More

    ಕೆಎಲ್‌ಇ ಆಸ್ಪತ್ರೆಯಲ್ಲಿ ಯಶಸ್ವಿ ಲಿವರ್ ಕಸಿ

    ಬೆಳಗಾವಿ: ಈಗಾಗಲೇ 50ಕ್ಕೂ ಹೆಚ್ಚು ಕಿಡ್ನಿ ಕಸಿ, 8 ಹೃದಯ ಕಸಿ ಮಾಡಿ ಜನರ ಜೀವ ರಕ್ಷಣೆಯಲ್ಲಿ ತೊಡಗಿರುವ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರವು ಇದೀಗ ಉತ್ತರ ಕರ್ನಾಟಕ, ಗೋವಾ ಹಾಗೂ ದ. ಮಹಾರಾಷ್ಟ್ರ ಭಾಗದಲ್ಲಿ ಪ್ರಪ್ರಥಮ ಬಾರಿಗೆ ಲೀವರ್ ಕಸಿ ಮಾಡುವ ಮೂಲಕ ಆಸ್ಪತ್ರೆಯು ಮತ್ತೊಂದು ಮೈಲುಗಲ್ಲು ಸಾಸಿದೆ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಹೇಳಿದರು.

    ಆಸ್ಪತ್ರೆಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಥಣಿಯ ಡಾ.ರವಿ ಪಾಂಗಿ ಅವರ ಅನ್ನಪೂರ್ಣ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದ 30 ವರ್ಷದ ವ್ಯಕ್ತಿಯ ಮಿದುಳು ನಿಷ್ಕ್ರಿಯಗೊಂಡಿತ್ತು. ಕುಟುಂಬಸ್ಥರ ಮನವೊಲಿಸಿ 19 ವರ್ಷದ ಯುವಕನಿಗೆ ಲಿವರ್ ಮರುಜೋಡಿಸುವಲ್ಲಿ ಕೆಎಲ್‌ಇ ಆಸ್ಪತ್ರೆಯ ತಜ್ಞ ವೈದ್ಯರು ಯಶಸ್ವಿಯಾಗಿದ್ದು, ಯುವಕ ಸಂಪೂರ್ಣವಾಗಿ ಗುಣಮುಖಗೊಂಡು 10 ದಿನಗಳ ಬಳಿಕ ಆಸ್ಪತ್ರೆಯಿಂದ ಬಿಡುಗಡೆಗೊಳ್ಳುತ್ತಿದ್ದಾನೆ ಎಂದರು.

    ಆಸ್ಪತ್ರೆಯ ಗ್ಯಾಸ್ಟ್ರೋ ಎಂಟ್ರಾಲಾಜಿ ವಿಭಾಗದ ಡಾ.ಸಂತೋಷ ಹಜಾರೆ ಹಾಗೂ ಡಾ.ಸುದರ್ಶನ ಚೌಗುಲೆ ನೇತೃತ್ವದಲ್ಲಿ ಬೆಂಗಳೂರಿನ ಅಸ್ಟರ್ ಆಸ್ಪತ್ರೆಯ ಡಾ.ಸೋನಲ್ ಆಸ್ಥಾನಾ, ಅರಿವಳಿಕೆ ತಜ್ಞವೈದ್ಯ ಡಾ.ಅರುಣ, ಡಾ.ರಾಜೇಶ ಮಾನೆ, ಡಾ.ಮಂಜುನಾಥ ಪಾಟೀಲ ಅವರನ್ನೊಳಗೊಂಡ ತಂಡ ಲೀವರ್ ಕಸಿಯಲ್ಲಿ ಸಾಧನೆಗೈದಿದೆ. ಜೀವ ಸಾರ್ಥಕತೆ, ಮೋಹನ್ ೌಂಡೇಷನ್ ಹಾಗೂ ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆಯ ಕಸಿ ಸಂಯೋಜಕರ ತಂಡದ ಅಗತ್ಯ ಸಹಕಾರ, ಬೆಂಬಲ ನೀಡಿದೆ ಎಂದು ತಿಳಿಸಿದರು.

    ಮೆಟ್ರೊ ಪಾಲಿಟಿನ್ ನಗರಗಳ ಆಸ್ಪತ್ರೆಗೆ ಹೋಲಿಸಿದರೆ ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಕೇವಲ ಶೇ.50 ವೆಚ್ಚದಲ್ಲಿ ಅಂಗಾಂಗ ಕಸಿ ಶಸಚಿಕಿತ್ಸೆಯನ್ನು ನೆರವೇರಿಸಲಾಗುತ್ತಿದೆ. ಮುಂದಿನ 3 ತಿಂಗಳಲ್ಲಿ ಆಸ್ಪತ್ರೆಯಲ್ಲಿ ಲಂಗ್ಸ್ ಕಸಿಯೂ ನಡೆಯಲಿದೆ ಎಂದ ಅವರು, ಅಂಗಾಂಗ ಕಸಿಗೆ ಆರೋಗ್ಯ ಕರ್ನಾಟಕ ಹಾಗೂ ಆಯುಷ್ಮಾನ್ ಭಾರತ, ಕಾರ್ಮಿಕ ವಿಮೆ (ಇಎಸ್‌ಐ) ಹಾಗೂ ಇನ್ನಿತರ ವಿಮೆ ಯೋಜನೆಗಳಲ್ಲಿ ಧನಸಹಾಯ ಲಭ್ಯವಿದೆ. ಮಿದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ಅಂಗಾಂಗಗಳನ್ನು ಅವರ ಕುಟುಂಬಸ್ಥರು ದಾನ ಮಾಡಿ ಕನಿಷ್ಠ ಐದಾರು ಜನರ ಜೀವ ಉಳಿಸಿ, ಆ ಕುಟುಂಬಕ್ಕೆ ಬೆಳಕಾಗಬಹುದು. ವೌಢ್ಯದಿಂದ ಅಂಗಾಂಗ ದಾನ ಮಾಡದೆ ಸುಡುವುದು ಹಾಗೂ ಮಣ್ಣು ಮಾಡುವ ಮೂಲಕ ವ್ಯರ್ಥಗೊಳಿಸುವುದು ಬೇಡ ಎಂದು ಜನರಲ್ಲಿ ಮನವಿ ಮಾಡಿದರು.
    ಮೆಟ್ರೋ ನಗರಗಳಿಗೆ ಮಾತ್ರ ಸೀಮಿತವಾಗಿದ್ದ ಅಂಗಾಂಗ ದಾನ ಮತ್ತು ಕಸಿ ಶಸಚಿಕಿತ್ಸೆಯು ದ್ವಿತೀಯ ಹಂತದ ನಗರಗಳಲ್ಲಿಯೂ ಸುಲಭವಾಗಿ ನಡೆಯುತ್ತಿದೆ. ಈ ಭಾಗದ ಜನರ ಜೀವ ರಕ್ಷಣೆಗಾಗಿ ದೊಡ್ಡ ನಗರಗಳಲ್ಲಿಮ ವೆಚ್ಚಕ್ಕಿಂತ ಶೇ.50ರಷ್ಟು ಕಡಿಮೆ ದರದಲ್ಲಿ ಸೌಲಭ್ಯ ಒದಗಿಸಲಾಗುತ್ತಿದೆ ಎಂದು ವಿವರಿಸಿದರು. ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ.ಎಂ.ವಿ.ಜಾಲಿ ಮಾತನಾಡಿ, ಅತ್ಯಂತ ಕಡಿಮೆ ದರದಲ್ಲಿ ನಮ್ಮ ಜನರಿಗೆ ಈ ವೈದ್ಯಕೀಯ ಸೌಲಭ್ಯ ಲಭಿಸುವಂತೆ ಮಾಡುವುದು ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರ ಕನಸಾಗಿತ್ತು. ಅದರಂತೆ ಅತ್ಯಂತ ಕಡಿಮೆ ವೆಚ್ಚದಲ್ಲಿ ವೈದ್ಯಕೀಯ ಸೇವೆಯೊಂದಿಗೆ ಅಂಗಾಂಗ ಕಸಿ ಶಸಚಿಕಿತ್ಸೆ ನೆರವೇರಿಸಲಾಗುತ್ತಿದೆ. ಬಹುವಿಧ ಅಂಗಾಂಗ ಘಟಕದ ಅಧ್ಯಕ್ಷರಾದ ಡಾ.ಆರ್. ಬಿ.ನೇರ್ಲಿ ಹಾಗೂ ಬೆಂಗಳೂರಿನ ಆಸ್ಟರ್ ಆಸ್ಪತ್ರೆಯ ಸಹಯೋಗದೊಂದಿಗೆ ಅಗತ್ಯವಾದ ಮೂಲ ಸೌಲಭ್ಯ, ಸಿಬ್ಬಂದಿಗೆ ವಿಶೇಷ ತರಬೇತಿ ನೀಡಿ, ಜ್ಞಾನಾಧಾರಿತ ಕೌಶಲ ಒದಗಿಸಲಾಗುತ್ತಿದೆ ಎಂದರು.

    ನನಗೆ ಲಿವರ್ ನೀಡಿದ ವ್ಯಕ್ತಿಯ ಕುಟುಂಬಕ್ಕೆ ನಾನು ಕೃತಜ್ಞನಾಗಿರುತ್ತೇನೆ. ಮಿದುಳು ನಿಷ್ಕ್ರಿಯಗೊಂಡವರ ಅಂಗಾಂಗಗಳನ್ನು ದಾನ ಮಾಡುವುದರಿಂದ ನನ್ನಂಥ ಐದಾರು ಜನರಿಗೆ ಪುನರ್ಜನ್ಮ ಸಿಗುತ್ತದೆ. ಈ ಮೊದಲು ಅಂಗಾಂಗ ಕಸಿಗಾಗಿ ಬೆಂಗಳೂರು, ಮುಂಬೈ ಮತ್ತು ಹೈದರಾಬಾದನಂತಹ ಮಹಾನಗರಗಳಿಗೆ ತೆರಳಿದರೆ ಅತ್ಯಕ ವೆಚ್ಚ ಭರಿಸಬೇಕಾಗುತ್ತಿತ್ತು. ಆ ಪರದಾಟ ಕೆಎಲ್‌ಇ ಆಸ್ಪತ್ರೆಯಿಂದ ತಪ್ಪಿದೆ.
    | ಲಿವರ್ ಕಸಿ ಮಾಡಿಸಿಕೊಂಡ ಹಾವೇರಿಯ ಯುವಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts