More

    ಕೃಷಿ ನೀತಿ ಬದಲಾದರೆ ರೈತರ ಅಭಿವೃದ್ಧಿ

    ಬೋರಗಾಂವ: ರೈತರ ಸಮಗ್ರ ಅಭಿವೃದ್ಧಿಯಾಗಬೇಕಾದರೆ ಕಬ್ಬಿನೊಂದಿಗೆ ಇತರೆ ದವಸ-ಧಾನ್ಯಗಳಿಂದ ಇಥೆನಾಲ್ ಉತ್ಪಾದಿಸುವ ನೀತಿ ಜಾರಿಗೆ ತರಬೇಕಾಗಿದೆ. ಕೃಷಿ ಪ್ರಧಾನ ದೇಶವಾದ ಭಾರತದಲ್ಲಿ ರೈತರ ಅಭಿವೃದ್ಧಿಗೆ ಪೂರಕವಾದ ನೀತಿಗಳನ್ನು ಕೇಂದ್ರ ಸರ್ಕಾರ ಜಾರಿಗೆ ತರುತ್ತಿಲ್ಲ. ದೇಶದಲ್ಲಿ ಕೃಷಿ ನೀತಿ ಬದಲಾದರೆ ರೈತರ ಅಭಿವೃದ್ಧಿ ಸಾಧ್ಯ ಎಂದು ಕೇಂದ್ರದ ಮಾಜಿ ಕೃಷಿ ಸಚಿವ ಶರದ ಪವಾರ ಹೇಳಿದರು.

    ಸಮೀಪದ ಶಿರೋಳ ಪಟ್ಟಣದ ದತ್ತ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಶನಿವಾರ ಆಯೋಜಿಸಿದ್ದ ಸಾ.ರೆ.ಪಾಟೀಲ ಸಮಾಜಭೂಷಣ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿ, ದೇಶದ ಎಲ್ಲ ಸಕ್ಕರೆ ಕಾರ್ಖಾನೆಗಳಿಗೆ ಆರ್ಥಿಕ ಸಮಸ್ಯೆ ಉಂಟಾಗಿದೆ. ತಯಾರಾದ ಸಕ್ಕರೆಗೆ ಯೋಗ್ಯ ಬೆಲೆ ಸಿಗುತ್ತಿಲ್ಲ. ಇದರಿಂದಾಗಿ ಕಬ್ಬಿಗೆ ಎ್ಆರ್‌ಪಿ ನೀಡಲು ಕಷ್ಟವಾಗಿದೆ. ಕೇಂದ್ರ ಸರ್ಕಾರದಿಂದ ಯಾವುದೇ ಹೊಸ ಕೃಷಿ ನೀತಿ ಜಾರಿಗೆ ತರಲಾಗುತ್ತಿಲ್ಲ. ಕೃಷಿ ಕಾಯ್ದೆ ಅಡಿ ಕೇಂದ್ರ ಸರ್ಕಾರವು ರೈತರ ಅಭಿವೃದ್ಧಿ ಮಾಡುವಲ್ಲಿ ವಿಫಲವಾಗಿದೆ ಎಂದರು.

    ಮಾಜಿ ರಾಜ್ಯಪಾಲ ಶ್ರೀನಿವಾಸ ಪಾಟೀಲ ಅವರು ಕೃಷಿ ಸಂಶೋಧಕ ಅಶೋಕ ಭಂಗ ಹಾಗೂ ಶರದ ಪವಾರ ಅವರಿಗೆ ಸಾ.ರೆ.ಪಾಟೀಲ ಸಮಾಜಭೂಷಣ ಪುರಸ್ಕಾರ ನೀಡಿದರು. ಕಾರ್ಖಾನೆ ಅಧ್ಯಕ್ಷ ಗಣಪತರಾವ್ ಪಾಟೀಲ, ಮಹಾರಾಷ್ಟ್ರ ಕಂದಾಯ ಸಚಿವ ಬಾಳಾಸಾಬ ಥೋರಾತ, ನೀರಾವರಿ ಸಚಿವ ಜಯಂತ ಪಾಟೀಲ, ಸಹಕಾರ ಸಚಿವ ಬಾಳಾಸಾಬ ಪಾಟೀಲ, ಗ್ರಾಮಾಭಿವೃದ್ಧಿ ಸಚಿವ ಹಸನ್ ಮುಶ್ರ್, ಆರೋಗ್ಯ ಸಚಿವ ರಾಜೇಂದ್ರ ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ ಸತೇಜ ಪಾಟೀಲ, ಸಂಸದ ಶ್ರೀನಿವಾಸ ಪಾಟೀಲ, ಸಂಜಯ ಮಂಡಲಿಕ, ಪಿ.ಎನ್.ಪಾಟೀಲ, ಡಾ. ಪ್ರಭಾಕರ ಕೋರೆ, ಮಹಾಂತೇಶ ಕವಟಗಿಮಠ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts