More

    ಕೆಲಸಿಕಟ್ಟಿ ಕೆರೆ ಅಭಿವೃದ್ಧಿ ಕಾಮಗಾರಿ ಆರಂಭ

    ಶಿರಸಿ: ಇಲ್ಲಿನ ಮನುವಿಕಾಸ ಸಂಸ್ಥೆ ಮತ್ತು ಎಚ್.ಡಿ.ಬಿ. ಫೈನಾನ್ಸಿಯಲ್ ಸರ್ವಿಸಸ್ ಸಹಕಾರದಿಂದ ತಾಲೂಕಿನ ಅಂಡಗಿಯಲ್ಲಿ ರೈತರ ಸಹಭಾಗಿತ್ವದಲ್ಲಿ ಕೆಲಸಿಕಟ್ಟಿ ಕೆರೆ ಅಭಿವೃದ್ಧಿ ಕಾಮಗಾರಿ ಇತ್ತೀಚೆಗೆ ಆರಂಭಿಸಲಾಗಿದೆ.

    ಈ ವೇಳೆ ಮನುವಿಕಾಸ ಸಂಸ್ಥೆ ನಿರ್ದೇಶಕ ಗಣಪತಿ ಭಟ್ಟ ಮಾತನಾಡಿ, ತಾಲೂಕಿನಲ್ಲಿ ಕಳೆದ ವರ್ಷ 23 ದೊಡ್ಡ ಕೆರೆಗಳ ಹೂಳು ತೆಗೆದು ಅಭಿವೃದ್ಧಿಪಡಿಸಲಾಗಿದೆ. ಈ ವರ್ಷ ತಾಲೂಕಿನ ಎಲ್ಲ ದೊಡ್ಡ ಕೆರೆಗಳನ್ನು ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಲಾಗಿದೆ. ಪೂರ್ವಭಾಗದಲ್ಲಿ ಒಂದು ಕಡೆ ಅಂತರ್ಜಲ ಮಟ್ಟ ಕಡಿಮೆ ಆಗುತ್ತಿದ್ದು ಇನ್ನೊಂದು ಕಡೆ ಕೆರೆಗಳಲ್ಲಿ ಹೂಳು ತುಂಬಿ ನೀರಿನ ಸಂಗ್ರಹ ಕಡಿಮೆ ಆಗುತ್ತಿದೆ. ನಾಲ್ಕು ಎಕರೆಗಿಂತ ವಿಸ್ತಾರವುಳ್ಳ ಎಲ್ಲ ಕೆರೆಗಳನ್ನು ರೈತರು ಸಹಭಾಗಿತ್ವ ನೀಡಿದಲ್ಲಿ ಮತ್ತು ಸಂಬಂಧಪಟ್ಟ ಇಲಾಖೆಗಳು ತಮ್ಮ ಅನುಮತಿ ನೀಡಿದಲ್ಲಿ ಹೂಳೆತ್ತಿ ಅಭಿವೃದ್ಧಿ ಪಡಿಸಲಾಗುವುದು ಎಂದರು. ಗ್ರಾಮ ಪಂಚಾಯಿತಿ ಸದಸ್ಯ ಮಂಜುನಾಥ ನಾಯ್ಕ, ಸಾಮಾಜಿಕ ಕಾರ್ಯಕರ್ತ ಚಂದ್ರು ನಾಯ್ಕ ಇದ್ದರು. ಸಂಸ್ಥೆಯ ಸಂಯೋಜಕ ಅಶ್ವತ್ಥ ನಾಯ್ಕ ಸ್ವಾಗತಿಸಿದರು. ಸುಬ್ರಹ್ಮಣ್ಯ ಹೆಗಡೆ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts