More

    ಕಾಲುವೆ ಎತ್ತರಿಸಲು ಸರ್ಕಾರಕ್ಕೆ ಪ್ರಸ್ತಾವನೆ

    ಚಿಕ್ಕೋಡಿ: ಭಾಗದ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸದ್ಯ ಇರುವ ಸಿಬಿಸಿ ಕಾಲುವೆ ಎತ್ತರ ಮಾಡಬೇಕೆಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ವಿಪ ಸದಸ್ಯ ಪ್ರಕಾಶ ಹುಕ್ಕೇರಿ ತಿಳಿಸಿದರು.

    ತಾಲೂಕಿನ ಬಸವನಾಳ ಗಡ್ಡೆ ಬಳಿ ಕೃಷ್ಣಾ ನದಿಯಿಂದ ಪೈಪ್‌ಲೈನ್ ಮೂಲಕ ಸಿಬಿಸಿ ಕೆನಾಲ್ ನೀರು ತುಂಬಿಸುವ ಯೋಜನೆಗೆ ಸೋಮವಾರ ಚಾಲನೆ ನೀಡಿ ಮಾತನಾಡಿದ ಅವರು, ಸಿಬಿಸಿ ಕಾಲುವೆಗೆ ಕೃಷ್ಣಾ ನದಿ ನೀರು ತಂದು ಕೊನೆಯ ಹಳ್ಳಿಯ ರೈತರಿಗೆ ನೀರು ಕೊಡುವ ಈ ಯೋಜನೆಗೆ 145 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದರು. ಯೋಜನೆ ಮೂಲಕ 12,634 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸುತ್ತದೆ. ಕಾಲುವೆ ದುರಸ್ತಿಗೆ 5 ಕೋಟಿ ರೂ. ಖರ್ಚು ಮಾಡಿ ರೈತರಿಗೆ ಸಂಪೂರ್ಣ ನೀರಾವರಿ ಸೌಲಭ್ಯ ಒದಗಿಸಲಾಗಿದೆ. ಕಾಲುವೆಯ 54 ಕಿ.ಮೀ. ಯಿಂದ 88 ಕಿ.ಮೀ. ವರೆಗೆ ಇರುವ ಸಿಬಿಸಿ ಕಾಲುವೆ ಮೂಲಕ ಕೊನೆ ಗ್ರಾಮಗಳಾದ ರಾಂಪೂರ, ಚಿಕ್ಕಲವಾಳ ರೈತರಿಗೆ ನೀರು ತಲುಪಿಸಲು ಎಲ್ಲ ರೈತರು ಸಹಕಾರ ನೀಡಬೇಕು ಎಂದರು.

    ಅಧ್ಯಕ್ಷತೆ ವಹಿಸಿದ್ದ ಶಾಸಕ ಗಣೇಶ ಹುಕ್ಕೇರಿ ಮಾತನಾಡಿ, ಸಿಬಿಸಿ ಕಾಲುವೆ ಮೂಲಕ ಕೃಷ್ಣಾ ನದಿ ನೀರು ಕಡೆಯ ಗ್ರಾಮಕ್ಕೆ ತಲುಪಿಸಲು ಅಧಿಕಾರಿಗಳೊಂದಿಗೆ ರೈತರು ಸಹಕರಿಸಿದ್ದಾರೆ. ಸದ್ಯ 1,250 ಎಚ್‌ಪಿ ಎರಡು ಪಂಪ್‌ಸೆಟ್ ಬಳಸಲಾಗುತ್ತಿದ್ದು, ಈಗ ನೀರು ಬರಲಾರಂಭಿಸಿದೆ. ಮೂರನೇ ಪಂಪ್‌ಸೆಟ್ ಆರಂಭ ಮಾಡಬೇಕು ಎಂದರೆ ಕಾಲುವೆ ಎತ್ತರಿಸಬೇಕಾಗುತ್ತದೆ. ಆ ಯೋಜನೆ ಕೂಡ ಶೀಘ್ರ ಮಂಜೂರಾಗುತ್ತದೆ ಎಂದರು.

    ನಿಡಸೋಸಿ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಚಿಂಚಣಿ ಅಲ್ಲಮಪ್ರಭು ಸ್ವಾಮೀಜಿ ಮಾತನಾಡಿದರು. ಮುಖಂಡರಾದ ಶಂಕರ ಟೊಣ್ಣೆ, ರಾಕೇಶ ಚಿಂಚಣಿ, ಅನಿಲ ಮಾನೆ, ಗುಲಾಬ್ ಬಾಗವಾನ್, ಸುರೇಶ ಚೌಗಲೆ, ವಿವೇಕ ಪಾಟೀಲ, ವರ್ಧಮಾನ ಸದಲಗೆ, ಮಹಾದೇವ ಪವಾರ, ರಾಜು ಪಾಟೀಲ, ರವಿ ಪಾಟೀಲ, ದೀಪಕ ಮುದ್ದಪ್ಪಗೋಳ, ಮಲ್ಲಿಕಾರ್ಜುನ ಚೌಗಲಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts