More

    ಕೆಎಲ್‌ಇ ಸಂಸ್ಥೆಯ ಶೈಕ್ಷಣಿಕ ಕೊಡುಗೆ ಅಪಾರ

    ಅಥಣಿ: ಕೆಎಲ್‌ಇ ಸಂಸ್ಥೆ ಕರ್ನಾಟಕದಲ್ಲಿ ದೊಡ್ಡ ಶಿಕ್ಷಣ ಸಂಸ್ಥೆಯಾಗಿ ಹೊರಹೊಮ್ಮಿದ್ದು, ಸಂಸ್ಥೆಯ ಕೀರ್ತಿ ಸಪ್ತರ್ಷಿಗಳಿಗೆ ಸಲ್ಲುತ್ತದೆ ಎಂದು ನಿಪ್ಪಾಣಿಯ ಜಿ.ಐ.ಬಾಗೇವಾಡಿ ಮಹಾವಿದ್ಯಾಲಯದ ಪ್ರೊ.ವಿಜಯ ಧಾರವಾಡ ಹೇಳಿದರು.

    ಸ್ಥಳೀಯ ಎಸ್.ಎಂ.ಎಸ್ ಮಹಾವಿದ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕೆಎಲ್‌ಇ ಸಂಸ್ಥೆಯ 107ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ಶಿಕ್ಷಣದ ಕ್ಷೇತ್ರ ವಿಸ್ತರಿಸುವಲ್ಲಿ ಪ್ರಮುಖ ಸ್ಥಾನ ಪಡೆದಿರುವ ಕೆಎಲ್‌ಇ ಶಿಕ್ಷಣ ಸಂಸ್ಥೆಯು ಅಂತಾರಾಷ್ಟ್ರೀಯ ಮಟ್ಟದಲ್ಲೂ ಗುರುತಿಸಿಕೊಂಡಿದೆ ಎಂದರು.

    ಸ್ಥಾನಿಕ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಡಾ.ಮಲ್ಲಿಕಾರ್ಜುನ ಹಂಜಿ ಮಾತನಾಡಿ, ಶೈಕ್ಷಣಿಕ, ವೈದ್ಯಕೀಯ ಕ್ಷೇತ್ರದೊಂದಿಗೆ ಸಹಕಾರಿ, ಕೃಷಿ ಕ್ಷೇತ್ರದಲ್ಲಿ ಕೆ.ಎಲ್.ಇ ಸಂಸ್ಥೆ ಪ್ರಗತಿಪಥದಲ್ಲಿದೆ. ಅದಕ್ಕೆ ಸಪ್ತರ್ಷಿಗಳ ಕೊಡುಗೆ ಮತ್ತು ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ದೂರದೃಷ್ಟಿ ಕಾರಣ ಎಂದರು. ಆಡಳಿತ ಮಂಡಳಿ ಸದಸ್ಯರು, ದಾನಿಗಳು, ಕೆ.ಎಲ್.ಇ ಸಂಸ್ಥೆಯ ಎಲ್ಲ ಅಂಗ ಸಂಸ್ಥೆಗಳ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

    ಸಿ.ಬಿ.ರಣಮೋಡೆ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯರು ಪ್ರಾರ್ಥನೆ ಗೀತೆ ಹಾಡಿದರು. ಪ್ರಾಚಾರ್ಯ ಡಾ. ಬಿ.ಎಸ್.ಕಾಂಬಳೆ ಸ್ವಾಗತಿಸಿದರು. ಪ್ರೊ.ಪಿ.ಎ. ನಾಯಿಕ ಪರಿಚಯಿಸಿದರು. ಎಸ್.ಜಿ.ಸಲಗರೆ ವಂದಿಸಿದರು. ಪ್ರೊ. ಮಾರುತಿ ಬಿ. ಮತ್ತು ಡಾ. ಆರ್.ಎನ್.ಇನಾಮದಾರ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts