More

    ಕಿಕ್ಕೇರಿಯಾದ್ಯಂತ ಆಷಾಢ ಕೊನೇ ಪೂಜೆ

    ಕಿಕ್ಕೇರಿ: ಹೋಬಳಿಯಾದ್ಯಂತ ಆಷಾಢಮಾಸದ ಕೊನೇ ಶುಕ್ರವಾರದ ಪೂಜೆ ವಿಜೃಂಭಣೆಯಿಂದ ಜರುಗಿತು. ಪಟ್ಟಣದ ಕಿಕ್ಕೇರಮ್ಮ, ಬ್ರಹ್ಮೇಶ್ವರ ದೇಗುಲದ ಪಾರ್ವತಿದೇವಿ, ಸಿಂಗಮ್ಮ ದೇವಿ, ವಡಕಹಳ್ಳಿ ಚಿಕ್ಕಳಮ್ಮ, ಗದ್ದೆಹೊಸೂರು ಗುಂಡು ಮಾರಿಯಮ್ಮ, ಸಾಸಲು ಕುದುರೆಮಂಡಮ್ಮ, ಮಂದಗೆರೆ ಕಟ್ಟೆಪರಮೇಶ್ವರಿ, ಊಗಿನಹಳ್ಳಿ ಸಿಂಗಮ್ಮ, ಮಾದಾಪುರ ಸಿಂಗಮ್ಮದೇವಿ, ಅನೆಗೊಳದ ಆನೆಗೊಳಮ್ಮ ಮತ್ತಿತರ ದೇಗುಲಗಳಲ್ಲಿ ವಿಶೇಷ ಪೂಜೆಗಳು ನಡೆದವು.
    ಬೇವಿನಹಳ್ಳಿಯ ಚಾಮುಂಡೇಶ್ವರಿ ದೇಗುಲದಲ್ಲಿ ಚಾಮುಂಡೇಶ್ವರಿ, ಭದ್ರಕಾಳಿ, ಸುಬ್ರಹ್ಮಣ್ಯ, ಗಣಪತಿ, ಆಂಜನೇಯ ಮತ್ತಿತರ ದೇವರಿಗೆ ವಿಶೇಷವಾಗಿ ಪುಷ್ಪಾಲಂಕಾರ ಮಾಡಲಾಗಿತ್ತು. ದೇವಿಗೆ ಪಂಚಾಮೃತ ಅಭಿಷೇಕ, ಪುಷ್ಪಾರ್ಚನೆ, ಕುಂಕುಮಾರ್ಚನೆ ನಡೆಯಿತು. ದೇವಿಗೆ ಪರಿಮಳ ಪುಷ್ಪ, ವಸ್ತ್ರಾಭರಣಗಳೊಂದಿಗೆ ಸರ್ವಾಲಂಕಾರ ಮಾಡಲಾಗಿತ್ತು. ಮಹಿಳೆಯರು ನಿಂಬೆಹಣ್ಣಿನ ಆರತಿ ಬೆಳಗಿದರು. ಹಲವರು ಮನೆಯಲ್ಲಿ ಪಾರ್ವತಿ ದೇವಿಯ ಕಳಶವನ್ನು ಇಟ್ಟು ಪೂಜಿಸಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts