More

    ಕೃಷಿ ಇಲಾಖೆ ವಿತರಿಸಿದ ಬಿತ್ತನೆ ಬೀಜ ಕಳಪೆ

    ಬಾಗೇಪಲ್ಲಿ : ಕೃಷಿ ಇಲಾಖೆಯಿಂದ ವಿತರಣೆ ಮಾಡುತ್ತಿರುವ ಬಿತ್ತನೆ ಬೀಜ ಕಳಪೆಯಾಗಿವೆ ಎಂದು ರೈತ ಸಂಘ ಮತ್ತು ಕೂಲಿ ಕಾರ್ಮಿಕರ ಸಂಘಟನೆ ಆರೋಪಿಸಿದೆ.

    ಕಸಬಾ, ಮಿಟ್ಟೇಮರಿ, ಗೂಳೂರು, ಪಾತಪಾಳ್ಯ, ಚೇಳೂರು ಹೋಬಳಿ ರೈತ ಸಂಪರ್ಕ ಕೇಂದ್ರಗಳಿಗೆ ಸರ್ಕಾರ 67,281 ಕ್ವಿಂಟಾಲ್ ನೆಲಗಡಲೆ ಬಿತ್ತನೆ ಬೀಜ ಸರಬರಾಜು ಮಾಡಿದೆ. ಕೃಷಿ ಸಹಾಯಕ ನಿರ್ದೇಶಕರಿಗೆ ಮೇಲಧಿಕಾರಿಗಳಿಂದ ಆದೇಶ ಬಂದಿಲ್ಲ ಎಂದು ಬೀಜಗಳನ್ನು ವಿತರಣೆ ಮಾಡದ ಹಿನ್ನೆಲೆಯಲ್ಲಿ ರೈತರು ಬುಧವಾರ ಪ್ರತಿಭಟನೆ ನಡೆಸಿದ್ದರಿಂದ ಗುರುವಾರದಿಂದ ಬೀಜ ವಿತರಿಸಲಾಗುತ್ತಿದೆ.

    ಕೃಷಿ ಸಹಾಯಕ ನಿರ್ದೇಶಕರ ಕಚೇರಿ ಆವರಣದಲ್ಲಿರುವ ಕಸಬಾ ರೈತ ಸಂಪರ್ಕ ಕೇಂದ್ರದಲ್ಲಿ ವಿತರಣೆ ಮಾಡಿರುವ ಬಿತ್ತನೆ ಬೀಜಗಳು ಕಳಪೆಯಾಗಿವೆ, ಬಿತ್ತನೆಗೆ ಯೋಗ್ಯವಲ್ಲದ ಬೀಜಗಳನ್ನು ವಿತರಿಸುತ್ತಿದ್ದಾರೆ ಎಂದು ರೈತರು ಆರೋಪಿದ್ದಾರೆ.ಇದರ ಜತೆಗೆ 30 ಕೆಜಿ ನೆಲಗಡಲೆ ಮೂಟೆಗೆ ಖಾಸಗಿ ಮಾರುಕಟ್ಟೆಯಲ್ಲಿನ ಬೆಲೆಯನ್ನೇ ನಿಗದಿಪಡಿಸಿದ್ದು ಸರ್ಕಾರದ ಮಟ್ಟದಲ್ಲೇ ಗೋಲ್ಮಾಲ್ ನಡೆದಿದೆ ಎಂದು ರೈತ ಮುಖಂಡರು ಆರೋಪಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts