More

    ಕುಸ್ತಿಯಲ್ಲಿ ತ್ರಿವೇಣಿ ಸಾಧನೆ

    ಶಿಗ್ಲಿ: ಲಕ್ಷೆ್ಮೕಶ್ವರ ತಾಲೂಕಿನ ಶಿಗ್ಲಿ ಗ್ರಾಮದ ವಿದ್ಯಾರ್ಥಿನಿ ರಾಜ್ಯ ಹಾಗೂ ಅಂತಾರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯ ಹಾಗೂ ಹುಟ್ಟೂರಿನ ಕೀರ್ತಿ ಹೆಚ್ಚಿಸಿದ್ದಾಳೆ.

    ಕೆ.ಜಿ. ಬದಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಏಳನೇ ತರಗತಿ ವಿದ್ಯಾರ್ಥಿನಿ ತ್ರಿವೇಣಿ ಗಂಗಾಧರ ಮೂರಖಂಡಿ ಈ ಸಾಧಕಿ.

    2020 ಜನವರಿ 25ರಿಂದ 27ರವರೆಗೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಆಯೋಜಿಸಿದ್ದ ರಾಜ್ಯ ಹಾಗೂ ಅಂತಾರಾಜ್ಯ ಮಟ್ಟದ 32 ಕೆಜಿ ತೂಕದ ಕುಸ್ತಿಯಲ್ಲಿ ಬೆಳ್ಳಿ ಪದಕ ಪಡೆದಿದ್ದಾಳೆ. ಇದಲ್ಲದೆ, ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಅಕ್ಕಿಮರಡಿಯಲ್ಲಿ ಜ.11 ರಿಂದ 13ರವರೆಗೆ ಏರ್ಪಡಿಸಿದ್ದ ಸ್ವಾಮಿ ವಿವೇಕಾನಂದ ಕೇಸರಿ ಕುಸ್ತಿ ಪಂದ್ಯಾವಳಿಯ 36 ಕೆಜಿ ತೂಕದ 17 ವಯೋಮಿತಿಯೊಳಗಿನ ಪಂದ್ಯಾವಳಿಯಲ್ಲಿ ಮೂರನೇ ಸ್ಥಾನ ಪಡೆದಿದ್ದಾಳೆ.

    2018ರಲ್ಲಿ ವಿ.ಆರ್. ದೇಶಪಾಂಡೆ ಮೆಮೊರಿಯಲ್ ಟ್ರಸ್ಟ್ ಹಾಗೂ ಕರ್ನಾಟಕ ಸ್ಟೇಟ್ ಕುಸ್ತಿ ಅಸೋಸಿಯೇಷನ್ ಏರ್ಪಡಿಸಿದ್ದ ಅಂತಾರಾಜ್ಯ ಪಂದ್ಯಾವಳಿಯ 29 ಕೆಜಿ ವಿಭಾಗದಲ್ಲಿ ಮೂರನೇ ಸ್ಥಾನ, 2019ರ ಫೆಬ್ರವರಿಯಲ್ಲಿ ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಆಯೋಜಿಸಿದ್ದ ‘ಕರ್ನಾಟಕ ಕುಸ್ತಿ ಹಬ್ಬ’ದ 14 ವಯೋಮಿತಿಯ 29ರಿಂದ 33 ಕೆಜಿ ವಿಭಾಗದಲ್ಲಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಚಿಕ್ಕಮಗಳೂರಿನಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಶಾಲಾ ಮಕ್ಕಳ ಆಟೋಟ ಸ್ಪರ್ಧೆಯ ?ೕಸ್ಟೈಲ್ ಕುಸ್ತಿ 33 ಕೆಜಿ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದು ಸಾಧನೆ ಮಾಡಿದ್ದಾಳೆ.

    ತ್ರಿವೇಣಿಯ ಸಾಧನೆ ಮೆಚ್ಚುವಂಥದ್ದು. ಗ್ರಾಮ ಅನಾದಿ ಕಾಲದಿಂದಲೂ ಕುಸ್ತಿಪಟುಗಳನ್ನು ಕಾಣಿಕೆ ನೀಡಿದೆ. ಈ ಪರಂಪರೆಯನ್ನು ತ್ರಿವೇಣಿಯಂಥ ಕುಸ್ತಿಪಟುಗಳು ಮುಂದುವರಿಸಿಕೊಂಡು ಹೋಗಬೇಕಿದೆ. ಕುಸ್ತಿಪಟುಗಳಿಗೆ ಸರ್ಕಾರದಿಂದ ಎಲ್ಲ ವ್ಯವಸ್ಥೆ ಕಲ್ಪಿಸಲು ಪ್ರಯತ್ನಿಸುತ್ತೇನೆ.

    | ಎಸ್.ಪಿ. ಬಳಿಗಾರ ಜಿಪಂ ಸದಸ್ಯ

    ನಮ್ಮ ಶಾಲೆ ವಿದ್ಯಾರ್ಥಿನಿ ತ್ರಿವೇಣಿಗೆ ಕುಸ್ತಿಯಲ್ಲಿ ಅತೀವ ಆಸಕ್ತಿ ಇತ್ತು. ಅದನ್ನು ಮನಗಂಡು ಪ್ರೋತ್ಸಾಹಿಸಿ ಮುಂದಿನ ಕ್ರೀಡಾ ಸಾಧನೆಗಾಗಿ ನಮ್ಮ ಕೈಲಾದ ಸೌಲಭ್ಯ ಕಲ್ಪಿಸಿಕೊಟ್ಟಿದ್ದೇವೆ. ಆಕೆ ಈಗ ಜಿಲ್ಲೆಯಲ್ಲಷ್ಟೇ ಅಲ್ಲ, ರಾಜ್ಯಮಟ್ಟದಲ್ಲಿ ಮಿಂಚುತ್ತಿದ್ದಾಳೆ. ಕಲಿತ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾಳೆ.

    | ಎ.ಎಸ್. ಗುಡಿಸಾಗರ ಮುಖ್ಯೋಪಾಧ್ಯಾಯ, ಕೆಜಿ ಬದಿ ಸರ್ಕಾರಿ ಪ್ರಾಥಮಿಕ ಶಾಲೆ ಶಿಗ್ಲಿ

    ಮಗಳ ಸಾಧನೆ ಖುಷಿ ತಂದಿದೆ. ರಾಜ್ಯ, ಹೊರರಾಜ್ಯಗಳಲ್ಲಿ ಕುಸ್ತಿ ಆಡಿ ಗೆದ್ದಾಳ್ರಿ. ಇದರಿಂದ ನಮಗ ಭಾಳ ಖುಷಿ ಆಗೈತ್ರಿ. ಎಲ್ಲರೂ ಅವಳ ಕುಸ್ತಿ ಚಿತ್ ಬಗ್ಗೆ ಮಾತಾಡ್ತಾರ. ಅಕಿಗೆ ಕುಸ್ತಿ ಕಲಿಯಾಕ ಏನೇನೆಲ್ಲ ಸವಲತ್ತು ಬೇಕೋ ಅವನ್ನೆಲ್ಲ ಒದಗಿಸಿಕೊಡತೇವ್ರಿ.

    | ಗಂಗಾಧರ ಮತ್ತು ಜಯಲಕ್ಷ್ಮಿ

    ತ್ರಿವೇಣಿ ಪಾಲಕರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts