More

    ಕಾರ್ವಿುಕರ ಬೇಡಿಕೆ ಈಡೇರಿಕೆಗೆ ಆಗ್ರಹ

    ಹುಬ್ಬಳ್ಳಿ: ಎಲ್ಲ ಕಾರ್ವಿುಕರಿಗೆ 6 ತಿಂಗಳ ಕಾಲ ಉಚಿತ ಆಹಾರ ಧಾನ್ಯ ಪೂರೈಕೆ, ಕಾರ್ವಿುಕ ಕಾನೂನು ತಿದ್ದುಪಡಿ ಕೈಬಿಡುವುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಾರ್ವಿುಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ವತಿಯಿಂದ ನಗರದ ಮಿನಿ ವಿಧಾನಸೌಧ ಎದುರು ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

    ಆದಾಯ ತೆರಿಗೆ ವ್ಯಾಪ್ತಿಯಿಂದ ಹೊರಗಿರುವ ಕುಟುಂಬ ಗಳಿಗೆ 6 ತಿಂಗಳು ಮಾಸಿಕ 7,500 ರೂಪಾಯಿ ಸಹಾಯಧನ ನೀಡಬೇಕು, ಬಿಸಿಯೂಟ, ಅಂಗನವಾಡಿ, ಆಶಾ ಮುಂತಾದ ಸ್ಕೀಂ ನೌಕರರ ಗೌರವಧನ ಹೆಚ್ಚಿಸಿ, ಕಾಯಂಗೊಳಿಸಬೇಕು. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹೆಚ್ಚಿಸಿದ ಕೂಲಿಯೊಂದಿಗೆ ಕೆಲಸ 200 ದಿನಗಳಿಗೆ ಹೆಚ್ಚಿಸಿ, ನಗರಗಳಿಗೆ ವಿಸ್ತರಿಸಿ, ವಲಸೆ ಕಾರ್ವಿುಕರಿಗೂ ಅನ್ವಯಿಸಬೇಕು. ಗುತ್ತಿಗೆ ಕಾರ್ವಿುಕರು ಸೇರಿದಂತೆ ಎಲ್ಲ ಕಾರ್ವಿುಕರಿಗೆ ಲಾಕ್ ಡೌನ್ ಸಂದರ್ಭದ ವೇತನವನ್ನು ಸಂಪೂರ್ಣ ಪಾವತಿಸಿ, ಪೂರ್ಣ ವೇತನದೊಂದಿಗೆ ಕೆಲಸ ಕೊಡಬೇಕು. ಸಾರ್ವಜನಿಕ ವಲಯಗಳ ಖಾಸಗೀಕರಣದ ವಿಚಾರ ಕೈಬಿಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

    ಸಮಿತಿ ಸಂಚಾಲಕ ಮಹೇಶ ಪತ್ತಾರ, ಅಶೋಕ ರ್ಬಾ, ದೇವಾನಂದ ಜಗಾಪೂರ, ಎನ್.ಎ. ಖಾಜಿ, ಅಮೃತ ಇಜಾರಿ, ಬಾಬಾಜಾನ ಮುಧೋಳ, ಪುಂಡಲೀಕ ಬಡಿಗೇರ, ಚಿದಾನಂದ ಸವದತ್ತಿ, ಹುಲಿಗೆಮ್ಮ ಚಲವಾದಿ, ಅನ್ನಪೂರ್ಣಾ ಕುಂಕೂರಮಠ ಇತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts