More

    ಕುರುಬರಿಗೆ ಎಸ್‌ಟಿ ಮೀಸಲಾತಿ ಅಗತ್ಯ: ಮಾಜಿ ಸಂಸದ ಕೆ.ವಿರುಪಾಕ್ಷಪ್ಪ

    ವಿಜಯಪುರ : ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿಗೋಸ್ಕರ ಕುರುಬ ಸಮಾಜಕ್ಕೆ ಎಸ್‌ಟಿ ಮೀಸಲಾತಿ ತುರ್ತು ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಸಮಾಜ ಬಾಂಧವರು ಸಂಘಟಿತ ಹೋರಾಟ ಇಂದಿನ ಅಗತ್ಯವಾಗಿದೆ ಎಂದು ಮಾಜಿ ಸಂಸದ ಹಾಗೂ ರಾಜ್ಯ ಕುರುಬ ಸಮಾಜದ ಎಸ್‌ಟಿ ಹೋರಾಟ ಸಮಿತಿ ಅಧ್ಯಕ್ಷ ಕೆ.ವಿರುಪಾಕ್ಷಪ್ಪ ಹೇಳಿದರು.
    ನಗರದ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬೆಳಗಾವಿ ವಿಭಾಗದ ಕುರುಬರ ಎಸ್‌ಟಿ ಹೋರಾಟ ಸಮಿತಿ ಜಿಲ್ಲಾ ಪೂರ್ವಭಾವಿ ಸಭೆಯನ್ನು ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
    ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಬಹುಪಾಲು ಜನಸಂಖ್ಯೆ ಹೊಂದಿರುವ ಕುರುಬ ಸಮಾಜ ಮಾತ್ರ ಇತರ ಸಮುದಾಯಗಳಿಗಿಂತ ತೀರಾ ಹಿಂದುಳಿದಿದೆ. ಇದರಿಂದಾಗಿ ಸಮಾಜದ ಪ್ರಗತಿ ನಿರೀಕ್ಷಿತ ಮಟ್ಟ ತಲುಪಿಲ್ಲ. ಹೀಗಾಗಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಲೇಬೇಕು. ಗ್ರಾಮೀಣ ಭಾಗದಲ್ಲಿ ನಮ್ಮ ಸಮುದಾಯವನ್ನು ಅಸ್ಪಶ್ಯರಂತೆ ಕಾಣಲಾಗುತ್ತಿದೆ. ಹಾಗಾಗಿ ಮುಂದಿನ ಪೀಳಿಗೆಯ ಹಿತಕ್ಕಾಗಿ ಈ ಸಮಾಜಕ್ಕೆ ಎಸ್‌ಟಿ ಮೀಸಲಾತಿ ಅವಶ್ಯಕ ಎಂದರು.
    ರಾಜ್ಯ ಎಸ್‌ಟಿ ಮೀಸಲಾತಿ ಸಮಿತಿ ಸಹ ಕಾರ್ಯದರ್ಶಿ ರಾಜು ಬಿರಾದಾರ ಮಾತನಾಡಿ, ಬಾಗಲಕೋಟೆಯಲ್ಲಿ ನ.29 ರಂದು ನಡೆಯಲಿರುವ ಬೆಳಗಾವಿ ವಿಭಾಗಮಟ್ಟದ ಸಮ್ಮೇಳನ ಯಶಸ್ವಿಗೊಳಿಸಲು ಪ್ರತಿಯೊಬ್ಬರೂ ಶ್ರಮಿಸಬೇಕು. ಈ ಸಮಾವೇಶಕ್ಕೆ ಜಿಲ್ಲೆಯಿಂದ 20 ಸಾವಿರ ಜನರು ಪಾಲ್ಗೊಳ್ಳುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವುದಾಗಿ ಭರವಸೆ ನೀಡಿದರು.
    ಜಿಪಂ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಮಾತನಾಡಿ, ಅಧಿಕಾರ ವಹಿಸಿಕೊಂಡ ಬಳಿಕ ದೊಡ್ಡಿ ಹಾಗೂ ಅಡವಿ ವಸತಿ ಕಾರ್ಯಕ್ರಮದಲ್ಲಿ ಕುರಿಗಾಯಿಗಳ ಸಮಸ್ಯೆ ಆಲಿಸಿದೆ. ಅವರ ಸ್ಥಿತಿ-ಗತಿ ಕೆಟ್ಟದಾಗಿದೆ. ಹಾಗಾಗಿ ಸಮಾಜದ ಅಭಿವೃದ್ಧಿಗಾಗಿ ಮೀಸಲಾತಿ ಅವಶ್ಯಕ ಎಂದರು.
    ಎಸ್‌ಟಿ ಹೋರಾಟ ಸಮಿತಿ ರಾಜ್ಯ ಖಜಾಂಚಿ ಕೆ.ಈ. ಕಾಂತೇಶ ಮಾತನಾಡಿ, ಕಾಗಿನೆಲೆ ಕನಕ ಗುರುಪೀಠದ ಮಾರ್ಗದಶನದಲ್ಲಿ ಪ್ರದೇಶ ಕುರುಬರ ಸಂಘದ ಸಹಕಾರದಲ್ಲಿ ಎಲ್ಲರೂ ಬೇಡಿಕೆ ಈಡೇಕೆಗೆ ಒಗ್ಗಟ್ಟಾಗಬೇಕೆಂದರು.
    ರಾಜ್ಯ ಎಸ್‌ಟಿ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಡಾ. ರಾಜೇಂದ್ರ ಸಣ್ಣಕ್ಕಿ, ದೊಡ್ಡಯ್ಯ ಆನೇಕಲ್, ಸಂಚಾಲಕ ಶಾಂತಪ್ಪ ಕೊಡಗು, ಪ್ರದೇಶದ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಡಿ.ವೆಂಕಟೇಶಮೂರ್ತಿ, ಕಾರ್ಯಾಧ್ಯಕ್ಷ ಸುಬ್ರಮಣ್ಯ, ಸಮಾಜ ಮುಖಂಡರಾದ ಬಿ.ಡಿ. ಪಾಟೀಲ, ಟಿ.ಬಿ. ಬೆಳಗಾವಿ, ಮೋಹನ ಮೇಟಿ ಮಾತನಾಡಿದರು.
    ಸರೂರದ ಶ್ರೀರೇವಣಸಿದ್ದೇಶ್ವರ ಶಾಂತಮಯ ಸ್ವಾಮೀಜಿ, ಕವಲಗುಡ್ಡದ ಅಮರೇಶ್ವರ ಮಹಾರಾಜರು, ಮಖಣಾಪುರದ ಶ್ರೀ ಸೋಮೇಶ್ವರ ಸ್ವಾಮೀಜಿ, ಕಾಮನಕೇರಿಯ ಪರಮಾನಂದ ಮಹಾರಾಜರು, ಹುಲಿಜಂತಿಯ ಮಹಾಳಿಂಗರಾಯ ಮಹಾರಾಜರು ಸಾನ್ನಿಧ್ಯ ವಹಿಸಿ ಮಾತನಾಡಿದರು.
    ತಾಪಂ ಅಧ್ಯಕ್ಷೆ ಪ್ರಭಾವತಿ ನಾಟೀಕಾರ, ಜಿಪಂ ಸದಸ್ಯರಾದ ಸಾಬು ಮಾಶ್ಯಾಳ, ಹಣಮಂತ ಖಂಡೇಕರ, ಸಿದ್ದು ಬುಳ್ಳಾ, ಕಲ್ಲಪ್ಪ ಮಟ್ಟಿ, ವೀರಣ್ಣ ಉಂಡೋಡಿ, ಪ್ರದೇಶ ಕುರುಬರ ಸಂಘದ ರಾಜ್ಯ ಸಹ ಕಾರ್ಯದರ್ಶಿಗಳಾದ ರವಿ ಕಿತ್ತೂರ, ರಾಜಶೇಖರ ಕುರಿಯವರ, ನಿರ್ದೇಶಕರಾದ ಕರೆಪ್ಪ ಬಸ್ತಾಳ, ರಾಜೇಶ್ವರಿ ರಾಜಶೇಖರ, ರಾಜ್ಯ ಮಹಿಳಾ ಸಂಚಾಲಕಿ ಶಿಲ್ಪಾ ಕುದುರಗೊಂಡ, ಕುರುಬರ ಸಂಘದ ಜಿಲ್ಲಾಧ್ಯಕ್ಷ ರಾಜು ಕಂಬಾಗಿ, ಪ್ರದೇಶ ಕುರುಬರ ಸಂಘದ ಜಿಲ್ಲಾಧ್ಯಕ್ಷ ಮಲ್ಲಣ್ಣ ಶಿರಶ್ಯಾಡ, ರಾಹುಲ್ ಔರಂಗಾಬಾದ್, ಮೋಹನ ದಳವಾಯಿ, ಪ್ರಕಾಶ ಜಾಲಗೇರಿ, ಅಪ್ಪು ಪೂಜಾರಿ, ಶ್ರೀಶೈಲ ಕವಲಗಿ, ಸಿದ್ದು ರೊಳ್ಳಿ, ಕೆಂಚಪ್ಪ ಧರಗೊಂಡ, ಲಕ್ಕು ಪಾಂಡಿಚೇರಿ ಮುಂತಾದವರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts