More

    ಕುಡಿನೀರು ಕಟ್ಟೆ ಉದ್ಯಾನಕ್ಕೆ ಕಾಯಕಲ್ಪ: ಡಿವೈಎಸ್ಪಿ ರಮೇಶ್ ನೇತೃತ್ವದಲ್ಲಿ ಸ್ವಚ್ಛತೆ, ಪೊಲೀಸ್ ಸಿಬ್ಬಂದಿ, ವಿವಿಧ ಸಂಘಟನೆಗಳು ಸಾಥ್

    ಚನ್ನಪಟ್ಟಣ : ನಿರ್ವಹಣೆಯಿಲ್ಲದೆ ಗಿಡ-ಗಂಟಿಗಳಿಂದ ತುಂಬಿ ಅವ್ಯವಸ್ಥೆಯ ಆಗರವಾಗಿದ್ದ ನಗರದ ಕುಡಿನೀರು ಕಟ್ಟೆ ಉದ್ಯಾನವನ್ನು ಡಿವೈಎಸ್‌ಪಿ ಕೆ.ಎನ್.ರಮೇಶ್ ನೇತೃತ್ವದ ತಂಡ ಸ್ವಚ್ಛಗೊಳಿಸಿದೆ.
    ನಗರದ ಬೆಂಗಳೂರು-ಮೈಸೂರು ಹೆದ್ದಾರಿ ಬದಿಯಲ್ಲಿರುವ ಕಟ್ಟೆಯನ್ನು ಸುಪರ್ದಿಗೆ ಪಡೆದಿದ್ದ ಅಂದಿನ ರಾಮನಗರ – ಚನ್ನಪಟ್ಟಣ ಅಭಿವೃದ್ಧಿ ಪ್ರಾಧಿಕಾರ, ಕೆರೆಯ ದಡದಲ್ಲಿ ಸುಂದರ ಉದ್ಯಾನ ನಿರ್ಮಿಸಿತ್ತು.

    ಬಗೆಬಗೆಯ ಆಲಂಕಾರಿಕ ಗಿಡಗಳು, ವಾಯುವಿಹಾರಿಗಳಿಗಾಗಿ ಅತ್ಯುತ್ತಮ ವಾಕಿಂಗ್ ಪಥ, ದೀಪದ ವ್ಯವಸ್ಥೆ, ವಿಶ್ರಾಂತಿಗಾಗಿ ಬೆಂಚುಗಳು ಸೇರಿ ವಾಯುವಿಹಾರಿಗಳಿಗೆ ಬೇಕಾದ ಸಕಲ ವ್ಯವಸ್ಥೆಯನ್ನೂ ಮಾಡ ಲಾಗಿತ್ತು. ಕುಡಿನೀರು ಕಟ್ಟೆ ದಡದಲ್ಲಿ ಅಂದಾಜು ಒಂದು ಕಿ.ಮೀ. ಉದ್ದದ ವಾಕಿಂಗ್ ಪಾಥ್ ವಾಯುವಿಹಾರಿಗಳ ನೆಚ್ಚಿನ ಸ್ಥಳವಾಗಿತ್ತು.

    ನಗರದ ನೂರಾರು ಮಂದಿ ಉದ್ಯಾನದಲ್ಲಿ ವಾಯುವಿಹಾರ ನಡೆಸುವ ಜೊತೆಗೆ, ಪ್ರಾಕೃತಿಕ ಸೊಬಗನ್ನು ಸವಿಯುತ್ತಿದ್ದರು. ಆದರೆ, ದಿನ ಕಳೆದಂತೆ ಸೂಕ್ತ ನಿರ್ವಹಣೆಯಿಲ್ಲದೆ ಉದ್ಯಾನ ತನ್ನ ಕಳೆ ಕಳೆದುಕೊಂಡಿತ್ತು. ಪ್ರಾಧಿಕಾರ ವಿಭಜನೆಯಾದ ನಂತರ, ಉದ್ಯಾನವನ್ನು ಮತ್ತೆ ಜಿಪಂಗೆ ವಹಿಸಲಾಗಿತ್ತು. ಆದರೆ ಯಾರೊಬ್ಬರೂ ಇದರ ನಿರ್ವಹಣೆ ಹೊಣೆ ಹೊರದ ಕಾರಣ ಸೂಕ್ತ ನಿರ್ವಹಣೆಯಿಲ್ಲದೆ ಉದ್ಯಾನದಲ್ಲಿ ಗಿಡ-ಗಂಟಿಗಳು ಬೆಳೆದು, ಉದ್ಯಾನದೊಳಗೆ ಕಾಲಿಡದ ಪರಿಸ್ಥಿತಿ ನಿರ್ಮಾಣವಾಗಿತ್ತು. ಒಂದು ಕಾಲದಲ್ಲಿ ಕಣ್ಮನ ಸೆಳೆಯುತ್ತಿದ್ದ ಈ ಪ್ರದೇಶ ವಿಷಜಂತುಗಳ ವಾಸಸ್ಥಾನ ಹಾಗೂ ಅನೈತಿಕ ಚಟುವಟಿಕೆಗಳ ತಾಣವಾಗಿ ಬದಲಾಗಿತ್ತು.

    ಡಿವೈಎಸ್‌ಪಿ ಟೀಮ್‌ನಿಂದ ಮರುಜೀವ :  ಪೊಲೀಸ್ ವೃತ್ತಿಯೊಂದಿಗೆ ಸಾವಾಜಿಕ ಚಟುವಟಿಕೆಗಳ ಮೇಲೆ ವಿಶೇಷ ಒಲವಿರುವ ಚನ್ನಪಟ್ಟಣ ಉಪ ವಿಭಾಗದ ಡಿವೈಎಸ್‌ಪಿ ಕೆ.ಎನ್. ರಮೇಶ್ ತಾಲೂಕಿಗೆ ವರ್ಗಾವಣೆಯಾಗಿ ಬಂದ ದಿನದಿಂದಲೂ ಹಲವಾರು ಸಾವಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಉದ್ಯಾನದ ಸ್ಥಿತಿ ಕಂಡ ಅವರು, ಇದಕ್ಕೆ ಕಾಯಕಲ್ಪ ನೀಡಬೇಕು ಎಂದು ತೀರ್ವಾನಿಸಿ, ಸಾಮಾಜಿಕ ಚಟುವಟಿಕೆಗಳಿಗಾಗಿಯೇ ರೂಪುಗೊಂಡಿರುವ ಡಿವೈಎಸ್‌ಪಿ ರಮೇಶ್ ಟೀಮ್‌ನ ಸದಸ್ಯರ ಜತೆಗೂಡಿ ಉದ್ಯಾನದ ಸ್ವಚ್ಛತಾ ಕಾರ್ಯ ಆರಂಭಿಸಿದ್ದರು.

    ಕಳೆದ ಭಾನುವಾರ ಸ್ವಚ್ಛತಾ ಕಾರ್ಯ ಆರಂಭಿಸಿದ್ದು, ಅಂದು ತಾಲೂಕಿನ ಎಲ್ಲ ಠಾಣೆಗಳ ಪಿಎಸ್‌ಐಗಳು, ಸಿಬ್ಬಂದಿ, ನಗರಸಭೆ ಹಾಗೂ ವಿವಿಧ ಸಂ ಸಂಸ್ಥೆಗಳು ಈ ಕಾರ್ಯಕ್ಕೆ ಕೈಜೋಡಿಸಿದ್ದವು. ಎರಡು ಭಾನುವಾರ ಮುಂಜಾನೆ ಸ್ವಚ್ಛತಾ ಕಾರ್ಯದಲ್ಲಿ ಖುದ್ದು ಡಿವೈಎಸ್‌ಪಿ ರಮೇಶ್ ತೊಡಗಿಸಿಕೊಂಡಿದ್ದರು. ಸಮಾಜದಲ್ಲಿ ಶ್ರಮದಾನದ ಮೂಲಕ ಸಾರ್ವಜನಿಕ ಆಸ್ತಿ ಉಳಿಸುವ ಮತ್ತು ಅದರ ನಿರ್ವಹಣೆ ವಾಡುವ ಮೂಲಕ ತಂಡದ ಸದಸ್ಯರು ಮಾದರಿಯಾಗಿದ್ದಾರೆ.

    ಎಲ್ಲವನ್ನೂ ಸರ್ಕಾರವೇ ಹಾಗೂ ಸಂಬಂಧಪಟ್ಟವರೇ ಮಾಡಬೇಕು ಎಂಬ ಮನಸ್ಥಿತಿ ಬದಲಾಗಬೇಕು. ಸಾರ್ವಜನಿಕ ಆಸ್ತಿ ರಕ್ಷಿಸಿಕೊಳ್ಳುವ, ಅದನ್ನು ಉತ್ತಮ ಸ್ಥಿತಿಯಲ್ಲಿಟ್ಟುಕೊಳ್ಳುವ ಜವಾಬ್ದಾರಿ ಎಲ್ಲರದ್ದಾಗಿದೆ. ರಜಾದಿನಗಳ ಕೆಲಕಾಲ ಸವಾಜದ ಕೆಲಸಗಳಲ್ಲಿ ನಮ್ಮ ಟೀಮ್ ತೊಡಗಿಸಿಕೊಳ್ಳುತ್ತದೆ. ಕುಡಿನೀರು ಕಟ್ಟೆ ಸ್ವಚ್ಛತಾ ಕಾರ್ಯದಲ್ಲಿ ಪೊಲೀಸರು ಸೇರಿ ತಾಲೂಕಿನ ಸಾಮಾಜಿಕ ಚಿಂತನೆಯ ಮನಸ್ಸುಗಳು ಕೈಜೋಡಿಸಿದ್ದವು.
    ಕೆ.ಎನ್.ರಮೇಶ್ ಡಿವೈಎಸ್‌ಪಿ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts