More

    ಕೃಷಿ ಕಾಯ್ದೆ ವಿರೋಧಿಸಿ ಟ್ರ್ಯಾಕ್ಟರ್ ರ‍್ಯಾಲಿ

    ಧಾರವಾಡ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ಆಗ್ರಹಿಸಿ ವಿವಿಧ ರೈತಪರ ಸಂಘಟನೆ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತ್ಯೇಕ ಟ್ರಾ್ಯಕ್ಟರ್ ರ್ಯಾಲಿಗಳನ್ನು ನಡೆಸಿದರು.

    ರೈತ- ಕೃಷಿ ಕಾರ್ವಿುಕರ ಸಂಘಟನೆ (ಆರ್​ಕೆಎಸ್), ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ರೈತ- ದಲಿತ ಕಾರ್ವಿುಕ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಟ್ರ್ಯಾಕ್ಟರ್ ರ‍್ಯಾಲಿ ನಡೆಸಲಾಯಿತು. ಕಲಾಭವನದಿಂದ ಆರಂಭಗೊಂಡ ಟ್ರಾ್ಯಕ್ಟರ್ ರ‍್ಯಾಲಿ ಹಳೇ ಬಸ್ ನಿಲ್ದಾಣ, ವಿವೇಕಾನಂದ ವೃತ್ತ, ಕೆಸಿಸಿ ಬ್ಯಾಂಕ್ ವೃತ್ತ, ಗಾಂಧಿ ಚೌಕ್, ಭೂಸಪ್ಪ ವೃತ್ತ, ಲೈನ್​ಬಜಾರ್ ಮೂಲಕ ಜುಬಿಲಿ ವೃತ್ತದಲ್ಲಿ ಸಮಾವೇಶಗೊಂಡು ಬಹಿರಂಗ ಸಭೆ ನಡೆಸಲಾಯಿತು.

    ಆರ್​ಕೆಎಸ್ ಖಜಾಂಚಿ ವಿ. ನಾಗಮ್ಮಳ್ ಮಾತನಾಡಿ, ಕೇಂದ್ರ ಸರ್ಕಾರ ಕರಾಳ ಕೃಷಿ ಕಾನೂನುಗಳನ್ನು ಹಿಂಪಡೆಯಬೇಕು. ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಬೇಕು. ವಿದ್ಯುತ್ ಕಾಯ್ದೆ ತಿದ್ದುಪಡಿ ಕೈಬಿಡಬೇಕು ಎಂದು ಆಗ್ರಹಿಸಿದರು.

    ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಸಂಘಟನಾ ಕಾರ್ಯದರ್ಶಿ ನಾಗಪ್ಪ ಉಂಡಿ, ಜಿಲ್ಲಾಧ್ಯಕ್ಷ ಈರಣ್ಣ ಬಳಿಗೇರ, ಆರ್​ಕೆಎಸ್ ಜಿಲ್ಲಾ ಕಾರ್ಯದರ್ಶಿ ಶರಣಬಸವ ಗೊನವಾರ, ಸಿಟಿಜನ್ಸ್ ಫಾರ್ ಡೆಮಾಕ್ರಸಿ ಕರ್ನಾಟಕದ ಕಾರ್ಯದರ್ಶಿ ಡಾ. ವೆಂಕನಗೌಡ ಪಾಟೀಲ, ಕಳಸಾ ಬಂಡೂರಿ ಹೋರಾಟಗಾರರಾದ ಲಕ್ಷ್ಮಣ ಬಕ್ಕಾಯಿ, ಸಲೀಂ ಸಂಗನಮುಲ್ಲಾ, ಇತರರಿದ್ದರು.

    ರೈತಪರ ಸಮಾನ ಮನಸ್ಕ ಸಂಘಟನೆಗಳಿಂದ: ಕೃಷಿ ಕಾಯ್ದೆ ವಿರೋಧಿಸಿ ವಿವಿಧ ರೈತಪರ ಸಮಾನ ಮನಸ್ಕ ಸಂಘಟನೆಗಳಿಂದ ಟ್ರಾ್ಯಕ್ಟರ್ ರ‍್ಯಾಲಿ ನಡೆಸಲಾಯಿತು. ಕಲಾಭವನ ಮೈದಾನದಲ್ಲಿ ಜಮಾವಣೆಗೊಂಡ ಹೋರಾಟಗಾರರು, ಕೃಷಿ ಕಾಯ್ದೆ ವಾಪಸ್ ಪಡೆಯಲು ಒತ್ತಾಯಿಸಿದರು. ಕಲಾಭವನದಿಂದ ಹೈಕೋರ್ಟ್ ಪಕ್ಕದ ಮೈದಾನದವರೆಗೆ ಟ್ರಾ್ಯಕ್ಟರ್ ರ‍್ಯಾಲಿ ಮೂಲಕ ತೆರಳಿ ಬಹಿರಂಗ ಸಭೆ ನಡೆಸಲಾಯಿತು. ಪ್ರೊ. ಐ.ಜಿ. ಸನದಿ, ಬಾಬಾಗೌಡ ಪಾಟೀಲ, ಶಿವಾನಂದ ಹೊಳೆಹಡಗಲಿ, ಡಾ. ಜಿ.ಎನ್. ದೇವಿ, ಪಿ.ಎಚ್. ನೀರಲಕೇರಿ, ಶಂಕರ ಹಲಗತ್ತಿ, ಶಿವಾನಂದ ಹೊಳೆಹಡಗಲಿ, ಶಾಕೀರ ಸನದಿ, ಗಂಗಾಧರ ಪಾಟೀಲ ಕುಲಕರ್ಣಿ, ಬಿ.ಎಸ್. ಸೊಪ್ಪಿನ, ಶಿವಾನಂದ ಅಂಬಡಗಟ್ಟಿ, ಶಾರದಾ ದಾಬಡೆ, ಪ್ರಕಾಶ ಗರುಡ ಹಾಗೂ ನೂರಾರು ರೈತರು ಪಾಲ್ಗೊಂಡಿದ್ದರು.

    ಟ್ರಾಫಿಕ್ ಜಾಮ್: ರೈತರ ರ‍್ಯಾಲಿ ಸುಗಮವಾಗಿ ಹೊರಟಿತ್ತು. ಆದರೆ, ಪೊಲೀಸರು ಇಂತಿಷ್ಟೇ ಟ್ರಾ್ಯಕ್ಟರ್ ಎಂದು ಹೇಳುತ್ತಿದ್ದಂತೆ ಕಾಂಗ್ರೆಸ್ ಮುಖಂಡರು ಆಕ್ರೋಶಗೊಂಡು ಪ್ರತಿಭಟನೆಗೆ ಇಳಿದಿದ್ದರಿಂದ ಕೆಲಕಾಲ ರಸ್ತೆ ಸಂಚಾರಕ್ಕೆ ಅಡ್ಡಿ ಉಂಟಾಯಿತು. ನೂರಾರು ಟ್ರಾ್ಯಕ್ಟರ್ ಹಾಗೂ ರೈತರು ಸೇರಿದ್ದರಿಂದ ಗೊಂದಲ ಏರ್ಪಟ್ಟಿತ್ತು.

    ಅಮರಗೋಳದಿಂದ ಧಾರವಾಡಕ್ಕೆ: ಕಾಂಗ್ರೆಸ್ ಮುಖಂಡರ ನೇತೃತ್ವದಲ್ಲಿ ಅಮರಗೋಳದಿಂದ ಧಾರವಾಡವರೆಗೆ ರ‍್ಯಾಲಿ ನಡೆಸಲಾಯಿತು.

    ಹು-ಧಾ ಪಶ್ಚಿಮ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಅಮರಗೋಳ, ಗಾಮನಗಟ್ಟಿ, ರಾಯಾಪುರ ಸೇರಿ ವಿವಿಧೆಡೆಯ ನೂರಾರು ರೈತರು ಟ್ರಾ್ಯಕ್ಟರ್​ನೊಂದಿಗೆ ರ್ಯಾಲಿಯಲ್ಲಿ ಪಾಲ್ಗೊಂಡರು. ಬೆಳಗ್ಗೆಯಿಂದಲೇ ಅಮರಗೋಳ ಮುಖ್ಯರಸ್ತೆಯಲ್ಲಿ ಸರದಿಯಲ್ಲಿ ಟ್ರಾ್ಯಕ್ಟರ್​ಗಳನ್ನು ನಿಲ್ಲಿಸಲಾಗಿತ್ತು. ಮಧ್ಯಾಹ್ನ 12 ಗಂಟೆ ಹೊತ್ತಿಗೆ ಧಾರವಾಡ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದರು. ಆದರೆ, ಪೊಲೀಸರು 12 ಟ್ರಾ್ಯಕ್ಟರ್​ಗಳಿಗೆ ಮಾತ್ರ ಅವಕಾಶ ಎಂದು ಹೇಳಿದ್ದು, ರೈತರು ಹಾಗೂ ಕಾಂಗ್ರೆಸ್ ಮುಖಂಡರ ಆಕ್ರೋಶಕ್ಕೆ ಕಾರಣವಾಯಿತು. ಕೆಲಕಾಲ ವಾಹನ ಸಂಚಾರ ತಡೆ ನಡೆಸಿದರು. ನಂತರ ಹಂತಹಂತವಾಗಿ ಟ್ರಾ್ಯಕ್ಟರ್​ಗಳು ಹೊರಡಲು ಪೊಲೀಸರು ಅನುವು ಮಾಡಿಕೊಟ್ಟರು.

    ರ್ಯಾಲಿಯು ಧಾರವಾಡ ಡಿ.ಸಿ. ಕಚೇರಿ ಬಳಿ ತಲುಪಿ ಬಹಿರಂಗ ಸಭೆಯಾಗಿ ಮಾರ್ಪಟ್ಟಿತು. ಕೆಪಿಸಿಸಿ ಸದಸ್ಯ ದೀಪಕ ಚಿಂಚೋರೆ ಮಾತನಾಡಿ, ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ, ವಿದ್ಯುತ್ ಕಾಯ್ದೆ ತಿದ್ದುಪಡಿ ಮೂಲಕ ಕೇಂದ್ರ ಸರ್ಕಾರ ರೈತರನ್ನು ಬೀದಿಗೆ ತಂದು ನಿಲ್ಲಿಸುತ್ತಿದೆ. ಈ ಕರಾಳ ಕಾನೂನುಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು. ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗೆ ಮನವಿ ರವಾನಿಸಿದರು. ಇಸ್ಮಾಯಿಲ್ ತಮಟಗಾರ, ಬಸವರಾಜ ಮಲಕಾರಿ, ಬಸವರಾಜ ಕಿತ್ತೂರ, ದೇವಕಿ ಯೋಗಾನಂದ, ಸುಭಾಷ ಶಿಂಧೆ, ಪರಮೇಶ ಕಾಳೆ, ಮಹಾವೀರ ಜೈನ, ಮಹಾವೀರ ಶಿವಣ್ಣವರ, ಮಹೇಶ ಹುಲ್ಲಣ್ಣವರ ಹಾಗೂ ವಿವಿಧ ಗ್ರಾಮಗಳ ರೈತರು ಭಾಗವಹಿಸಿದ್ದರು.

    ಕಾಪೋರೇಟ್ ಕಂಪನಿಗಳಿಗೆ ಮಣೆ: ಕಾಂಗ್ರೆಸ್, ಜೆಡಿಸ್ ಕಾರ್ಯಕರ್ತರು ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಹುಬ್ಬಳ್ಳಿಯಲ್ಲಿ ಟ್ರ್ಯಾಕ್ಟರ್ ಜತೆಗೆ ಚಕ್ಕಡಿ ರ್ಯಾಲಿಯೂ ನಡೆಯಿತು. ನಗರದ ಇಂದಿರಾ ಗಾಜಿನ ಮನೆಯಿಂದ ಹೊರಟ ರ್ಯಾಲಿ, ಬಸವವನ, ಕೋರ್ಟ್ ವೃತ್ತ, ರೈಲ್ವೆ ಸ್ಟೇಷನ್ ವೃತ್ತ ಹಾದು ಚನ್ನಮ್ಮ ವೃತ್ತದಲ್ಲಿ ಸಮಾಪ್ತಿಗೊಂಡಿತು. ರೈತರ ಜೀವ ಹಿಂಡುವ ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಹಿಂಪಡೆಯಬೇಕು. ಕಾಪೋರೇಟ್ ಕಂಪನಿಗಳಿಗೆ ಮಣೆ ಹಾಕುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದೆ ಎಂದು ರ್ಯಾಲಿಯಲ್ಲಿ ಭಾಗವಹಿಸಿದ್ದವರು ಆಕ್ರೋಶ ವ್ಯಕ್ತಪಡಿಸಿದರು.ಶಾಸಕ ಪ್ರಸಾದ ಅಬ್ಬಯ್ಯ, ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ, ಕಾಂಗ್ರೆಸ್ ಮಹಾನಗರ ಜಿಲ್ಲಾಧ್ಯಕ್ಷ ಅಲ್ತಾಫ್ ಹಳ್ಳೂರ, ಧಾರವಾಡ ಜಿಲ್ಲಾ ಗ್ರಾಮೀಣ ಘಟಕ ಅಧ್ಯಕ್ಷ ಅನಿಲಕುಮಾರ ಪಾಟೀಲ, ಸದಾನಂದ ಡಂಗನವರ, ರಾಜಶೇಖರ ಮೆಣಸಿನಕಾಯಿ, ನಾಗರಾಜ ಗೌರಿ, ದೀಪಾ ಗೌರಿ, ಶಿವಣ್ಣ ಹುಬ್ಬಳ್ಳಿ, ಕಳಸಾ ಬಂಡೂರಿ ಹೋರಾಟ ಸಮಿತಿ ಅಧ್ಯಕ್ಷ ಸಿದ್ದು ತೇಜಿ, ಸಂಸ್ಕಾರ ಫೌಂಡೇಷನ್ ಅಧ್ಯಕ್ಷ ಲಕ್ಷ್ಮಣ ರೋಖಾ, ಇತರರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts