More

    ಕೂರ್ಮಗಡ ದ್ವೀಪದ ಜಾತ್ರೆಗೆ ಎಲ್ಲ ಸುರಕ್ಷಾ ಕ್ರಮ ಕೈಗೊಳ್ಳಿ

    ಕಾರವಾರ: ಜನವರಿ 28 ರಂದು ಕೂರ್ಮಗಡ ದ್ವೀಪದಲ್ಲಿ ನಡೆಯುವ ನರಸಿಂಹ ದೇವರ ಜಾತ್ರೆಗೆ ಎಲ್ಲ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಶಾಸಕಿ ರೂಪಾಲಿ ನಾಯ್ಕ ಹೇಳಿದರು.

    ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಸೋಮವಾರ ವಿವಿಧ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿ, ಅವರು, ಜಾತ್ರೆ ಸಂದರ್ಭದಲ್ಲಿ ಯಾವುದೇ ನಿರ್ಲಕ್ಷ್ಯ ಸಲ್ಲದು ಎಂದು ಎಚ್ಚರಿಸಿದರು.

    ಜಾತ್ರೆಗೆ ತೆರಳಲು ಭಕ್ತರು ದೋಣಿ ಹತ್ತುವ ಹಾಗೂ ಇಳಿಯುವ ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಿ. ಪ್ರತಿ ಪ್ರಯಾಣಿಕನ ಮಾಹಿತಿಯನ್ನು ಪಡೆದುಕೊಳ್ಳಬೇಕು. ದೋಣಿ ಹತ್ತಲು ಬೈತಖೋಲ್ ಒಂದು ಕಡೆ ಮಾತ್ರ ವ್ಯವಸ್ಥೆ ಮಾಡಬೇಕು. ಖಾಸಗಿ ಹಾಗೂ ಪರವಾನಗಿ ಇಲ್ಲದ ದೋಣಿಗಳು ಅಂದು ಜನರನ್ನು ತುಂಬಿಕೊಂಡು ಸಮುದ್ರಕ್ಕೆ ಇಳಿಯದಂತೆ ಜಾಗೃತಿ ವಹಿಸಬೇಕು ಎಂದರು.

    ಸುಸಜ್ಜಿತ ಬೋಟ್​ಗಳಲ್ಲಿ ಮಾತ್ರ ಜನ ಸಾಗಿಸಬೇಕು. ಬೋಟ್​ಗಳಲ್ಲಿ ನಿಗದಿಗಿಂತ ಹೆಚ್ಚು ಜನರನ್ನು ಒಯ್ಯಬಾರದು. ಎಲ್ಲರಿಗೂ ಕಡ್ಡಾಯವಾಗಿ ಲೈಫ್ ಜಾಕೆಟ್ ವ್ಯವಸ್ಥೆ ಇರಬೇಕು. ಹಿರಿಯರು ಹಾಗೂ ಮಕ್ಕಳ ಬಗ್ಗೆ ತೀರಾ ಕಾಳಜಿ ವಹಿಸಬೇಕು. ಜಾತ್ರೆಗೆ ಹೋಗುವ ಜನರ ವಾಹನ ರ್ಪಾಂಗ್ ವ್ಯವಸ್ಥೆಯನ್ನು ಬೈತ್​ಖೋಲ್ ಬಳಿ ಖಾಲಿ ಜಾಗದಲ್ಲಿ ಮಾಡಬೇಕು ಎಂದು ಸೂಚಿಸಿದರು.

    ಲೈಫ್​ಜಾಕೆಟ್ ವ್ಯವಸ್ಥೆ ಕಡ್ಡಾಯವಾಗಿ ಇರಬೇಕು, ಕರಾವಳಿ ಕಾವಲು ಪಡೆ ಹಾಗೂ ಕೋಸ್ಟ್ ಗಾರ್ಡ್ ಸಿಬ್ಬಂದಿ, ವೈದ್ಯಕೀಯ, ಅಗ್ನಿಶಾಮಕ ಸಿಬ್ಬಂದಿಗಳನ್ನು ನಿಯೋಜನೆ ಮಾಡಬೇಕು ಎಂದರು.

    ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ನಾಗರಾಜ್ ಮಾತನಾಡಿ, ಜಾತ್ರೆಗೆ ಭಕ್ತರನ್ನು ಕರೆದುಕೊಂಡು ಹೋಗಲು, 17 ಪರ್ಸೀನ್, 2 ಟ್ರಾಲ್ ಬೋಟ್​ನವರು ಅರ್ಜಿ ಸಲ್ಲಿಸಿದ್ದಾರೆ. ಅವರೆಲ್ಲರ ದಾಖಲೆಗಳನ್ನು ಪರಿಶೀಲಿಸಿ ಅನುಮತಿ ನೀಡಲಾಗುವುದು ಎಂದರು.

    ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷ ಪ್ರಕಾಶ ನಾಯ್ಕ, ತಹಸೀಲ್ದಾರ್ ರಾಮಚಂದ್ರ ಕಟ್ಟಿ, ತಾಲೂಕು ಪಂಚಾಯಿತಿ ಇಒ ಆನಂದಕುಮಾರ್, ಸಿಪಿಐಗಳಾದ ಸಂತೋಷ ಶೆಟ್ಟಿ, ನಿತ್ಯಾನಂದ ಪಂಡಿತ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts