More

    ಕೃಷಿಯೆಂದರೆ ಸ್ವಾಭಿಮಾನದ ಬದುಕು

    ಕಾರವಾರ: ಕೃಷಿ ಎಂದರೆ ಕೇವಲ ನಷ್ಟದ ಉದ್ಯೋಗವಲ್ಲ. ಅದರಿಂದಲೂ ಲಾಭ ಪಡೆಯಬಹುದು. ಸ್ವಾಭಿಮಾನದಿಂದ ಬದುಕಬಹುದು ಎಂದು ರಾಯಚೂರು ಜಿಲ್ಲೆಯ ಪ್ರಗತಿಪರ ಕೃಷಿ ಮಹಿಳೆ ಕವಿತಾ ಮಿಶ್ರಾ ಹೇಳಿದರು.

    ಪಹರೆ ವೇದಿಕೆ 6 ನೇ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಇಲ್ಲಿನ ಟ್ಯಾಗೋರ್ ಕಡಲ ತೀರದಲ್ಲಿ ಶನಿವಾರ ರಾತ್ರಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ನಾನು ಓದಿರುವುದು ಸಾಫ್ಟ್​ವೇರ್ ಇಂಜಿನಿಯರಿಂಗ್. ಆದರೆ, ವಿವಾಹವಾದ ನಂತರ ಮನೆಯಲ್ಲಿ ಉದ್ಯೋಗಕ್ಕೆ ತೆರಳುವ ವಾತಾವರಣವಿರಲಿಲ್ಲ. ಬರಡು ಭೂಮಿಯಲ್ಲಿ ಕೃಷಿ ಪ್ರಾರಂಭಿಸಿದೆ ಎಷ್ಟು ಬೋರ್ ಕೊರೆಸಿದರೂ ನೀರು ಬರಲಿಲ್ಲ. ಮೊದಲೊಮ್ಮೆ ದಾಳಿಂಬೆ ಬೆಳೆದರೂ ಲಾಭ ಬರಲಿಲ್ಲ. ಸಾಲ ಮೈಮೇಲೆ ಬಂತು ಆತ್ಮಹತ್ಯೆಗೆ ಯತ್ನಿಸಿದೆ. ನಂತರ ಛಲ ಬಿಡದೇ ಶ್ರೀಗಂಧ ಬೆಳೆದೆ. ನರ್ಸರಿ ಮಾಡಿದೆ. ಈಗ ನಾನು ಸಾಫ್ಟ್​ವೇರ್ ಇಂಜಿನಿಯರ್ ಆಗಿ ದುಡಿಯುವುದಕ್ಕಿಂತ ಹೆಚ್ಚು ದುಡಿಯುತ್ತಿದ್ದೇನೆ ಎಂದರು.

    ನಾವು ಆರ್ಥಿಕವಾಗಿ ಬಿದ್ದಾಗ ಯಾರೂ ನಮ್ಮ ಬೆಂಬಲಕ್ಕೆ ಬರುವುದಿಲ್ಲ. ಛಲದಿಂದ ಮುಂದೆ ಸಾಗಿದರೆ ಮಹಿಳೆಯರೂ ಸಾಧನೆ ಮಾಡಬಹುದು. ಮಹಿಳೆಯರಿಗೆ ಸಮಾಜ ಗೌರವ ನೀಡಬೇಕು ಎಂದರು.

    ಶಾಸಕಿ ರೂಪಾಲಿ ನಾಯ್ಕ ಕಾರ್ಯಕ್ರಮ ಉದ್ಘಾಟಿಸಿದರು. ನಟ ಅರುಣ ಸಾಗರ, ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ, ಸಂಘಟನೆಯ ಗೌರವ ಅಧ್ಯಕ್ಷ ಸದಾನಂದ ಮಾಂಜ್ರೇಕರ್ ಇದ್ದರು. ವೇದಿಕೆ ಅಧ್ಯಕ್ಷ ನಾಗರಾಜ ನಾಯಕ ಸ್ವಾಗತಿಸಿದರು. ರಾಜೇಶ ಮರಾಠಿ, ವಸಂತಕುಮಾರ ಕತಗಾಲ ಪರಿಚಯಿಸಿದರು. ಟಿ.ಬಿ. ಹರಿಕಾಂತ ಕಾರ್ಯಕ್ರಮ ನಿರೂಪಿಸಿದರು. ದೇವಾನಂದ ಗಾಂವಕರ್, ದಿಶಾ ಹರಿಕಾಂತ ಗೀತೆಗಳನ್ನು ಹಾಡಿದರು.

    ಸನ್ಮಾನ: ಹಳ್ಳಿಗಳಿಂದ ಬಂದು ಸ್ವಚ್ಛತೆಯ ಕಾರ್ಯ ಮಾಡುವ ಸುಭಾಷ ನಾಯ್ಕ, ಗಜಾನನ ಬನಾರೆ, ಗಿಡಗಳನ್ನು ಪೋಷಿಸುವ ಪ್ರಕಾಶ ಕೌರ್, ಕೆಡಿಎ ಮಾಜಿ ಅಧ್ಯಕ್ಷ ಆರ್.ಜಿ. ನಾಯ್ಕ ಅವರನ್ನು ಸನ್ಮಾನಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts