More

    ಕೆರೆ ನಿರ್ಮಾಣ ಕಾಮಗಾರಿ ಆರಂಭಿಸದಿದ್ದರೆ ಪ್ರತಿಭಟನೆ

    ಅಣ್ಣಿಗೇರಿ: ತಾಲೂಕಿನ ಬಸಾಪುರ ಗ್ರಾಮದ ಹತ್ತಿರದ ಶಾಶ್ವತ ಕುಡಿಯುವ ನೀರಿನ ಕೆರೆ ಕಾಮಗಾರಿಯನ್ನು ವಾರದೊಳಗೆ ಆರಂಭಿಸದಿದ್ದರೆ ಧಾರವಾಡ ಜಲಮಂಡಳಿ ಮುಖ್ಯ ಇಂಜಿನಿಯರ್ ಕಚೇರಿ ಎದುರು ಮೇ 29ರಂದು ಜೆಡಿಎಸ್ ಹಾಗೂ ಜನರೊಂದಿಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ ಹೇಳಿದರು. ಗುರುವಾರ ಕೆರೆ ಕಾಮಗಾರಿ ಪರಿಶೀಲಿಸಿ, ಪಟ್ಟಣದ ಉಪತಹಸೀಲ್ದಾರ್ ಎಸ್.ಎಂ. ಹಿರೇಮಠ ಅವರಿಗೆ ಮನವಿಪತ್ರ ನೀಡಿ ಅವರು ಮಾತನಾಡಿದರು. ಪಟ್ಟಣದ ಜನರಿಗೆ 24 ತಾಸು ಕುಡಿಯುವ ನೀರು ಪೂರೈಕೆಗಾಗಿ ತಾಲೂಕಿನ ಬಸಾಪುರ ಗ್ರಾಮದ ಹತ್ತಿರ ಸರ್ಕಾರ 75 ಎಕರೆ ಪ್ರದೇಶದಲ್ಲಿ ಶಾಶ್ವತ ಕುಡಿಯುವ ನೀರಿನ ಕೆರೆ ನಿರ್ವಣಕ್ಕೆ ಅನುದಾನ ನೀಡಿ 3 ವರ್ಷಗಳಾಗಿವೆ. ಆದರೆ, ಕಾಮಗಾರಿ ವರ್ಷದಿಂದ ಸ್ಥಗಿತಗೊಂಡಿದೆ. ಗುತ್ತಿಗೆದಾರರು ವರ್ಷದಲ್ಲಿ ಒಂದು ತಿಂಗಳು ಕಾಮಗಾರಿ ಆರಂಭಿಸಿ ಮತ್ತೆ ಸ್ಥಗಿತಗೊಳಿಸುತ್ತಿದ್ದಾರೆ ಎಂದು ಆರೋಪಿಸಿದರು. ಸ್ಥಳೀಯ ಎಪಿಎಂಸಿಯಲ್ಲಿ ಬೆಂಬಲ ಬೆಲೆಯ ಹತ್ತಿ ಕೇಂದ್ರ, ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿದ ಅವರು, ಸದ್ಯ ರೈತರ ಬೇಡಿಕೆಗೆ ತಕ್ಕಷ್ಟು ಹೆಸರು, ಶೇಂಗಾ, ಗೊಬ್ಬರ ದಾಸ್ತಾನು ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಹೇಳಿದರು. ಭಗವಂತಪ್ಪ ಪುಟ್ಟಣ್ಣವರ, ಶಿವಶಂಕರ ಕಲ್ಲೂರ, ದಾವಲಸಾಬ್ ದರವಾನ, ವೆಂಕಣ್ಣ ಹೊನ್ನಾಯ್ಕರ, ಶ್ರೀಕಾಂತ ಕೋಳಿವಾಡ, ಹಸನಸಾಬ್ ಗಡ್ಡದ, ನಾರಾಯಣ ಮಾಡಳ್ಳಿ, ಹಸನಸಾಬ್ ಘೂಡುನಾಯ್ಕರ, ಐ.ಎಚ್. ಕೊಡ್ಲಿವಾಡ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts