More

    ಕಾರ್ವಿುಕರ ಖಾತೆಗೆ ಸಹಾಯಧನ ಹಾಕಿ

    ಹಾವೇರಿ: ಲಾಕ್​ಡೌನ್ ಸಂದರ್ಭದಲ್ಲಿ ಸರ್ಕಾರ ಕಾರ್ವಿುಕರಿಗೆ ಘೊಷಿಸಿದ್ದ ಸಹಾಯಧನವನ್ನು ಕೂಡಲೇ ಫಲಾನುಭವಿಗಳ ಖಾತೆಗೆ ಜಮೆ ಮಾಡಬೇಕು. ಎಲ್ಲ ಕಾರ್ವಿುಕರಿಗೆ ಉಚಿತವಾಗಿ ಬಸ್​ಪಾಸ್ ನೀಡುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಗ್ರಾಮೀಣ ಕೃಷಿ ಕೂಲಿ ಕಾರ್ವಿುಕರ ಸಂಘ ಹಾಗೂ ರಾಜ್ಯ ಸಂಯುಕ್ತ ಕಟ್ಟಡ ಕಾರ್ವಿುಕರ ಸಂಘದಿಂದ ಜಿಲ್ಲಾಧಿಕಾರಿಗಳ ಮೂಲಕ ಕಾರ್ವಿುಕ ಸಚಿವರಿಗೆ ಹಾಗೂ ಕಟ್ಟಡ ಕಾರ್ವಿುಕರ ಕಲ್ಯಾಣ ಮಂಡಳಿಯ ನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು.

    ದಿನದಿಂದ ದಿನಕ್ಕೆ ಕರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಇದರಿಂದ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ವಿುಕರು ದುಡಿಮೆ ಇಲ್ಲದೇ ಆರೋಗ್ಯ ವೆಚ್ಚಕ್ಕಾಗಿ ಸಾಲ ಮಾಡಿ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಇಂತಹ ಕಾರ್ವಿುಕರಿಗೆ ಕಲ್ಯಾಣ ಮಂಡಳಿಯು ಇದುವರೆಗೂ ಯಾವುದೇ ವಿಶೇಷ ಆರೋಗ್ಯ ವೆಚ್ಚ ಭರಿಸುವ ಮತ್ತು ಈ ಅವಧಿಯಲ್ಲಿನ ವೇತನ ನೀಡುವ ಸೌಲಭ್ಯ ಜಾರಿಗೊಳಿಸಿಲ್ಲ. ಲಾಕ್​ಡೌನ್ ಅವಧಿಯಲ್ಲಿ ವಿವಿಧ ಸೌಲಭ್ಯಗಳಡಿ ಅರ್ಜಿ ಸಲ್ಲಿಸಲು ಬಹುತೇಕ ಅರ್ಹ ಕಾರ್ವಿುಕರಿಗೆ ಸಾಧ್ಯವಾಗಿಲ್ಲ. ಸದ್ಯ ಅರ್ಜಿ ಸಲ್ಲಿಕೆಗೆ ಕಾಲಮಿತಿ ಮುಗಿದಿದ್ದು, ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಕಲ್ಯಾಣ ಮಂಡಳಿಯು ಈ ಎಲ್ಲ ಸಮಸ್ಯೆಯನ್ನು ಪರಿಗಣಿಸಿ ಕನಿಷ್ಟ ಆರು ತಿಂಗಳವರೆಗೂ ಅರ್ಜಿ ಸಲ್ಲಿಸಲು ಅವಧಿ ವಿಸ್ತರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಕಾರ್ವಿುಕ ಚಿಕಿತ್ಸೆ ಭಾಗ್ಯ ಹೆಸರಿನಡಿ ಕೇವಲ ಕಾರ್ವಿುಕನಿಗೆ ಮಾತ್ರ ವೈದ್ಯಕೀಯ ವೆಚ್ಚ ಮರುಪಾವತಿ ಮಾಡಲಾಗುತ್ತಿದ್ದು, ಇದನ್ನು ಇಎಸ್​ಐ ಮಾದರಿಯಲ್ಲಿ ಕಾರ್ವಿುಕರ ಕುಟುಂಬಕ್ಕೂ ವಿಸ್ತರಿಸಬೇಕು. ಬಿಎಂಟಿಸಿಯಲ್ಲಿ ಸಂಚರಿಸಲು ಕಾರ್ವಿುಕರಿಗೆ ನೀಡಿರುವ ಉಚಿತ ಬಸ್​ಪಾಸ್ ವ್ಯವಸ್ಥೆಯನ್ನು ರಾಜ್ಯವ್ಯಾಪಿ ಎಲ್ಲಾ ಕಾರ್ವಿುಕರಿಗೂ ವಿಸ್ತರಿಸಬೇಕು. ಕಾರ್ವಿುಕ ಗೃಹಭಾಗ್ಯ ಯೋಜನೆಯ ನಿಯಮಗಳು ಯಾವುದೇ ಕಾರ್ವಿುಕರು ಸೌಲಭ್ಯವನ್ನು ಪಡೆಯದ ರೀತಿಯಲ್ಲಿ ರೂಪಿಸಲಾಗಿದೆ. ಈ ಯೋಜನೆಯ ಫಲಾನುಭವಿಯಾಗಬೇಕಾದರೆ ಸರ್ಕಾರದ ಯಾವುದಾದರೂ ವಸತಿ ಯೋಜನೆಗಳ ಫಲಾನುಭವಿ ಆಗಿರಬಾರದು ಎಂಬ ಪೂರ್ವ ಷರತ್ತಿನಿಂದ ಯಾವುದೇ ಕಾರ್ವಿುಕನಿಗೂ ಈ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. ಕೂಡಲೇ ನಿಯಮಗಳನ್ನು ಸರಳೀಕರಿಸಿ ಕಾರ್ವಿುಕರಿಗೆ ಸೌಲಭ್ಯಗಳು ಸಿಗುವಂತೆ ಮಾಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಸಂಘಟನೆ ಮುಖಂಡರಾದ ರಾಜಪ್ಪ ಆಲದಹಳ್ಳಿ, ದುರಗಪ್ಪ ಹುಣಸೀಕಟ್ಟಿ, ನೀಲಪ್ಪ ಹರಿಜನ, ಅಂಜಿನಪ್ಪ ಹರಿಜನ, ಸಂಜೀವ ರ್ಬಾ, ಗಣೇಶಪ್ಪ ನಾಗನಗೌಡ, ಸುರೇಶ ತಿಮ್ಮಜ್ಜಿ, ಅರುಣ ಹುಣಸೀಕಟ್ಟಿ, ಫಕೀರಪ್ಪ ಬಳ್ಳಾರಿ, ಗುಡ್ಡಪ್ಪ ಜಾಡರ, ಚಂದ್ರಶೇಖರ ಕಜ್ಜೇರ ಮನವಿ ಸಲ್ಲಿಸುವ ಸಮಯದಲ್ಲಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts