More

    ಕಾಲಕಾಲೇಶ್ವರ ಗುಡ್ಡಕ್ಕೆ ಬೆಂಕಿ

    ಗಜೇಂದ್ರಗಡ: ಕಿಡಿಗೇಡಿಗಳು ಕಾಲಕಾಲೇಶ್ವರ ಗುಡ್ಡಕ್ಕೆ ಶನಿವಾರ ಸಂಜೆ ಬೆಂಕಿ ಹಚ್ಚಿರುವುದರಿಂದ ಕುರುಚಲು ಕಾಡು ಬೆಂಕಿಗೆ ಆಹುತಿಯಾಗಿದೆ. ಕಳೆದ ಎರಡ್ಮೂರು ದಿನಗಳಿಂದ ಕಿಡಿಗೇಡಿಗಳು ಕತ್ತಲಾಗುತ್ತಿದ್ದಂತೆ ಈ ಭಾಗದ ಗುಡ್ಡದ ತುದಿಗೆ ಹೋಗಿ ಬೆಂಕಿ ಹಾಕುತ್ತಿದ್ದು ಸಾಲು ಗುಡ್ಡಗಳು ಇಡೀ ರಾತ್ರಿ ಹೊತ್ತಿ ಉರಿಯುತ್ತಿವೆ. ಗುಡ್ಡಕ್ಕೆ ಬೆಂಕಿ ಹಾಕಿದರೆ ಹುಲ್ಲು ಚಿಗುರುತ್ತದೆ ಎಂಬ ತಪ್ಪು ಕಲ್ಪನೆ ಈ ಭಾಗದ ಕುರಿಕಾಯುವರಲ್ಲಿ ಬಲವಾಗಿ ಬೇರೂರಿದೆ. ಗುಡ್ಡದ ತುದಿಯವರೆಗೂ ಹೋಗುವ ಕುರಿ ಹಾಗೂ ದನಗಾಹಿಗಳು ಸಂಜೆ ಗುಡ್ಡ ಇಳಿಯುವಾಗ ಒಣ ಹುಲ್ಲಿಗೆ ಬೆಂಕಿ ಹಚ್ಚಿ ಬರುತ್ತಾರೆ. ಗಾಳಿ ಬೀಸಿದ ಕಡೆ ಬೆಂಕಿ ಪಸರಿಸಿ ಇಡೀ ಗುಡ್ಡದ ಕಾಡನ್ನು ಬಲಿತೆಗೆದುಕೊಳ್ಳುತ್ತಿದೆ.

    ವಸಂತದಲ್ಲಿ ಗಿಡ ಮರಗಳು ಎಲೆ ಉದುರಿಸಿ ಹೊಸ ಚಿಗುರು ಮುಡಿಯುವುದು ಪ್ರಕೃತಿಯ ನಿಯಮ. ಬೆಂಕಿ ಹಾಕುವುದರಿಂದ ಹುಲ್ಲು, ಎಲೆ ಚಿಗುರುತ್ತವೆ ಎಂಬುದು ಮೂಢನಂಬಿಕೆ.

    ಬೇಸಿಗೆಯ ದಿನಗಳಲ್ಲಿ ಗುಡ್ಡಕ್ಕೆ ಬೆಂಕಿ ಹಚ್ಚುವವರನ್ನು ಪತ್ತೆ ಹಚ್ಚಿ ಶಿಕ್ಷೆ ವಿಧಿಸಲು ಯಾರೂ ಮುಂದೆ ಬರುತ್ತಿಲ್ಲ. ಅರಣ್ಯ ಕಾಯ್ದೆ ಅಡಿಯಲ್ಲಿ ಗುಡ್ಡಕ್ಕೆ ಬೆಂಕಿ ಹಚ್ಚುವುದು ಅಪರಾಧ. ಅಂತವರಿಗೆ ಕನಿಷ್ಠ 2 ವರ್ಷ ಶಿಕ್ಷೆ ಅಥವಾ 5 ಸಾವಿರ ರೂ. ದಂಡ ವಿಧಿಸಲಾಗುತ್ತಿದೆ. ಇದುವರೆಗೆ ಯಾರಿಗೂ ಶಿಕ್ಷೆ ವಿಧಿಸಿದ ದಾಖಲೆಗಳಿಲ್ಲ.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts