More

    ಕಿಷ್ಕಿಂಧೆಯಿಂದ ಅಯೋಧ್ಯೆಗೆ ರೈಲು ಸಂಚಾರ ಆರಂಭಿಸಿ

    ಯಲ್ಲಾಪುರ: ಅಯೋಧ್ಯೆಯಲ್ಲಿ ನಡೆಯಲಿರುವ ರಾಮ ಮಂದಿರ ಭೂಮಿಪೂಜೆಯ ಸಂದರ್ಭದಲ್ಲಿ ಹನುಮನ ಜನ್ಮಭೂಮಿಯಾದ ಅಂಜನಾದ್ರಿಯಿಂದ ಬೆಳ್ಳಿ ಲೇಪನದ ಶಿಲೆಯನ್ನು ಸಮರ್ಪಿಸಲು ತೆರಳುತ್ತಿರುವ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ ಮುತಾಲಿಕ ಹಾಗೂ ಪ್ರಮುಖರನ್ನು ಪಟ್ಟಣದ ಜೋಡುಕೆರೆ ಬಳಿ ಗುರುವಾರ ಸ್ವಾಗತಿಸಲಾಯಿತು.

    ಮಾರುತಿ ದೇವಸ್ಥಾನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಪ್ರಮೋದ ಮುತಾಲಿಕ, ಕಿಷ್ಕಿಂಧೆಯಿಂದ ಅಯೋಧ್ಯೆಗೆ ರೈಲು ಸಂಚಾರ ಆರಂಭಿಸುವ ಮೂಲಕ ರಾಮ ಹಾಗೂ ಹನುಮಂತರ ನಡುವಿನ ಬಾಂಧವ್ಯವನ್ನು ಮತ್ತೆ ಬೆಸೆಯುವ ಕಾರ್ಯವನ್ನು ಕೇಂದ್ರ ಸರ್ಕಾರ ಮಾಡಬೇಕು ಎಂದು ಆಗ್ರಹಿಸಿದರು.

    ರಾಮ ಮಂದಿರಕ್ಕೆ ಸಮರ್ಪಿಸಲು ಗ್ರಾಮದೇವಿ ದೇವಸ್ಥಾನದ ಆವಾರದಿಂದ ತಂದ ಮಣ್ಣು ಹಾಗೂ ಟಿಳಕ್ ಚೌಕದ ಯುವಕರು ಬೆಳ್ಳಿ ನಾಣ್ಯವನ್ನು ಮುತಾಲಿಕ ಅವರಿಗೆ ಹಸ್ತಾಂತರಿಸಿದರು. ಶ್ರೀರಾಮ ಸೇನೆಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ಸ್ಥಳೀಯ ಪ್ರಮುಖರಾದ ಬಾಬು ಬಾಂದೇಕರ್, ಪ್ರಮೋದ ಹೆಗಡೆ, ನಾರಾಯಣ ಪುರಾಣಿಕ, ಜಿ.ಎನ್. ಗಾಂವ್ಕಾರ, ಪ್ರಸಾದ ಹೆಗಡೆ, ಸೋಮೇಶ್ವರ ನಾಯ್ಕ, ಸತೀಶ ನಾಯ್ಕ, ಗಿರೀಶ ಭಾಗ್ವತ ಸೇರಿ ಸ್ಥಳೀಯ ಮುಖಂಡರು ಭಾಗವಹಿಸಿದ್ದರು. ನಂತರ ಮಾಗೋಡ ಕ್ರಾಸ್​ವರೆಗೆ ಬೈಕ್ ರ‍್ಯಾಲಿ ನಡೆಸಿ ಅವರನ್ನು ಬೀಳ್ಕೊಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts