More

    ಕಾರ್ವಿುಕರ ವಿಮಾ ಆಸ್ಪತ್ರೆ ಶೀಘ್ರ ಮಂಜೂರು ಮಾಡಿ

    ಹಾವೇರಿ: ಜಿಲ್ಲೆಯಲ್ಲಿ ಒಂಬತ್ತಕ್ಕೂ ಹೆಚ್ಚು ಗಾರ್ವೆಂಟ್ಸ್​ಗಳಿವೆ. ಕಾರ್ವಿುಕರ ಹಿತದೃಷ್ಟಿಯಿಂದ ವಿಮಾ ಆಸ್ಪತ್ರೆಯನ್ನು ಕೂಡಲೇ ಮಂಜೂರು ಮಾಡಬೇಕು. ಜಿಲ್ಲೆಗೊಂದರಂತೆ ಕಾರ್ವಿುಕ ಸಮುದಾಯ ಭವನ ನಿರ್ವಿುಸಬೇಕು ಎಂದು ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾರ್ವಿುಕ ಒಕ್ಕೂಟದ ಅಧ್ಯಕ್ಷ ಬಿ. ದೇವರಾಜ ಹೇಳಿದರು.

    ನಗರದ ಡಾ. ಬಿ.ಆರ್. ಅಂಬೇಡ್ಕರ್ ಸಭಾಭವನದಲ್ಲಿ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾರ್ವಿುಕ ಒಕ್ಕೂಟದ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ಜಿಲ್ಲಾ ಕಾರ್ವಿುಕರ ಸಮಾವೇಶದಲ್ಲಿ ಅವರು ಮಾತನಾಡಿದರು.

    ಜಿಲ್ಲೆಯು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು. ಕಾರ್ವಿುಕ ಸಚಿವ ಶಿವರಾಮ ಹೆಬ್ಬಾರ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. ಹೀಗಾಗಿ, ಕಾರ್ವಿುಕರ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಅನುಕೂಲಕರ ವಾತಾವರಣವಿದೆ. ಇದಕ್ಕೆ ಅವರ ಇಚ್ಛಾಶಕ್ತಿ ಅವಶ್ಯ ಎಂದರು. ಶ್ರೀಚಕ್ರ ಸೇವಾ ಟ್ರಸ್ಟ್​ನ ಶ್ರೀನಿವಾಸನ್ ಗುರೂಜಿ ಸಾನ್ನಿಧ್ಯ ವಹಿಸಿದ್ದರು. ಸಮಾವೇಶದಲ್ಲಿ ರಾಜ್ಯ ಕಾರ್ಯಾಧ್ಯಕ್ಷ ಆರ್. ಶ್ರೀನಿವಾಸ, ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಮಾತನಾಡಿದರು.

    ಎಸ್ಸೆಸ್ಸೆಲ್ಸಿ ಮತ್ತು ಪಿಯು ಪರೀಕ್ಷೆಯಲ್ಲಿ ಶೇಕಡ 85ಕ್ಕಿಂತ ಹೆಚ್ಚು ಫಲಿತಾಂಶ ಪಡೆದ ಕಾರ್ವಿುಕರ ಪ್ರತಿಭಾವಂತ ಮಕ್ಕಳಿಗೆ ಸಮಾವೇಶದಲ್ಲಿ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಜಿಲ್ಲೆಯ ಹಿರಿಯ ಆಯ್ದ ಕಾರ್ವಿುಕರಿಗೆ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

    ಕಾರ್ವಿುಕರ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರ ಮಗಳು ಗಮನ ಸೆಳೆದವು. ಜೂನಿಯರ್ ವಿಷ್ಣುವರ್ಧನ್ ಅವರಿಂದ ಮನರಂಜನಾ ಕಾರ್ಯ ಕ್ರಮ ಜರುಗಿತು.

    ಜಿಲ್ಲಾ ಘಟಕದ ಅಧ್ಯಕ್ಷ ನಾಗಪ್ಪ ಬಂಡಿವಡ್ಡರ, ರಾಜ್ಯ ಉಪಾಧ್ಯಕ್ಷ ಪುಲಕೇಶಪ್ಪ ಕಮ್ಮಾರ, ಕಾರ್ವಿುಕ ಮುಖಂಡ ಮೈಲಾರಪ್ಪ ಕಮ್ಮಾರ, ಗಿರೀಶ ತರ್ಲಿ, ಕುತುಬುದ್ದೀನ್ ಖಾಜಿ, ರಾಜು ಬಡಿಗೇರ, ದಾಕ್ಷಾಯಿಣಿ ಬಡಿಗೇರ, ಗಂಗಮ್ಮ, ಅಮಾನುಲ್ಲಾ, ನೂರ್​ಅಹಮದ್ ಖೇಣಿ, ಈರಪ್ಪ ಲಮಾಣಿ, ವಿವಿಧ ಜಿಲ್ಲೆಗಳ ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳು, ಕಾರ್ವಿುಕರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts