More

    ಕೆಎಲ್​ಇ ವಿವಿಗೆ ಹ್ಯಾಕಥಾನ್ ಪ್ರೖೆಜ್

    ಹುಬ್ಬಳ್ಳಿ: ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ 2020 ರಾಷ್ಟ್ರಮಟ್ಟದ ಸ್ಪರ್ಧೆಯ ಹಾರ್ಡ್ ವೇರ್ ಆವೃತ್ತಿಯ ಬಹುಮಾನವನ್ನು ಇಲ್ಲಿಯ ಪ್ರತಿಷ್ಠಿತ ಕೆಎಲ್​ಇ ತಾಂತ್ರಿಕ ವಿಶ್ವವಿದ್ಯಾಲಯ ಗೆದ್ದುಕೊಂಡಿದೆ.

    ಆಟೋಮೇಷನ್, ರೋಬೋಟಿಕ್ಸ್ ಮತ್ತು ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಒಟ್ಟು 6 ವಿದ್ಯಾರ್ಥಿಗಳ ತಂಡ ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿತ್ತು.

    ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಇಲಾಖೆಯು ನೀಡಿದ ‘ನಿರ್ವಣೋದ್ಯಮಕ್ಕೆ ಅಗ್ನಿ ಶಾಮಕ ಮೂಲ ಸೌಕರ್ಯ’ ಎಂಬ ವಿಷಯ(ಸಮಸ್ಯೆ)ವನ್ನು ತಂಡ ಆಯ್ಕೆ ಮಾಡಿಕೊಂಡಿತ್ತು.

    ಎತ್ತರದ, ಬಹುಮಹಡಿ ಕಟ್ಟಡ ಗಳಲ್ಲಿ ಅಗ್ನಿ ಅನಾಹುತ ಸಂಭವಿಸಿದಾಗ ರಕ್ಷಣಾ ಕಾರ್ಯಾಚರಣೆಗೆ, ತಂತ್ರಜ್ಞಾನ ಅಳವಡಿಕೆಯ ಸಾಧನ ಬಳಕೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಬೆಂಕಿಯ ಉರಿ ತಡೆದುಕೊಳ್ಳುವ ಮತ್ತು ಬೆಂಕಿ ಉರಿಯುತ್ತಿರುವಾಗಲೇ ಕಟ್ಟಡ/ಕೋಣೆಯೊಳಗೆ ಚಲಿಸಬಲ್ಲ ಯಂತ್ರಾಂಶ ಸಾಧನವನ್ನು ವಿನ್ಯಾಸಗೊಳಿಸಬೇಕು. ಇದು ಬೆಂಕಿಯನ್ನು ನಂದಿಸುವ ಸಾಮರ್ಥ್ಯ ಹೊಂದಿರಬೇಕು, ಬದುಕುಳಿದವರನ್ನು ಗುರುತಿಸಿ, ಅವರ ಸುತ್ತ ಬೆಂಕಿಯನ್ನು ನಿಯಂತ್ರಿಸಿ ರಕ್ಷಿಸುವ ರಿಮೋಟ್ ನಿಯಂತ್ರಿತ ಸಾಧನವೂ ಆಗಿರಬಹುದು ಎಂದು ತಿಳಿಸಲಾಗಿತ್ತು.

    ಬಿವಿಬಿ ತಾಂತ್ರಿಕ ವಿವಿ ತಂಡವು, ಈ ಸಮಸ್ಯೆಗೆ ರೋಬಾಟ್ ಸೂಕ್ತ ಪರಿಹಾರವಾಗುತ್ತದೆ ಎಂದು ಪ್ರಸ್ತಾಪಿಸಿ, ರಿಮೋಟ್​ನಿಂದ ಕಾರ್ಯ ನಿರ್ವಹಿಸುವಂತೆ ವಿನ್ಯಾಸಗೊಳಿಸಿ ಸಲ್ಲಿಸಿತ್ತು. ರೋಬಾಟ್ ಅನ್ನು ಮುಖ್ಯ ಸಂಸ್ಕರಣಾ ಘಟಕ, ಕ್ಯಾಮರಾಗಳು ಮತ್ತು ಒಂದು ಸಾಮಾನ್ಯ, ಒಂದು ಅಚ್ಚ ಕೆಂಪು ಭಾಗವಾಗಿ ಸಂಯೋಜಿಸಲಾಗಿದೆ. ಇದರಲ್ಲಿ ಅಗ್ನಿಶಾಮಕ ಉಪಕರಣ ಅಳವಡಿಸಲಾಗಿದೆ. ಆರಂಭದಲ್ಲಿ ಸ್ಪ್ರಿಂಗ್ ಆಧರಿತ ಲಾಂಚರ್ ಸಿಡಿಸುವ ಅಗ್ನಿಶಾಮಕ ಬಾಲ್​ಗಳು ಉರಿಯುತ್ತಿರುವ ಬೆಂಕಿಯನ್ನು ಅತಿ ಕಡಿಮೆ ಅವಧಿಯಲ್ಲಿ ನಂದಿಸುವ ಮೂಲಕ ಜೀವರಕ್ಷಕ ಕಾರ್ಯಾಚರಣೆಗೆ ಅನುವು ಮಾಡಿ ಕೊಡುತ್ತವೆ. ನಂತರದಲ್ಲಿ ಸಾಂಪ್ರದಾಯಿಕವಾಗಿ ಅಗ್ನಿ ನಿರೋಧಕಗಳ ಸಿಂಪರಣೆಯನ್ನೂ ಮಾಡಲಾಗುತ್ತದೆ. ಈ ರೀತಿಯಲ್ಲಿ ಕೆಎಲ್​ಇ ವಿವಿ ತಂಡ ರೂಪಿಸಿ ಸಾದರಪಡಿಸಿದ ಪರಿಹಾರವು ಹೊಸತನದಿಂದ ಕೂಡಿದ್ದು, ಅಗ್ನಿ ಅವಘಡಗಳ ಸಂದರ್ಭದಲ್ಲಿ ಜೀವ ಮತ್ತು ಆಸ್ತಿ ರಕ್ಷಣೆಗೆ ಹೆಚ್ಚು ಪೂರಕ ವಾಗಿರುವುದರಿಂದ ಪ್ರತಿಷ್ಠಿತ ಬಹುಮಾನ ದೊರೆತಿದೆ. ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ವಿಜೇತರಾಗಿರುವುದಕ್ಕೆ ಹೆಮ್ಮೆ ಎನಿಸುತ್ತದೆ ಎಂದು ವಿವಿಯ ಆಟೊಮೇಷನ್ ಮತ್ತು ರೋಬೋಟಿಕ್ಸ್ ವಿಭಾಗ ಮುಖ್ಯಸ್ಥ ಪ್ರೊ. ಅರುಣ ಗಿರಿಯಾಪುರ ಹೇಳಿದ್ದಾರೆ.

    ಇಂಥ ಸ್ಪರ್ಧೆಗಳು ನಮ್ಮ ವಿದ್ಯಾರ್ಥಿಗಳು ಪಠ್ಯಕ್ರಮ ಹಾಗೂ ದೈನಂದಿನ ಪ್ರಾಜೆಕ್ಟ್​ಗಳಿಗಿಂತ ಆಚೆಗೆ ಯೋಚಿಸುವಂತೆ ಮಾಡುತ್ತವೆ. ನೈಜ ಜಗತ್ತಿನ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವ ಸಾಮರ್ಥ್ಯ ಗಳಿಸಿ ಕೊಳ್ಳಲು ನೆರವಾಗುತ್ತವೆ ಎಂದು ಅವರು ಹೇಳಿರುವುದಾಗಿ ವಿವಿ ಬ್ರಾಂಡಿಂಗ್ ಮತ್ತು ಮಾರ್ಕೆಟಿಂಗ್ ನಿರ್ದೇಶಕ ಎಂ.ಎಸ್. ಕೊಲ್ಹಾರ ತಿಳಿಸಿದ್ದಾರೆ.

    ರಾಷ್ಟ್ರವ್ಯಾಪಿ ಉಪಕ್ರಮ

    ದೈನಂದಿನ ಜೀವನದಲ್ಲಿ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳನ್ನು ಪರಿಹರಿಸಲು ವಿದ್ಯಾರ್ಥಿಗಳಿಗೆ ವೇದಿಕೆ ಒದಗಿಸುವ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ಒಂದು ರಾಷ್ಟ್ರವ್ಯಾಪಿ ಉಪಕ್ರಮ. ಯುವಜನರಲ್ಲಿ, ವಿಶೇಷವಾಗಿ ಇಂಜಿನಿಯರಿಂಗ್ ವಿದ್ಯಾರ್ಥಿಗಳಲ್ಲಿ ಹೊಸತನದ ಚಿಂತನೆಯನ್ನು ಹ್ಯಾಕಥಾನ್ ಮೂಲಕ ಉತ್ತೇಜಿಸಲಾಗುತ್ತದೆ.

    ಹಾರ್ಡ್​ವೇರ್ ಮತ್ತು ಸಾಫ್ ್ಟೇರ್ ಆವೃತ್ತಿಗಳಲ್ಲಿ ಸಮಸ್ಯೆಗಳನ್ನು ನೀಡಲಾಗುತ್ತದೆ. ತ್ಯಾಜ್ಯ ನಿರ್ವಹಣೆ, ರೋಬೋಟಿಕ್ಸ್, ಡ್ರೋನ್, ಶುದ್ಧ ನೀರು, ನವೀಕರಿಸಬಹುದಾದ ಇಂಧನ, ಭದ್ರತೆ ಮತ್ತು ಕಣ್ಗಾವಲು, ಆರೋಗ್ಯ ರಕ್ಷಣೆ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಹೀಗೆ ವಿವಿಧ ವಿಷಯಗಳನ್ನು ಈ ಸಲ ಕೊಡಲಾಗಿತ್ತು. 2020ರ ಜನವರಿಯಲ್ಲಿ ಪ್ರಾರಂಭವಾದ ಸ್ಪರ್ಧೆಯನ್ನು ವಿವಿಧ ಸುತ್ತುಗಳಲ್ಲಿ ನಡೆಸಿ, ಇತ್ತೀಚೆಗೆ ಫಲಿತಾಂಶ ಘೊಷಿಸಲಾಯಿತು.

    ಪಾಲ್ಗೊಂಡ ವಿದ್ಯಾರ್ಥಿಗಳá-, ವಿಭಾಗಗಳು

    ಪೂರ್ಣಾದಿತ್ಯ ಮಿಶ್ರಾ (ಕ್ಯಾಪ್ಟನ್) – ಆಟೊಮೇಷನ್ ಮತ್ತು ರೋಬೋಟಿಕ್ಸ್

    ಪೃಥ್ವಿ ದೇಶಪಾಂಡೆ – ಆಟೊಮೇಷನ್ ಮತ್ತು ರೋಬೋಟಿಕ್ಸ್

    ಆಲ್ವಿನ್ ಎಂ. ರೆಜಿ – ಆಟೊಮೇಷನ್ ಮತ್ತು ರೋಬೋಟಿಕ್ಸ್

    ಹರಿಪ್ರಿಯಾ ಜಗದೀಶ – ಆಟೊಮೇಷನ್ ಮತ್ತು ರೋಬೋಟಿಕ್ಸ್

    ಸ್ವರೂಪ ಶೆಣೈ – ಮೆಕ್ಯಾನಿಕಲ್ ಇಂಜಿನಿಯರಿಂಗ್

    ಗೌತಮ ಮುರಳೀಧರ – ಮೆಕ್ಯಾನಿಕಲ್ ಇಂಜಿನಿಯರಿಂಗ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts