More

    ಕಿಮ್ಸ್​ನಲ್ಲಿ ವಾಕ್ ಶ್ರವಣ ಸೇವಾ ಕೇಂದ್ರ

    ಹುಬ್ಬಳ್ಳಿ: ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ ಸ್ಥಾಪಿಸಲ್ಪಟ್ಟಿರುವ ಮೈಸೂರಿನ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯ ಸೇವಾ ಕೇಂದ್ರವನ್ನು ನಗರದ ಕಿಮ್್ಸ ಆಸ್ಪತ್ರೆಯಲ್ಲಿ ಆರಂಭಿಸಲಾಗಿದೆ.

    ಶ್ರವಣ ದೋಷವಿರುವ ರೋಗಿಗಳಿಗೆ ಅವಶ್ಯ ಸೇವೆ ಒದಗಿಸುವ, ಸಂಶೋಧನೆ ಮಾಡುವುದು ಹಾಗೂ ಧ್ವನಿ ತಡೆಯಿಲ್ಲದೆ ಮಾತನಾಡುವ ಶಬ್ಧಗಳು, ಭಾಷೆಯ ಬಗ್ಗೆ ಜನರಲ್ಲಿ ಅರಿವುಂಟು ಮಾಡುವ ಮಹತ್ತರ ಕಾರ್ಯವನ್ನು ಈ ಸಂಸ್ಥೆ ಮಾಡಲಿದೆ.

    ಉತ್ತರ ಕರ್ನಾಟಕ ಭಾಗದಲ್ಲಿ ಇಂತಹ ಒಂದು ಪ್ರತಿಷ್ಠಿತ ಸಂಸ್ಥೆಯ ಕೇಂದ್ರವನ್ನು ಕಿಮ್ಸ್​ನಲ್ಲಿ ಪ್ರಾರಂಭಿಸಲು 2019ರ ಫೆಬ್ರವರಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಕೇಂದ್ರ ಆರೋಗ್ಯ ಸಚಿವರಿಗೆ ಹಾಗೂ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯ ಮುಖ್ಯಸ್ಥೆ ಪ್ರೊ. ಎಂ. ಪುಷ್ಪವತಿ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದರು.

    ಇದರ ಫಲವಾಗಿ ಇಲ್ಲಿನ ಕರ್ನಾಟಕ ಇನ್​ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಕಿಮ್್ಸ) ಆವರಣದಲ್ಲಿ ಹೊಸ ಔಟ್​ರೀಚ್ ಸರ್ವಿಸ್ ಸೆಂಟರ್​ನ ವರ್ಚುವಲ್ ಉದ್ಘಾಟನೆಯನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹರ್ಷವರ್ಧನ್ ಅವರು ನೆರವೇರಿಸಿದ್ದಾರೆ. ಕಿಮ್ಸ್​ನಲ್ಲಿ ಪ್ರತಿವರ್ಷ ಸಂವಹನ ನ್ಯೂನತೆಯಿರುವ ಅಂದಾಜು 3000 ರೋಗಿಗಳನ್ನು ಗುರುತಿಸಲಾಗುತ್ತಿದೆ. ಅವರನ್ನು ಚಿಕಿತ್ಸೆಗೆ ಮೈಸೂರಿನ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಗೆ ಶಿಫಾರಸು ಮಾಡಲಾಗುತ್ತಿದೆ. ಈಗ ಈ ಚಿಕಿತ್ಸೆಗೆ ಇಲ್ಲಿಯೇ ಪರಿಹಾರ ಕಂಡುಕೊಳ್ಳಬಹುದು ಎಂದು ಸಚಿವ ಜೋಶಿ ಹೇಳಿದ್ದಾರೆ.

    ಮಾತನಾಡುವಿಕೆ, ಭಾಷೆ, ಆಲಿಸುವಿಕೆ ಮತ್ತು ವಿಶೇಷ ಶಿಕ್ಷಣ ಕ್ಷೇತ್ರದಲ್ಲಿ ಪಿಎಚ್.ಡಿ ಪದವೀಧರರಿಗೆ ಸರ್ಟಿಫಿಕೇಟ್ ಕೋರ್ಸ್​ಗಳು, ಸಂವಹನ ತೊಂದರೆಗಳಿಂದ ಬಳಲುತ್ತಿರುವ ಎಲ್ಲ ವಯೋಮಾನದವರಿಗೆ ಬೇರೆ ಬೇರೆ ವಿಭಾಗಗಳಲ್ಲಿ ಪರೀಕ್ಷಿಸಿ ರೋಗ ಪತ್ತೆ ಮಾಡಲು ಇದರಿಂದ ಅನುಕೂಲವಾಗಲಿದೆ. ಇಡೀ ಉತ್ತರ ಕರ್ನಾಟಕ ಭಾಗಕ್ಕೆ ಇದರಿಂದ ಉಪಯೋಗವಾಗಲಿದೆ.

    ಅಲ್ಲದೆ, ಪ್ರತಿ ವರ್ಷ ಕಿಮ್್ಸ ಆಸ್ಪತ್ರೆಯಲ್ಲಿ ಸ್ಕ್ರೀನಿಂಗ್ ಅಗತ್ಯ ಇರುವ 10 ಸಾವಿರ ಶಿಶುಗಳಿಗೂ ನೆರವಾಗಲಿದೆ. ಮೈಸೂರಿನಲ್ಲಿ ದೊರೆಯುವ ಎಲ್ಲ ರೀತಿಯ ಚಿಕಿತ್ಸೆಗಳೂ ಈಗ ಹುಬ್ಬಳ್ಳಿಯಲ್ಲಿ ಸಿಗುವಂತಾಗಿರುವುದು ಈ ಭಾಗದ ಜನರಲ್ಲಿ ಹರ್ಷ ತಂದಿದೆ ಎಂದು ಅವರು ತಿಳಿಸಿದ್ದಾರೆ.

    ಈ ಕೇಂದ್ರ ಮಂಜೂರು ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅವರಿಗೆ ಮತ್ತು ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯ ಮುಖ್ಯಸ್ಥೆ ಪ್ರೊ. ಎಂ. ಪುಷ್ಪವತಿ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿಯೂ ಜೋಶಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts