More

    ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ

    ಹೂವಿನಹಿಪ್ಪರಗಿ: ಅಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಯಿಂದಾಗಿ ನಿತ್ಯ ಸಮಸ್ಯೆ ಎದುರಿಸುವಂತಾಗಿದ್ದು, ಕೂಡಲೆ ನೀರಿನ ಸಮಸ್ಯೆ ಬಗೆಹರಿಸಬೇಕು ಎಂದು ಸಂಕನಾಳ ಗ್ರಾಮದ ಯುವಕರು ಗುರುವಾರ ಗ್ರಾಪಂ ಅಧ್ಯಕ್ಷ ಅಪ್ಪು ನಾಯಕ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಎನ್.ಎಚ್.ಹೂಗಾರ ಅವರಿಗೆ ಮನವಿ ಸಲ್ಲಿಸಿದರು.

    ಕುಡಿಯುವ ನೀರಿಗಾಗಿ ಸಂಕನಾಳ ಗ್ರಾಮದ 2ನೇ ವಾರ್ಡಿನ ಮರಗಮ್ಮ ಓಣಿ, ಮಾಯಮ್ಮನ ಓಣಿ, ಚಪ್ಪರಬಂದ ಓಣಿ ಹಾಗೂ ಗ್ರಾಮದ ಅನೇಕ ಕಡೆ ಅಂದಾಜು2-3 ತಿಂಗಳಿಂದ ನೀರಿಗಾಗಿ ನಾಗರಿಕರು ತೊಂದರೆ ಅನುಭವಿಸುವಂತಾಗಿದೆ. ಬೇಸಿಗೆ ಆರಂಭವಾಗಿರುವುದರಿಂದ ಈಗಲೇ ನೀರಿನ ಸಮಸ್ಯೆ ಅಧಿಕವಾಗಿದೆ. ಸಮರ್ಪಕ ನೀರು ಪೂರೈಸಲು ಹಲವು ಬಾರಿ 2ನೇ ವಾರ್ಡ್‌ನ ಗ್ರಾಮ ಪಂಚಾಯಿತಿ ಸದಸ್ಯರ ಗಮನಕ್ಕೆ ತಂದರೂ ಬೇಜವಾಬ್ದಾರಿ ಹೇಳಿಕೆ ನೀಡಿ ಕಡೆಗಣಿಸುತ್ತಿದ್ದಾರೆ. ಕೆಲವು ಮನೆಗಳಲ್ಲಿ 1 ಎಚ್‌ಪಿ ಮೋಟರ್‌ನಿಂದ ನೀರು ತುಂಬುವುದರಿಂದ ಉಳಿದ 50 ರಿಂದ 60 ಮನೆಗಳಿಗೆ ನೀರು ಬರುತ್ತಿಲ. ಮೋಟರ್ ಹೊಂದಿಲ್ಲದ ಮನೆಗಳಿಗೆ ನೀರಿನ ತೊಂದರೆ ಆಗುತ್ತಿದೆ. ಸಂಬಂಧಿತ ಅಧಿಕಾರಿಗಳು ಆದಷ್ಟು ಬೇಗ ನೀರಿನ ಸಮಸ್ಯೆ ಬಗೆಹರಿಸಿ ಕೊಡಬೇಕು ಎಂದು ಮನವಿ ಮಾಡಿದರು.

    ಅಲ್ಲಾಭಕ್ಷ ಮುಲ್ಲಾ, ಮುದುರಾಜ ಪವಾರ, ಮಾಳು ಕಾವಲದಿನ್ನಿ, ಶಿವು ತಳಗೇರಿ, ಮುದಕಪ್ಪ ಗುಬ್ಬಿ, ಹಜರುದ್ಧಿನ ಮುಲ್ಲಾ, ಅಯ್ಯೂಬಖಾನ ಮುಲ್ಲಾ, ವಾಹಿದ ಮುಲ್ಲಾ, ಚಂದ್ರಶೇಖರ ಗುಬ್ಬಿ, ಮೈಬೂ ಬುಗುಟಗಾರ, ತಿಪ್ಪಣ್ಣ ಗುಬ್ಬಿ, ರಾಜು ಯರನಾಳ, ರಾಮನಗೌಡ ಬಿರಾದಾರ, ಸಿದ್ದು ವಾಲಿಕಾರ ಇದ್ದರು.

    ಗ್ರಾಪಂ ಅಧ್ಯಕ್ಷರು ಹಾಗೂ ಸದಸ್ಯರ ಸಮ್ಮುಖದಲ್ಲಿ 20 ದಿನದ ಹಿಂದೆ ಪೈಪ್‌ಲೈನ್ ದುರಸ್ತಿ ಮಾಡಿಸಿ ನೀರು ಪೂರೈಕೆ ಆಗುವಂತೆ ಮಾಡಲಾಗಿತ್ತು. ಎಲ್ಲ ಮನೆಗಳಿಗೆ ನೀರು ಪೂರೈಕೆ ಆಗುತ್ತಿತ್ತು. ಕೆಲವರು ಮೋಟರ್ ಬಳಸುವುದರಿಂದ ಉಳಿದವರಿಗೆ ನೀರು ಬರುತ್ತಿಲ್ಲ.
    ಕಾಶಿಬಾಯಿ ರಾಠೋಡ, ಗ್ರಾಪಂ ಉಪಾಧ್ಯಕ್ಷೆ
    

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts