More

    ಕಾರ್ವಿುಕರನ್ನು ಸಾಗಿಸುತ್ತಿದ್ದ ಟ್ರಕ್​ಗಳು ವಶ

    ಧಾರವಾಡ: ವಲಸೆ ಕಾರ್ವಿುಕರನ್ನು ಅಕ್ರಮವಾಗಿ ಕರೆದೊಯ್ಯುತ್ತಿದ್ದ ಎರಡು ಟ್ರಕ್​ಗಳನ್ನು ಜಪ್ತಿ ಮಾಡಿದ ಘಟನೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ನಡೆದಿದೆ.

    ಎರಡು ಟ್ರಕ್​ಗಳಲ್ಲಿ ಕಾಸರಗೋಡಿನಿಂದ 27 ಹಾಗೂ ಮಂಗಳೂರಿನಿಂದ 47 ಜನ ಸೇರಿ ಒಟ್ಟು 74 ಜನರು ರಾಜಸ್ಥಾನ ಕಡೆಗೆ ಹೊರಟಿದ್ದರು. ಧಾರವಾಡ-ಬೆಳಗಾವಿ ಗಡಿ ಭಾಗದ ಚೆಕ್​ಪೋಸ್ಟ್​ನಲ್ಲಿ ಟ್ರಕ್​ಗಳನ್ನು ತಪಾಸಣೆ ನಡೆಸಿದ ಸಂದರ್ಭದಲ್ಲಿ ಕಾರ್ವಿುಕರು ಇರುವುದು ಪತ್ತೆಯಾಗಿ ಕೂಡಲೇ ಟ್ರಕ್​ಗಳನ್ನು ಜಪ್ತಿ ಮಾಡಿ ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

    74 ಕಾರ್ವಿುಕರನ್ನು ರಕ್ಷಣೆ ಮಾಡಿ ನಗರದ ಪಟ್ಟಣಶೆಟ್ಟಿ ಕಲ್ಯಾಣ ಮಂಟಪದಲ್ಲಿ ಆಶ್ರಯ ನೀಡಲಾಗಿದೆ. ಕಾಸರಗೋಡಿನ 27 ಕಾರ್ವಿುಕರು ಬಸ್ ಪಾಸ್​ಗಳನ್ನು ಪಡೆದಿದ್ದಾರೆ. ಆದರೆ, ಅವರಿಗೆ ಬಸ್ ವ್ಯವಸ್ಥೆ ಮಾಡಲು ಇನ್ನೂ ಒಂದು ವಾರ ಕಾಲ ಸಮಯ ಬೇಕಿರುವ ಹಿನ್ನೆಲೆಯಲ್ಲಿ ಟ್ರಕ್ ಹತ್ತಿ ಹೊರಟಿದ್ದರು. ಕೆಲ ದಿನಗಳಲ್ಲೇ ಈ ಕಾರ್ವಿುಕರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿ ಅವರನ್ನು ರಾಜಸ್ಥಾನಕ್ಕೆ ಕಳುಹಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ತಿಳಿಸಿದ್ದಾರೆ.

    ಎಸ್ಪಿ ಮನವಿ:

    ಟ್ರಕ್ ಹಾಗೂ ಕಂಟೇನರ್​ಗಳಲ್ಲಿ ಸರಕು ಸಾಗಿಸಲು ಮಾತ್ರ ಅವಕಾಶವಿದೆ. ಜನರನ್ನು ಸಾಗಿಸಲು ವಾಹನಗಳು ಸುರಕ್ಷಿತವಾಗಿಲ್ಲ. ಹೀಗಾಗಿ ಚಾಲಕರು ಜನರನ್ನು ಸಾಗಿಸುವುದು ಅಪರಾಧವಾಗಿದೆ. ಇಂತಹ ಪ್ರಕರಣಗಳು ಕಂಡು ಬಂದಲ್ಲಿ ಚಾಲಕರ ಮೇಲೆ ಸೂಕ್ತ ಕ್ರಮಕೈಗೊಳ್ಳಲಾಗುವುದು. ಹೀಗಾಗಿ ಗೂಡ್ಸ್ ವಾಹನಗಳಲ್ಲಿ ಜನರನ್ನು ಕರೆದೊಯ್ಯಬೇಡಿ ಎಂದು ಎಸ್​ಪಿ ವರ್ತಿಕಾ ಕಟಿಯಾರ್ ಮನವಿ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts