More

    ಕೂಲಿ ಹಣಕ್ಕಾಗಿ ಕಾರ್ವಿುಕರ ಪ್ರತಿಭಟನೆ

    ಬ್ಯಾಡಗಿ: ಉದ್ಯೋಗ ಖಾತ್ರಿ ಯೋಜನೆ ಕೂಲಿ ದಿನಗಳ ಏರಿಕೆ, ವಾರದೊಳಗೆ ಕೂಲಿ ಹಣ ಜಮೆ, ಮೂಲಸೌಲಭ್ಯ ಕಲ್ಪಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಸಲು ಒತ್ತಾಯಿಸಿ ಗ್ರಾಮೀಣ ಕೂಲಿಕಾರ್ವಿುಕರ ಸಂಘಟನೆ ಕಾರ್ಯಕರ್ತರು ತಾಪಂ ಕಾರ್ಯಾಲಯ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

    ಸಂಘಟನೆ ಅಧ್ಯಕ್ಷ ರಾಜು ಆಲದಹಳ್ಳಿ ಮಾತನಾಡಿ, ಗ್ರಾಮೀಣ ಪ್ರದೇಶದ ಶೇ. 50 ಕೂಲಿ ಕಾರ್ವಿುಕರು ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹೆಸರು ನೋಂದಾಯಿಸಿಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಪೈಕಿ ಶೇ. 60ರಷ್ಟು ಕಾರ್ವಿುಕರ 100 ಮಾನವ ದಿನಗಳು ಪೂರ್ಣಗೊಂಡಿವೆ. ಕರೊನಾ ರೋಗದಿಂದ ಕೂಲಿಕಾರರ ಜೀವನ ಸಂಕಷ್ಟಕ್ಕೆ ಸಿಲುಕಿದೆ. ಸರ್ಕಾರ 150 ದಿನ ಹೆಚ್ಚಿಸುವುದಾಗಿ ಹೇಳುತ್ತಿದ್ದು, ಆದೇಶ ಜಾರಿಗೊಳಿಸಿಲ್ಲ. ಕೂಲಿ ಮೊತ್ತವನ್ನು 275 ಬದಲಾಗಿ ಕನಿಷ್ಠ 350 ರೂ. ಏರಿಸಬೇಕು ಎಂದು ಆಗ್ರಹಿಸಿದರು.

    ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಎ.ಟಿ. ಜಯಕುಮಾರ ಮನವಿ ಸ್ವೀಕರಿಸಿ, 100 ದಿನದ ಕೂಲಿಯನ್ನು 150ಕ್ಕೆ ಏರಿಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಆದೇಶವಾಗಬೇಕಿದೆ. ಕೂಲಿ ಹಣ ಜಮೆ, ಮೂಲಸೌಲಭ್ಯ ನೀಡದಿರುವ, ವಿಶೇಷ ವ್ಯಕ್ತಿಗಳಿಗೆ ರಿಯಾಯಿತಿ ನೀಡದಿರುವ ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಲಾಗುವುದು. ಕೂಲಿಕಾರರ ವಿವಿಧ ಬೇಡಿಕೆ ಕುರಿತು ಜಿ.ಪಂ. ಅಧಿಕಾರಿಗಳಿಗೆ ಮನವಿ ಕಳುಹಿಸಲಾಗುವುದು ಎಂದರು. ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.

    ಕೂಲಿಕಾರರಾದ ದಾದಾಪೀರ ತಿಳವಳ್ಳಿ, ದುರ್ಗಪ್ಪ ಹುಣಸಿಕಟ್ಟಿ, ಗಣೇಶಪ್ಪ ನಾಗನಗೌಡ್ರ, ಅಂಜಿನೆಪ್ಪ ಹಾದಿಮನಿ, ಮಂಜಪ್ಪ ಹಿರೇಕಾಂಶಿ, ಮಲಕನಗೌಡ್ರ ಪಾಟೀಲ, ನಾಗರಾಜ ಕೋಡಿಹಳ್ಳಿ, ಪುಟ್ಟಪ್ಪ ವೀರಾಪುರ, ಶೇಖಪ್ಪ ನಿಟ್ಟೂರು, ಎಸ್.ಬಿ. ದೇವರಮನಿ, ಗುತ್ತೆಪ್ಪ ತಳವಾರ ಇತರರಿದ್ದರು.

    ನಾಲೈದು ತಿಂಗಳಿನಿಂದ ಕೂಲಿ ನಿರ್ವಹಿಸಿದ 11,970 ರೂ. ಜಮೆಯಾಗಿಲ್ಲ, ಅಧಿಕಾರಿಗಳ ತಪ್ಪಿನಿಂದ ಹಲವು ಸಮಸ್ಯೆಗಳು ಉದ್ಭವಿಸುತ್ತಿವೆ. ಎರಡು ದಿನದಲ್ಲಿ ಕೂಲಿ ಹಣ ನೀಡದಿದ್ದಲ್ಲಿ ಗ್ರಾ.ಪಂ. ಎದುರು ಉಪವಾಸ ಸತ್ಯಾಗ್ರಹ ಮಾಡಲಾಗುವುದು.
    | ಶಿವರಾಯಪ್ಪ ಬ್ಯಾಡಗಿ, ಕೂಲಿಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts