More

    ಕೀಟಗಳಿಂದ ಅಡಕೆ ಬೆಳೆಗಿಲ್ಲ ಹಾನಿ

    ಶಿವಮೊಗ್ಗ: ತೀರ್ಥಹಳ್ಳಿ ತಾಲೂಕಿನ ಕೆರೋಡಿ ಹಾಗೂ ಸುತ್ತಲ ಗ್ರಾಮಗಳ ತೋಟಗಳಲ್ಲಿ ಕಂಡುಬಂದಿರುವ ಕೀಟದಿಂದ ಅಡಕೆ ಬೆಳೆಗೆ ಯಾವುದೇ ಹಾನಿ ಇಲ್ಲ ಎಂದು ಶಿವಮೊಗ್ಗ ಕೃಷಿ ಹಾಗೂ ತೋಟಗಾರಿಕೆ ವಿವಿ ವಿಜ್ಞಾನಿ ಡಾ. ನಾಗರಾಜಪ್ಪ ಅಡಿವೆಪ್ಪರ್ ತಿಳಿಸಿದ್ದಾರೆ.

    ಕೆರೋಡಿ ಮುಂತಾದ ಗ್ರಾಮಗಳ ಅಡಕೆ ತೋಟಗಳಲ್ಲಿ ಹೊಸ ಬಗೆಯ ಕೀಟ ಕಾಣಿಸಿಕೊಂಡಿರುವ ಬಗ್ಗೆ ಶಿವಮೊಗ್ಗ ಕೃಷಿ ಹಾಗೂ ತೋಟಗಾರಿಕೆ ವಿವಿ ಕುಲಪತಿ ಡಾ.ಎಂ.ಕೆ.ನಾಯ್್ಕ ಅವರಿಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಸೋಮವಾರ ವಿಜ್ಞಾನಿಗಳ ತಂಡವೊಂದನ್ನು ಪರಿಶೀಲನೆಗೆಂದು ಕಳುಹಿಸಿಕೊಟ್ಟಿದ್ದರು.

    ಈ ಭಾಗದ ಅಡಕೆ ತೋಟಗಳಲ್ಲಿ ಕಂಡುಬಂದ ಮಿಡತೆ ಟೈಗರ್ ಬೀಟಲ್ ಜಾತಿಗೆ ಸೇರಿದ ಹುಳು. ಅಡಕೆ ಬೆಳೆಗೆ ಯಾವುದೇ ಹಾನಿ ಉಂಟು ಮಾಡುವುದಿಲ್ಲ. ಕೆಲ ದಿನಗಳ ಹಿಂದೆ ಬೇರೆ ರಾಜ್ಯಗಳಲ್ಲಿ ಪತ್ತೆಯಾದ ಮಿಡತೆ ಟೈಗರ್ ಬೀಟಲ್ ಎಂಬ ಪರಭಕ್ಷಕ ಕೀಟವಾಗಿದೆ. ಆದರೆ ಇದು ಬೇರೆ ಕೀಟಗಳನ್ನು ತಿಂದು ಬದುಕುವ ಉಪಯುಕ್ತ ಕೀಟ. ಇದರಿಂದ ಯಾವುದೇ ತೊಂದರೆಯಿಲ್ಲ ಎಂದು ವಿಜ್ಞಾನಿಗಳ ತಂಡ ಸ್ಪಷ್ಟಪಡಿಸಿದೆ.

    ಕೃಷಿ ಮತ್ತು ತೋಟಗಾರಿಕೆ ವಿವಿ ವಿಜ್ಞಾನಿಗಳಾದ ಡಾ. ಎಂ.ರವಿಕುಮಾರ್, ಡಾ. ಶರಣಬಸಪ್ಪ ದೇಶಮುಖ್, ರೇವತಿ, ತೀರ್ಥಹಳ್ಳಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಸಿದ್ದಲಿಂಗೇಶ್ ಅಡಕೆ ತೋಟಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts