಗ್ಗು ಗುಂಡಿಗಳಿಗೆ ಮುರುಮ ಹಾಕಿ ಮೆಟಲಿಂಗ್ ವ್ಯವಸ್ಥೆ ಮಾಡಲಾಗುವುದು ಶಶಿಧರ ಎಂ, ವಿಭಾಗೀಯ ನಿಯಂತ್ರಣಾಧಿಕಾರಿ, ವಾಕರಸಾ ಸಂಸ್ಥೆ ಚಿಕ್ಕೋಡಿ

    ಸದಲಗಾ ಬಸ್ ನಿಲ್ದಾಣದ ಆವರಣದಲ್ಲಿ ಕಾಂಕ್ರಿಟ್ ಮಾಡಲು 1.25 ಕೋಟಿ ವೆಚ್ಚದ ಪ್ರಸ್ತಾವನೆಯನ್ನು ಕೇಂದ್ರ ಕಚೇರಿಗೆ ಸಲ್ಲಿಸಲಾಗಿದೆ. 2022-23ನೇ ಸಾಲಿನಲ್ಲಿ ಅನುದಾನ ಮಂಜೂರಾತಿ ದೊರಕಲಿದೆ. ಅಲ್ಲಿಯವರೆಗೆ ತಾತ್ಕಾಲಿಕವಾಗಿ ತಗ್ಗು ಗುಂಡಿಗಳಿಗೆ ಮುರುಮ ಹಾಕಿ ಮೆಟಲಿಂಗ್ ವ್ಯವಸ್ಥೆ ಮಾಡಲಾಗುವುದು
    | ಶಶಿಧರ ಎಂ, ವಿಭಾಗೀಯ ನಿಯಂತ್ರಣಾಧಿಕಾರಿ, ವಾಕರಸಾ ಸಂಸ್ಥೆ ಚಿಕ್ಕೋಡಿ

    | ಸುಯೋಗ ಕಿಲ್ಲೇದಾರ ಬೋರಗಾಂವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts