More

    ಕುಶಲ ಕೆಲಸಗಾರರ ಕೊರತೆ ಸಾಧ್ಯತೆ

    ಕಾರವಾರ :ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಹೊರ ಜಿಲ್ಲೆ, ರಾಜ್ಯಗಳ ಅಸಂಘಟಿತ ಕಾರ್ವಿುಕರು ತಮ್ಮ ಸ್ವಂತ ಊರುಗಳಿಗೆ ತೆರಳಲು ಸಜ್ಜಾಗಿದ್ದಾರೆ. ಇದರಿಂದ ಮುಂದೆ ಜಿಲ್ಲೆಯಲ್ಲಿ ಕುಶಲ ಕಾರ್ವಿುಕರ ಕೊರತೆ ಎದುರಾಗುವ ಸಾಧ್ಯತೆ ಕಂಡು ಬರುತ್ತಿದೆ.

    ಕಳೆದ ಒಂದು ವಾರದಲ್ಲಿ ಸರ್ಕಾರ ಬಸ್​ಗಳ ಮೂಲಕ ಕಾರ್ವಿುಕರನ್ನು ಅವರ ಸ್ವಗ್ರಾಮಗಳಿಗೆ ತಲುಪಿಸಿದೆ. ಇನ್ನೂ ಬಸ್​ಗಳು ತೆರಳುತ್ತಿವೆ. ಅಲ್ಲದೆ, ಸ್ವ ಪ್ರಯತ್ನದಿಂದ ಹಲವರು ಸ್ವಗ್ರಾಮ ಮುಟ್ಟಿಕೊಂಡಿದ್ದಾರೆ. ಒಟ್ಟಾರೆ ಜಿಲ್ಲೆಯಲ್ಲಿದ್ದ ರಾಜ್ಯದ ವಿವಿಧ ಜಿಲ್ಲೆಗಳ ಸಾವಿರಾರು ಕಾರ್ವಿುಕರು ಈಗಾಗಲೇ ಊರುಗಳಿಗೆ ತೆರಳಿದ್ದಾರೆ. ಈಗ ಹೊರ ರಾಜ್ಯದ ಕಾರ್ವಿುಕರೂ ತಮ್ಮ ಸ್ವಂತ ಊರುಗಳಿಗೆ ಹೊರಟು ನಿಂತಿದ್ದಾರೆ.

    10 ಸಾವಿರಕ್ಕೂ ಅಧಿಕ :ಉತ್ತರ ಕನ್ನಡ ಜಿಲ್ಲೆಯಲ್ಲಿ ವಿವಿಧ ಕಾಮಗಾರಿಗಳ ಗುತ್ತಿಗೆದಾರರ ಕೈಕೆಳಗೆ ಕೆಲಸ ಮಾಡುವ ಹೊರ ಜಿಲ್ಲೆ ರಾಜ್ಯಗಳ 3,700 ಕಾರ್ವಿುಕರಿದ್ದಾರೆ ಎಂದು ಕಾರ್ವಿುಕ ಇಲಾಖೆ ಲೆಕ್ಕ ಹಾಕಿದೆ. ಆದರೆ, ಇಲಾಖೆಯ ಲೆಕ್ಕಕ್ಕೆ ಸಿಗದ ಸಾಕಷ್ಟು ಕಾರ್ವಿುಕರಿದ್ದು, ಅವರ ಸಂಖ್ಯೆ 15 ಸಾವಿರ ದಾಟಬಹುದಾಗಿದೆ. ಲಾಕ್​ಡೌನ್ ಕಾರಣದಿಂದ ಒಂದೂವರೆ ತಿಂಗಳು ವನವಾಸ ಅನುಭವಿಸಿದ ಕಾರ್ವಿುಕರು ಈಗ ಇಲ್ಲೇ ಇದ್ದರೆ ಮುಂದೆ ಊಟ ತಿಂಡಿಗೂ ಕಷ್ಟ ಉಂಟಾಗಲಿದೆ ಎಂಬ ಆತಂಕದಲ್ಲಿದ್ದಾರೆ. ಏನೇ ಆಗಲಿ ಊರು ಸೇರಬೇಕು ಎಂದು ಪ್ರಯತ್ನ ನಡೆಸಿದ್ದಾರೆ.

    ಯಾವ್ಯಾವ ಕ್ಷೇತ್ರಗಳಿಗೆ ತೊಂದರೆ

    ಜಿಲ್ಲೆಯ ಟ್ರಾಲರ್, ಪರ್ಸೀನ್ ಬೋಟ್​ಗಳಲ್ಲಿ ಸಾವಿರಕ್ಕೂ ಅಧಿಕ ಒಡಿಶಾ, ಜಾರ್ಖಂಡ್ ಮೂಲದ ಕಾರ್ವಿುಕರಿದ್ದು, ಅವರು ಊರಿಗೆ ಹೊರಡಲು ಸಜ್ಜಾಗಿದ್ದಾರೆ.

    ಟೈಲ್ಸ್ ಫಿಟಿಂಗ್, ಪಿಒಪಿ ಮುಂತಾದ ಕಟ್ಟಡ ನಿರ್ಮಾಣ ಕಾರ್ಯಗಳಲ್ಲಿ ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಸೇರಿ ವಿವಿಧೆಡೆಯ ಪರಿಣತ ಕಾರ್ವಿುಕರಿದ್ದಾರೆ.

    ಬಂಗಾರದ ಕೆಲಸ ಮಾಡುವ ಬಂಗಾಳದ ಸಾವಿರಕ್ಕೂ ಅಧಿಕ ಕುಶಲ ಕರ್ವಿುಗಳು

    ಚತುಷ್ಪಥ ಕಾಮಗಾರಿ ನಡೆಸುವ ಐಆರ್​ಬಿ, ಸೀಬರ್ಡ್ ಎರಡನೇ ಹಂತದ ಗುತ್ತಿಗೆ ಕಾಮಗಾರಿ ನಡೆಸುವ ಎಲ್ ಆಂಡ್ ಟಿ ಸೇರಿ ವಿವಿಧ ಸಂಸ್ಥೆಗಳಲ್ಲಿ ಬಿಹಾರ, ಜಾರ್ಖಂಡ ಸೇರಿ ಇತರ ಉತ್ತರ ಭಾರತದ ರಾಜ್ಯಗಳ ಕಾರ್ವಿುಕರು.

    ಬೇಕರಿ, ಪಾನಿಪುರಿ ಮುಂತಾದ ಚಾಟ್ ಅಂಗಡಿಗಳಲ್ಲಿ ರಾಜಸ್ಥಾನ ಭಾಗದ ಕಾರ್ವಿುಕರಿದ್ದಾರೆ.

    ಕ್ಷೌರದ ಅಂಗಡಿಗಳಲ್ಲಿ ಉತ್ತರ ಪ್ರದೇಶದ ಕಾರ್ವಿುಕರಿದ್ದಾರೆ.

    ನೂರಾರು ಜನರ ಕ್ಯೂ :ಹೊರ ರಾಜ್ಯಕ್ಕೆ ತೆರಳುವವರು ಸೇವಾ ಸಿಂಧು ಆನ್​ಲೈನ್ ವೆಬ್​ಸೈಟ್ ಮೂಲಕ ನೋಂದಣಿ ಮಾಡಿಕೊಳ್ಳಬೇಕು ಎಂದು ಸರ್ಕಾರ ತಿಳಿಸಿದೆ. ಆದರೆ, ಈ ನೋಂದಣಿ ಅರಿಯದ 300ಕ್ಕೂ ಅಧಿಕ ಕಾರ್ವಿುಕರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನೋಂದಣಿಗಾಗಿ ಸರದಿಯಲ್ಲಿ ನಿಂತಿದ್ದರು. ಈ ಸರದಿ ನೋಡಿ ಟೋಕನ್ ವ್ಯವಸ್ಥೆ ಮಾಡಲಾಯಿತು.

    ನೋಂದಣಿಗೆ ಸೂಚನೆ :ಲಾಕ್​ಡೌನ್ ಅವಧಿಯಲ್ಲಿ ಕಾರ್ವಿುಕರು, ಪ್ರವಾಸಿಗರು ಕಾರವಾರ ತಾಲೂಕಿನಿಂದ ಹೊರಗಿನ ತಾಲೂಕು, ಜಿಲ್ಲೆಗಳಿಗೆ (ಭಟ್ಕಳ ತಾಲೂಕು ಹೊರತು ಪಡಿಸಿ ) ತೆರಳಲು ಇಚ್ಛಿಸಿದಲ್ಲಿ ಕಾರವಾರ ತಹಸೀಲ್ದಾರ್ ಕಾರ್ಯಾಲಯದ ಸಹಾಯವಾಣಿ ಸಂಖ್ಯೆ 08382-226331ಗೆ ಸಂರ್ಪಸಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದಾಗಿದೆ ಎಂದು ತಹಸೀಲ್ದಾರ್ ಆರ್.ವಿ.ಕಟ್ಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೀಗೆ ನೊಂದಾಯಿಸಿಕೊಂಡವರ ಮೊಬೈಲ್ ಸಂಖ್ಯೆಗೆ ಪ್ರಯಾಣದ ದಿನಾಂಕವನ್ನು ನಂತರ ತಿಳಿಸಲಾಗುವುದು. ಹೊರ ರಾಜ್ಯಕ್ಕೆ ಹೋಗಲು ಇಚ್ಚಿಸುವರು ಜಠಿಠಿಟಠ://ಠಛಿಡಚಠಜ್ಞಿಛಜ್ಠ.kಚ್ಟ್ಞಠಿಚkಚ.ಜಟಡ.ಜ್ಞಿ ರಲ್ಲಿ ನೋಂದಣಿ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ನೋಡಲ್ ಅಧಿಕಾರಿ ದಯಾನಂದ ಖಾರ್ಗಿ (ಮೊ.ಸಂ.9113033164 ಅಥವಾ 9481736639) ಅವರನ್ನು ಸಂರ್ಪಸಸಿ ಎಂದು ತಿಳಿಸಿದ್ದಾರೆ.

    ಇದುವರೆಗೆ ನಮ್ಮ ಬಳಿ ಇದ್ದ ಹಣದಲ್ಲಿ ಹೇಗೋ ದಿನ ಕಳೆದೆವು. ಲಾಕ್​ಡೌನ್ ಅವಧಿ ಮುಗಿಯುವಂತೆ ಕಾಣುವುದಿಲ್ಲ. ಇಲ್ಲಿದ್ದರೆ ಜೀವನವೇ ಕಷ್ಟವಾಗಲಿದೆ. ಹೇಗಾದರೂ ಊರು ಸೇರಿದರೆ ಸಾಕು ಎಂಬಂತಾಗಿದೆ.

    ಬೃಜಪಾಲ್, ಪಶ್ಚಿಮ ಬಂಗಾಳದ ಕಟ್ಟಡ ಕಾರ್ವಿುಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts