More

    ಕುಡಿಯುವ ನೀರಿನ ಯೋಜನೆಗೆ 96.50 ಕೋಟಿ ರೂ.

    ಶಿವಮೊಗ್ಗ: ಹೊರವಲಯದ 13 ಪ್ರದೇಶಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆಗೆ 96.50 ಕೋಟಿ ರೂ. ಹಾಗೂ ಊರಗಡೂರಿನಲ್ಲಿ ಸೂಡಾದಿಂದ ನಿರ್ವಣವಾಗುತ್ತಿರುವ ಹೊಸ ಲೇಔಟ್​ಗೆ 5.35 ಕೋಟಿ ರೂ. ಅನುದಾನ ನೀಡುವುದಾಗಿ ಕರ್ನಾಟಕ ಕುಡಿಯುವ ನೀರು ಹಾಗೂ ಒಳಚರಂಡಿ ಮಂಡಳಿ ಅಧ್ಯಕ್ಷ ರಾಜೂ ಗೌಡ ಪ್ರಕಟಿಸಿದ್ದಾರೆ.

    ನಗರಪಾಲಿಕೆ ವ್ಯಾಪ್ತಿಗೆ ಬಂದಿರುವ ಹೊರ ವಲಯದ ಬಡಾವಣೆಗಳಿಗೆ ಕುಡಿಯುವ ನೀರು ಒದಗಿಸಲು 325 ಕಿಮೀ ಪೈಪ್​ಲೈನ್ ನಿರ್ವಣದ ಟೆಂಡರ್ ಪ್ರಕ್ರಿಯೆಯನ್ನು 3 ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.

    ಗುರುವಾರ ಶಿವಮೊಗ್ಗ ನಗರ ಕುಡಿಯುವ ನೀರು ಹಾಗೂ ಯುಜಿಡಿ ಕಾಮಗಾರಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಗೋವಿಂದಾಪುರ, ವಿರುಪಿನಕೊಪ್ಪ, ಗೋಪಶೆಟ್ಟಿಕೊಪ್ಪದ ಆಶ್ರಯ ಬಡಾವಣೆಗಳಿಗೆ ಕುಡಿಯುವ ನೀರೊದಗಿಸುವ ಯೋಜನೆಗೆ 12.70 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗುವುದು ಎಂದರು.

    ಕಾಲ ಮಿತಿ ನಿಗಧಿ: ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ 24*7 ಕುಡಿಯುವ ನೀರು ಯೋಜನೆಯನ್ನು ಮುಂದಿನ ಸೆಪ್ಟೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಬೇಕು. ಸ್ಮಾರ್ಟ್ ಸಿಟಿ ಕಾಮಗಾರಿ ಪ್ರದೇಶದಲ್ಲಿ ಕುಡಿಯುವ ನೀರು ಯೋಜನೆ ಅನುಷ್ಟಾನಕ್ಕೆ ಇರುವ ತೊಡಕುಗಳನ್ನು ನಿವಾರಿಸಿಕೊಂಡು ನವೆಂಬರ್ ಅಂತ್ಯಕ್ಕೆ 9 ವಲಯಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

    ಯುಜಿಡಿ ಕಾಮಗಾರಿ ಪೂರ್ಣಗೊಂಡಿರುವ ಕಡೆ ಒಳಚರಂಡಿ ಮಂಡಳಿಯಿಂದಲೇ ಪ್ರತಿ ಮನೆಗೂ ಸಂಪರ್ಕ ಒದಗಿಸುವುದು ಸೂಕ್ತ. ಇದರಿಂದ ಯೋಜನೆ ಉದ್ದೇಶ ಸಮಪರ್ಕವಾಗಿ ಈಡೇರುತ್ತದೆ. ಗುಣಮಟ್ಟ ಕಾಯ್ದುಕೊಳ್ಳಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

    ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ಯುಜಿಡಿ ಸಂಪರ್ಕ ಪಡೆಯಲು ನಾಗರಿಕರಿಗೆ ಇನ್ನೂ ಒಂದು ತಿಂಗಳು ಅವಕಾಶ ನೀಡಿ. ಸಂಪರ್ಕ ಪಡೆಯದ ಮನೆಗಳಿಗೆ ನೀರಿನ ಸರಬರಾಜು ನಿಲ್ಲಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

    ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಮೇಯರ್ ಸುವರ್ಣಾ ಶಂಕರ್, ಉಪಮೇಯರ್ ಸುರೇಖಾ ಮುರಳೀಧರ್, ಪಾಲಿಕೆ ಆಡಳಿತ ಪಕ್ಷದ ನಾಯಕ ಚಿದಾನಂದ ವಟಾರೆ, ಆಶ್ರಯ ಸಮಿತಿ ಅಧ್ಯಕ್ಷ ಶಶಿಧರ್ ಸಭೆಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts