More

    ಕಾಳುಮೆಣಸು ವೈಜ್ಞಾನಿಕ ಕೃಷಿ ತರಬೇತಿ

    ಶಿರಸಿ: ಕೋವಿಡ್- 19 ಸಂದರ್ಭದಲ್ಲಿ ರೈತರ ಜಮೀನುಗಳಿಗೆ ತೆರಳಲು ಕಷ್ಟವಾದ ಕಾರಣ ಇಲ್ಲಿನ ತೋಟಗಾರಿಕೆ ವಿಸ್ತರಣೆ ಶಿಕ್ಷಣ ಘಟಕದ ವತಿಯಿಂದ ರೈತರಿಗೆ ಕಾಳುಮೆಣಸು ವೈಜ್ಞಾನಿಕ ಕೃಷಿ ಮತ್ತು ರೋಗ ನಿರ್ವಹಣೆ ಕ್ರಮಗಳ ಬಗ್ಗೆ ಅಂತರ್ಜಾಲದಲ್ಲಿಯೇ ತರಬೇತಿ ನೀಡಲಾಯಿತು.

    ತರಬೇತಿ ಕಾರ್ಯಕ್ರಮದಲ್ಲಿ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ. ಎನ್.ಕೆ. ಹೆಗಡೆ, ಕಾಳುಮೆಣಸಿನ ಬೆಳೆಗಾರರು ಮುಂಗಾರಿನಲ್ಲಿ ಕೈಗೊಳ್ಳಬೇಕಾದ ಕೃಷಿ ಕಾಳಜಿಗಳ ಬಗ್ಗೆ ಮಾಹಿತಿ ನೀಡಿದರು. ಕಾಳುಮೆಣಸಿನ ತಳಿಗಳ ಆಯ್ಕೆ ಮತ್ತು ಬೆಳೆಯುವ ವಿಧಾನ, ನಾಟಿ ಮಾಡುವ ವಿಧಾನಗಳ ಕುರಿತು ವಿವರಿಸಿದರು.

    ಸಂಪನ್ಮೂಲ ವ್ಯಕ್ತಿ ಡಾ. ಪ್ರಶಾಂತ ಎ. ಮಾತನಾಡಿ, ಕಾಳುಮೆಣಸಿನಲ್ಲಿ ತಲೆದೋರುವ ರೋಗದ ಲಕ್ಷಣಗಳು ಮತ್ತು ಅವುಗಳ ಸಾಂಪ್ರದಾಯಿಕ ಹತೋಟಿ ನಿರ್ವಹಣೆ ಕ್ರಮಗಳ ಕುರಿತು ಮಾಹಿತಿ ನೀಡಿದರು. ಜೈವಿಕ ಗೊಬ್ಬರಗಳ ಬಳಕೆ ಹಾಗೂ ಇತರ ರೋಗಗಳ ವೈಜ್ಞಾನಿಕ ನಿರ್ವಹಣೆ ಬಗ್ಗೆ ರೈತರಿಗೆ ತಿಳಿಸಿದರು.

    ತೋಟಗಾರಿಕೆ ವಿಸ್ತರಣೆ ಶಿಕ್ಷಣ ಘಟಕದ ವಿಸ್ತರಣೆ ಮುಂದಾಳು ಡಾ. ಶಿವಕುಮಾರ ಕೆ.ಎಂ. ಅವರು ಕಾಳುಮೆಣಸಿನ ಬೆಳೆಯಲ್ಲಿ ಮಣ್ಣಿನ ಆರೋಗ್ಯ ಮತ್ತು ಪೋಷಕಾಂಶಗಳ ನಿರ್ವಹಣೆ ಕ್ರಮಗಳ ಸಂಪೂರ್ಣ ಮಾಹಿತಿ ನೀಡಿದರು.

    ತರಬೇತಿ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ 25ಕ್ಕೂ ಹೆಚ್ಚು ರೈತರು ಅಂತರ್ಜಾಲದ ಮೂಲಕ ಭಾಗವಹಿಸಿದ್ದರು. ಬಳಿಕ ರೈತರೊಂದಿಗೆ ನಡೆದ ಸಂವಾದದಲ್ಲಿ ವಿಷಯ ಸಂಪನ್ಮೂಲ ವಿಜ್ಞಾನಿಗಳು ರೈತರ ಸಮಸ್ಯೆಗಳಿಗೆ ಸೂಕ್ತ ಮಾಹಿತಿ ನೀಡಿದರು. ಡಾ. ಪ್ರೀತಮ್ ಎಸ್.ಪಿ. ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts