More

    ಕಾಳೇನಹಳ್ಳಿಯಲ್ಲಿ ಗೌರಮ್ಮ ಉತ್ಸವ

    ಅರಕಲಗೂಡು: ತಾಲೂಕಿನ ಇತಿಹಾಸ ಪ್ರಸಿದ್ಧ ಕಾಳೇನಹಳ್ಳಿ ಗ್ರಾಮದ ಗೌರಮ್ಮ ದೇವತೆ ಉತ್ಸವ ಬುಧವಾರ ಸಂಭ್ರಮದಿಂದ ಜರುಗಿತು.

    ಬಸವನಹಳ್ಳಿ ಗ್ರಾಮದ ಕಾವೇರಿ ನದಿ ದಂಡೆಯ ಈಶ್ವರ ದೇವಸ್ಥಾನದ ಸನ್ನಿಧಿಯಲ್ಲಿ ಮಣ್ಣು, ಕಡಲೇಹಿಟ್ಟು, ಬೆಣ್ಣೆಯಿಂದ ಮಿಶ್ರಣ ಮಾಡಿ ಗೌರಮ್ಮ ತಾಯಿ ಮೂರ್ತಿ ಸ್ಥಾಪಿಸಿ ಸಂಪ್ರದಾಯ ಬದ್ಧವಾಗಿ ಪೂಜೆ ಪುನಸ್ಕಾರಗಳನ್ನು ಸಲ್ಲಿಸಲಾಯಿತು. ಅಡ್ಡಪಲ್ಲಕ್ಕಿ ಉತ್ಸವ ಮೂಲಕ ಕರೆತರಲಾಯಿತು.

    ಮಹಿಳೆಯರು ಗೌರಮ್ಮ ತಾಯಿಗೆ ಬಾಗಿನ ಅರ್ಪಿಸಿ ಪೂಜೆ ಸಲ್ಲಿಸಿದರು. ಬಸವನಹಳ್ಳಿಕೊಪ್ಪಲು, ಟಿ.ಕೊಪ್ಪಲು ಮಾರ್ಗವಾಗಿ ಕಾಳೇನಹಳ್ಳಿ ಗ್ರಾಮಕ್ಕೆ ಗೌರಮ್ಮ ತಾಯಿಯನ್ನು ಬರಮಾಡಿಕೊಳ್ಳಲಾಯಿತು. ಊರಿನ ಹೆಣ್ಣು ಮಕ್ಕಳು ಉಪವಾಸ ವ್ರತ ಮಾಡಿ ಗೌರಮ್ಮ ತಾಯಿಗೆ ಪೂಜೆ ಸಲ್ಲಿಸಿದರು.

    ಕಾಳೇನಹಳ್ಳಿ ಗ್ರಾಮದ ಗರ್ಭಗುಡಿಗೆ ಗೌರಮ್ಮ ತಾಯಿಯನ್ನು ಕರೆತಂದು ಪೂಜಾ ವಿಧಾನಗಳನ್ನು ಪೂರೈಸಿ ಪ್ರತಿಷ್ಠಾಪಿಸಲಾಯಿತು. ಒಂದು ತಿಂಗಳ ಕಾಲ ಅಮಾವಾಸ್ಯೆ ತನಕ ದೇವಸ್ಥಾನದಲ್ಲಿ ಪೂಜೆ ನಡೆಯಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts