More

    ಕೆಎಂಎಪ ಯೋಜನೆಗಳ ಲಾಭ ಪಡೆದುಕೊಳ್ಳಿ

    ಗೋಕಾಕ: ಕೆಎಂಎ್ನಿಂದ ರೈತ ಸಮುದಾಯಕ್ಕೆ ಹಲವು ಯೋಜನೆ ಅನುಷ್ಠಾನಗೊಳಿಸಿದ್ದು, ರೈತರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕೆಎಂಎ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.

    ಇಲ್ಲಿನ ಎನ್‌ಎಸ್‌ಎ್ ಅತಿಥಿ ಗೃಹದಲ್ಲಿ ಜಿಲ್ಲಾ ಹಾಲು ಒಕ್ಕೂಟದಿಂದ ಶುಕ್ರವಾರ ರೈತರಿಗೆ ರಾಸುಗಳ ವಿಮೆ ಚೆಕ್ ವಿತರಿಸಿ ಮಾತನಾಡಿದ ಅವರು, ರೈತರ ಆರ್ಥಿಕ ಅಭಿವದ್ಧಿಗೆ ಕೆಎಂಎ್ ಬದ್ಧವಿದೆ. ರೈತರಿಗೆ ಬೇಕಾಗಿರುವ ಎಲ್ಲ ಸವಲತ್ತು ನೀಡುತ್ತಿದೆ ಎಂದರು.

    ರೈತರಿಗೆ ಅವಶ್ಯವಿರುವ ಮೇವು ಕತ್ತರಿಸುವ ಯಂತ್ರ, ರಬ್ಬರ್ ಮ್ಯಾಟ್ ಗೋಕಾಕ ಮತ್ತು ಮೂಡಲಗಿ ತಾಲೂಕುಗಳ ಹಾಲು ಉತ್ಪಾದಕರ ಸಹಕಾರಿ ಸಂಘಗಳಿಗೆ ನೀಡಲಾಗುವುದು. ರಬ್ಬರ್ ಮ್ಯಾಟ್‌ಗಳನ್ನು ಎಲ್ಲ ಸಂಘಗಳಿಗೂ ನೀಡುವ ವ್ಯವಸ್ಥೆ ಮಾಡಲಾಗುವುದು. ರಾಸುಗಳು ಮತಪಟ್ಟಲ್ಲಿ ಅವುಗಳಿಗೆ ವಿಮಾ ಸೌಲಭ್ಯವನ್ನು ಸಹ ನೀಡಲಾಗುತ್ತಿದೆ ಎಂದು ತಿಳಿಸಿದರು.

    12 ರೈತರಿಗೆ ತಲಾ 50 ಸಾವಿರ ರೂ.ಗಳ ರಾಸು ವಿಮೆ ಚೆಕ್, 1.35 ಲಕ್ಷ ರೂ. ಮೊತ್ತದ 12 ಲಾನುಭವಿಗಳು ಸೇರಿ ಒಟ್ಟು 7.35 ಲಕ್ಷ ರೂ.ಗಳ ರೈತ ಕಲ್ಯಾಣ ಸಂಘದ ಚೆಕ್ ಹಾಗೂ ರಬ್ಬರ್ ಮ್ಯಾಟ್, ಮೇವು ಕತ್ತರಿಸುವ ಯಂತ್ರ ವಿತರಿಸಿದರು.

    ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಮಲ್ಲು ಪಾಟೀಲ, ಸವಿತಾ ಖಾನಪ್ಪನವರ, ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ, ಜಿಪಂ ಮಾಜಿ ಸದಸ್ಯ ರಾಜೇಂದ್ರ ಸಣ್ಣಕ್ಕಿ, ಮುತ್ತೆಪ್ಪ ಕುಳ್ಳೂರ, ಜಿಲ್ಲಾ ಹಾಲು ಒಕ್ಕೂಟದ ವ್ಯವಸ್ಥಾಪಕ ವೆಂಕಟೇಶ ಜೋಶಿ, ವಿಸ್ತರಣಾಧಿಕಾರಿ ಎಸ್.ಬಿ.ಕರಬನ್ನವರ, ರವಿ ತಳವಾರ, ವಿಠ್ಠಲ ಲೋಕುರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts