More

    ಕೃಷಿ ಯಂತ್ರಧಾರೆ ಯೋಜನೆ ಪ್ರಯೋಜನ ಪಡೆಯಿರಿ: ರೈತರಿಗೆ ಶಾಸಕ ಎಂ.ಕೃಷ್ಣಾರೆಡ್ಡಿ ಸಲಹೆ

    ಚಿಂತಾಮಣಿ : ಕೃಷಿ ಯಂತ್ರಧಾರೆ ಯೋಜನೆಯಲ್ಲಿ ಸಣ್ಣ ರೈತರಿಗೆ ಅನುಕೂಲವಾಗಲು ಕಡಿಮೆ ದರದಲ್ಲಿ ಕೃಷಿ ಯಂತ್ರೋಪಕರಣಗಳನ್ನು ಬಾಡಿಗೆಗೆ ನೀಡುತ್ತಿದ್ದು, ಯೋಜನೆಯ ಸದುಪಯೋಗ ಪಡೆಯಬೇಕು ಎಂದು ಶಾಸಕ ಎಂ.ಕೃಷ್ಣಾರೆಡ್ಡಿ ಹೇಳಿದರು.

    ತಾಲೂಕಿನ ಕೈವಾರ ಕ್ರಾಸ್‌ನಲ್ಲಿರುವ ಬೈರೇಶ್ವರ ವಿದ್ಯಾಸಂಸ್ಥೆ ಸಮೀಪ ಕೃಷಿ ಇಲಾಖೆ ಮತ್ತು ಚಿತ್ರದುರ್ಗದ ವರ್ಷ ಅಸೋಸಿಯೇಟ್ಸ್ ಸಂಸ್ಥೆ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕೃಷಿ ಯಂತ್ರಧಾರೆ ಕೇಂದ್ರ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಈ ಹಿಂದೆ ಕೃಷಿ ಇಲಾಖೆ ಕೃಷಿ ಯಂತ್ರೋಪಕರಣಗಳನ್ನು ರಿಯಾಯಿತಿ ಧರದಲ್ಲಿ ರೈತರಿಗೆ ಒದಗಿಸುತ್ತಿತ್ತು. ಇದಕ್ಕೆ ಹೆಚ್ಚಿನ ಬಂಡವಾಳ ಅವಶ್ಯಕತೆ ಇತ್ತು. ಆದರೆ, ಈಗ ಬಾಡಿಗೆ ರೂಪದಲ್ಲಿ ಯಂತ್ರೋಪಕರಣ ಪೂರೈಸಲಾಗುತ್ತಿದೆ. ಖಾಸಗಿ ಸಂಸ್ಥೆ ಇದನ್ನು ನಿರ್ವಹಣೆ ಮಾಡುತ್ತಿದ್ದು ಎರಡು ಟ್ರ್ಯಾಕ್ಟರ್ ವ್ಯವಸ್ಥೆಯಾಗಿದೆ. ಒಂದು ಎಕರೆ ಜಮೀನು ಉಳುಮೆ ಮಾಡಲು 700 ರೂಪಾಯಿ ನಿಗದಿಪಡಿಸಿದ್ದು, ಹೆಸರು ನೋಂದಣಿ ಮಾಡಿಸಿ ರೈತರು ಇವುಗಳ ಪ್ರಯೋಜನ ಪಡೆಯಬಹುದು ಎಂದರು.

    ಕೃಷಿ ಉಪ ನಿರ್ದೇಶಕಿ ಎಂ.ಅನುರೂಪ್ ಮಾತನಾಡಿ, ಈ ಭಾಗದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಬೇಕಾಗಿರುವ ಸೌಲಭ್ಯಗಳನ್ನು ಇಲ್ಲಿ ಪಡೆಯಬಹುದು ಎಂದರು.
    ತಾಪಂ ಮಾಜಿ ಸದಸ್ಯ ಸಂತೇಕಲ್ಲಹಳ್ಳಿ ಎಚ್.ನಾರಾಯಣಸ್ವಾಮಿ, ಕೃಷಿಕ ಸಮಾಜ ಅಧ್ಯಕ್ಷ ಗೋವಿಂದಪ್ಪ, ಮುಖಂಡರಾದ ಕೈವಾರ ಸುಬ್ಬಾರೆಡ್ಡಿ, ತಳವಾರ ಗ್ರಾ.ಪಂ ಅಧ್ಯಕ್ಷ ಮಂಜುನಾಥರೆಡ್ಡಿ, ಹೀರೆಕಟ್ಟಿಗೇನಹಳ್ಳಿ ಗಾ.್ರಪಂ. ಅದ್ಯಕ್ಷ ವಿನಯ್ ಬಾಬು, ಬನಹಳ್ಳಿ ಪ್ರದೀಪ್, ಕದಿರೇಗೌಡ, ಕುಪೇಂದ್ರಪ್ಪ, ವರ್ಷ ಅಸೋಸಿಯೇಟ್ ವಲಯ ವ್ಯವಸ್ಥಾಪಕ ಪ್ರಕಾಶ, ಚಿಕ್ಕಬಳ್ಳಾಪುರ ಕೇಂದ್ರ ಅಭಿವೃದ್ಧಿ ಅಧಿಕಾರಿ ರೋಹಿತ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts