More

    ಕುರಹಟ್ಟಿಯಲ್ಲಿ ಮೂಲಸೌಕರ್ಯ ಕೊರತೆ

    ಸೋಮು ಲದ್ದಿಮಠ, ರೋಣ

    ತಾಲೂಕು ಕೇಂದ್ರದಿಂದ ಹನ್ನೆರಡು ಕಿಲೋ ಮೀಟರ್ ದೂರದಲ್ಲಿರá-ವ ಕುರಹಟ್ಟಿ ಗ್ರಾಮ ಮೂಲಸೌಕರ್ಯದಿಂದ ವಂಚಿತವಾಗಿದೆ. ಗ್ರಾಮದಲ್ಲಿ 2000 ಜನಸಂಖ್ಯೆ ಇದ್ದು, ಐದು ವಾರ್ಡ್​ಗಳಿವೆ, ಐವರು ಸದಸ್ಯರಿದ್ದಾರೆ. ಪಕ್ಕದ ಮುದೇನಗá-ಡಿ ಗ್ರಾಮದಲ್ಲಿ ಐದು ವಾರ್ಡ್​ಗಳಿದ್ದು, ಐವರು ಸದಸ್ಯರು ಸೇರಿ ಒಟ್ಟು 10 ಸದಸ್ಯರಿದ್ದಾರೆ. ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಕಚೇರಿ ಇದೆ.

    ಇಲ್ಲಿ ಸರ್ಕಾರದ ಹಲವು ಯೋಜನೆಗಳು ಅನುಷ್ಠಾನಗೊಂಡಿವೆ. ಆದರೆ, ಅಭಿವೃದ್ಧಿ ಕಾಮಗಾರಿಗಳು ಸರಿಯಾಗಿ ನಡೆಯುತ್ತಿಲ್ಲ. ಹೀಗಾಗಿ, ಕನಿಷ್ಠ ಮೂಲಸೌಕರ್ಯ ಇಲ್ಲದ ಸ್ಥಿತಿಯಲ್ಲಿ ಜೀವನ ನಡೆಸá-ತ್ತಿದ್ದೇವೆ ಎನ್ನುತ್ತಾರೆ ಗ್ರಾಮಸ್ಥರು. ಚರಂಡಿ ವ್ಯವಸ್ಥೆ ಇಲ್ಲದ್ದರಿಂದ ರಸ್ತೆಯ್ಲ ಚರಂಡಿ ನೀರು ಹರಿಯುತ್ತಿದೆ. ಸರ್ಕಾರಿ ಪ್ರಾಥಮಿಕ ಶಾಲೆ ಎದá-ರು ದೊಡ್ಡ ಚರಂಡಿ ಇದೆ. ಶಾಲೆಯ ಸುತ್ತ ಕಾಂಪೌಂಡ್ ಇದ್ದು ಅದಕ್ಕೆ ಹೊಂದಿಕೊಂಡು ತಿಪ್ಪೆಗುಂಡಿಗಳು ಇವೆ. ಅಲ್ಲಿರುವ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ, ಗ್ರಾಮಸ್ಥರಿಗೆ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ.

    ಕೆಮ್ಮು, ನೆಗಡಿ, ಜ್ವರ, ಸಣ್ಣ ಪುಟ್ಟ ಕಾಯಿಲೆ ಬಂದರೆ ರೋಣ, ಅಥವಾಹೊಳೆಆಲೂರ ಆಸ್ಪತ್ರೆಗೆ ಹೋಗಬೇಕಾದ ಅನಿವಾರ್ಯತೆ. ರಾತ್ರಿ ವೇಳೆ ಆರೋಗ್ಯ ತೊಂದರೆ ಉಂಟಾದರೆ ತಕ್ಷಣವೇ ಆಸ್ಪತ್ರೆಗೆ ಹೋಗಲು ಆಗá-ವುದಿಲ್ಲ. ಹಾವು ಕಚ್ಚಿದರಂತೂ ಅವರಿಗೆ ತಕ್ಷಣ ಪ್ರಥಮ ಚಿಕಿತ್ಸೆ ಸಿಗದೇ ಪ್ರಾಣ ಹಾನಿಯಾಗುವ ಆತಂಕವಿದೆ ಎನ್ನುತ್ತಾರೆ ಸ್ಥಳೀಯ ರೈತರು.

    ಇನ್ನು ಪಶು ಆಸ್ಪತ್ರೆ ಇಲ್ಲದ್ದರಿಂದ ಜಾನುವಾರುಗಳಿಗೆ ಆರೋಗ್ಯದಲ್ಲಿ ಏರá-ಪೇರಾದರೆ ರೈತರು ಪರದಾಡುವ ಸ್ಥಿತಿ ಇದೆ. ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಪಶು ಆಸ್ಪತ್ರೆ ನಿರ್ವಣಕ್ಕೆ ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಪ್ರಯೋಜನ

    ವಾಗಿಲ್ಲ. ಜೆಜೆಎಂ ಯೋಜನೆಯಡಿ ಪೈಪ್​ಲೈನ್ ಅಳವಡಿಸಲು ರಸ್ತೆ ಅಗೆದು ಹಾಗೆಯೇ ಬಿಡಲಾಗಿದೆ ಎಂದು ಮಜೂರಪ್ಪ ಮಾದರ ದೂರಿದ್ದಾರೆ. ಗ್ರಾಮದಲ್ಲಿ ಸಾರ್ವಜನಿಕ ಶೌಚಗೃಹ ಇಲ್ಲದ್ದರಿಂದ ಮಹಿಳೆಯರು ಶೌಚಕ್ಕೆ ಇಂದಿಗೂ ಬಯಲು ಪ್ರದೇಶವನ್ನೇ ಅವಲಂಬಿಸಿದ್ದಾರೆ. ಮನೆಯಲ್ಲಿ ಸ್ಥಳಾವಕಾಶ ಇಲ್ಲದ್ದರಿಂದ ಮನೆಯಲ್ಲಿ ಶೌಚಾಗೃಹ ನಿರ್ವಿುಸಿಕೊಳ್ಳದ ಮಹಿಳೆಯರು ತೀವ್ರ ಸಮಸ್ಯೆ ಎದá-ರಿಸá-ವಂತಾಗಿದೆ. ಗ್ರಾಮದಲ್ಲಿ 10ಕ್ಕೂ ಹೆಚ್ಚು ಹರಿಣಶಿಕಾರಿ ಕುಟುಂಬಗಳು ಕಳೆದ 50 ವರ್ಷಗಳಿಂದ ಗá-ಡಿಸಲಿನಲ್ಲಿ ವಾಸಿಸುತ್ತಿವೆ. ಅವರಿಗೆ ಆಶ್ರಯ ಮನೆ, ಕುಡಿಯುವ ನೀರು ಪೂರೈಸಬೇಕು ಎಂದು ಮಲ್ಲಪ್ಪ ಹರಿಣಶಿಕಾರಿ, ಬಸಪ್ಪ ಹರಿಣಶಿಕಾರಿ ಇತರರು ಒತ್ತಾಯಿಸಿದ್ದಾರೆ.

    ಗ್ರಾಮದ ಹರಿಣಶಿಕಾರಿ ಕುಟುಂಬ ಗಳಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಮನೆ ನಿರ್ವಿುಸಿಕೊಡಲಾಗá-ವುದು ಎಂದು ಹೇಳಿದ್ದರು. ಅದರ ಬಗ್ಗೆ ಮಾಹಿತಿ ಬಂದಿಲ್ಲ. ಗ್ರಾಪಂಗೂ ಅವರು ಮನೆಗಾಗಿ ಸಾಕಷ್ಟು ಬಾರಿ ಅರ್ಜಿ ಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಗೆ ಯಾವುದಾದರೂ ಯೋಜನೆಯಡಿ ಮನೆ ನಿರ್ವಿುಸಲಾಗá-ವುದು. ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು.
    | ಎಸ್.ಬಿ. ಕಡಬಲಕಟ್ಟಿ ಪಿಡಿಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts