More

    ಕಾಳಿ ನದಿಯ ನೀರನ್ನು ಮಾಲಿನ್ಯ ಮುಕ್ತಗೊಳಿಸಿ

    ಕಾರವಾರ: ಕಾಳಿ ನದಿಯ ನೀರನ್ನು ಎರಡು ವರ್ಷದಲ್ಲಿ ಸಂಪೂರ್ಣ ಮಾಲಿನ್ಯ ಮುಕ್ತ ಮಾಡಲು ಕೂಡಲೇ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ಸೂಚಿಸಿದರು.

    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳೊಂದಿಗೆ ಶುಕ್ರವಾರ ಸಭೆ ನಡೆಸಿ ಅವರು ಮಾತನಾಡಿದರು.

    ಸುಪ್ರೀಂ ಕೋರ್ಟ್ ಹಸಿರು ಪೀಠದ ಆದೇಶದಂತೆ ಈಗಾಗಲೇ ಜಿಲ್ಲಾ ಮಟ್ಟದ ಪರಿಸರ ಟಾಸ್ಕ್ ಫೋರ್ಸ್ ಸಮಿತಿ ರಚಿಸಲಾಗಿದೆ. ಈ ಸಮಿತಿ ಕಾಳಿ ನದಿಯನ್ನು ಮಾಲಿನ್ಯ ಮುಕ್ತ ಮಾಡಲು ಶ್ರಮಿಸಬೇಕಿದೆ. ಉಗಮ ಸ್ಥಾನದಲ್ಲಿ ಇರುವಷ್ಟೇ ಶುದ್ಧ ನೀರು ಸಮುದ್ರ ಸೇರುವವರೆಗೂ ಇರುವಂತೆ ನೋಡಿಕೊಳ್ಳಬೇಕು. ಮೊದಲ ಹಂತದಲ್ಲಿ ದಾಂಡೇಲಿಯಿಂದ ಬೊಮ್ಮನಹಳ್ಳಿವರೆಗಿನ 10 ಕಿಮೀ ವ್ಯಾಪ್ತಿಯನ್ನು ಮಾಲಿನ್ಯ ಮುಕ್ತ ಮಾಡುವ ನಿಟ್ಟಿನಲ್ಲಿ ಗಮನ ಕೇಂದ್ರೀಕರಿಸಬೇಕು.

    ನದಿಗೆ ಮಾಲಿನ್ಯ ನೀರು ಸೇರುವುದನ್ನು ಗುರುತಿಸಿ ಅದನ್ನು ನಿಲ್ಲಿಸಬೇಕಿದೆ. ಅದಕ್ಕೆ ನಗರಸಭೆ, ಗ್ರಾಪಂ ಹಾಗೂ ತಾಪಂಗಳು ಸಹಕಾರ ನೀಡಬೇಕು. ನದಿಯನ್ನು ಮಲಿನಗೊಳಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಎಚ್ಚರಿಸಿದರು.

    ಘನ ಮತ್ತು ದ್ರವ ತ್ಯಾಜ್ಯ ವಿಲೇವಾರಿ ಇನ್ನಷ್ಟು ಸಮರ್ಪಕವಾಗಿ ನೆರವೇರುವಂತೆ ನಗರ ಸ್ಥಳೀಯ ಸಂಸ್ಥೆಗಳು ಕ್ರಮ ವಹಿಸಬೇಕು ಎಂದು ಸೂಚಿಸಿದರು. ಎಡಿಸಿ ಕೃಷ್ಣಮೂರ್ತಿ, ಜಿಲ್ಲಾ ಪರಿಸರ ಅಧಿಕಾರಿ ಡಾ.ಎಚ್. ಲಕ್ಷ್ಮೀಕಾಂತ, ಉಪ ಪರಿಸರ ಅಧಿಕಾರಿ ಡಾ.ಗಣಪತಿ ಹೆಗಡೆ, ಡಿವೈಎಸ್​ಪಿ ಅರವಿಂದ ಕಲಗುಜ್ಜಿ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts