More

    ಕಾರವಾರ ಮಾರುಕಟ್ಟೆ ನಾಳೆ ಬಂದ್

    ಕರೊನಾ ನಿಯಂತ್ರಣಕ್ಕೆ ಮಾ.22 ರಂದು ಇಡೀ ದಿನ ಕಾರವಾರ ಮಾರುಕಟ್ಟೆಯ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗುವುದು ಎಂದು ಕಾರವಾರ ಛೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಜಿತೇಂದ್ರ ಥನ್ನಾ ತಿಳಿಸಿದರು.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ವಸ್ತುವಿನ ಮೇಲಿರುವ ಕರೊನಾ ವೈರಸ್ 12 ತಾಸಿನ ನಂತರ ಸಾಯುತ್ತದೆ ಎನ್ನುತ್ತಾರೆ. ಇದರಿಂದ ರೋಗ ಹರಡುವುದನ್ನು ತಡೆಗಟ್ಟಲು 12 ತಾಸು ಸಂಪೂರ್ಣ ವಹಿವಾಟು ಬಂದ್ ಮಾಡಲಾಗುವುದು.

    ನಗರದ ಒಟ್ಟು 11 ಸಂಘಟನೆಗಳು ಒಟ್ಟುಗೂಡಿದ್ದು, ಹೋಟೆಲ್, ದಿನಸಿ, ತರಕಾರಿ, ಬಂಗಾರ ಸೇರಿ ಎಲ್ಲ ವ್ಯಾಪಾರವನ್ನೂ ನಿಲ್ಲಿಸಲಿದ್ದೇವೆ. ಮುಂದಿನ ದಿನದಲ್ಲಿ ಎಲ್ಲ ಅಂಗಡಿಗಳಲ್ಲಿ ಕೆಲಸ ಮಾಡುವವರಿಗೆ ಮಾಸ್ಕ್ ನೀಡಲಾಗುವುದು. ಎಲ್ಲ ಅಂಗಡಿಗಳಲ್ಲಿ ಸೆನಿಟೈಸರ್ ಇಡಲಾಗುವುದು ಎಂದರು.

    ವಿವಿಧ ಸಂಘಟನೆಗಳ ಮುಖಂಡರಾದ ಶ್ಯಾಮಸುಂದರ ಬಸ್ರೂರ್, ಸುಭಾಶ್ಚಂದ್ರ ಶೆಟ್ಟಿ, ಮನೋಹರ ಶೆಟ್ಟಿ, ನಿತಿನ್ ದೇಸಾಯಿ, ಚೇತನ ನೀಲಾವರ, ಅಜಿಜ್, ದೀಪಕ್ ಅಣ್ವೇಕರ್ ಇದ್ದರು.

    ನೌಕಾನೆಲೆಯ ಎಲ್ಲ ನೌಕರರ ಪರಿಶೀಲನೆ: ಕರೊನಾ ವೈರಸ್ ಹರಡದಂತೆ ತಡೆಗಟ್ಟಲು ಕದಂಬ ನೌಕಾನೆಲೆಯ ಎಲ್ಲ ಕಾಯಂ ಹಾಗೂ ಅರೆಕಾಲಿಕ ನೌಕರರ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ತುರ್ತು ಕಾರ್ಯಗಳನ್ನು ಹೊರತುಪಡಿಸಿ ಉಳಿದೆಲ್ಲ ಕಾರ್ಯಗಳನ್ನು ಬಂದ್ ಮಾಡಲಾಗಿದೆ. ಥರ್ಮಲ್ ಸ್ಕ್ಯಾನರ್ ಬಳಸಿ ಎಲ್ಲ ನೌಕರರ ಪರಿಶೀಲನೆ ನಡೆಸಲಾಗುತ್ತಿದೆ. ನೌಕಾನೆಲೆಯ ಹೊರಗೆ ನೆಲೆಸಿರುವ ಕಾರ್ವಿುಕರ ಕ್ಯಾಂಪ್​ಗಳನ್ನೂ ಪರಿಶೀಲನೆ ಮುಂದುವರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

    ರೈಲಿನಿಂದ ಇಳಿಸಿದ ಪೊಲೀಸರು: ದುಬೈನಿಂದ ಮರಳಿದ ವ್ಯಕ್ತಿಗೆ ಕಾರವಾರ ರೈಲ್ವೆ ನಿಲ್ದಾಣದಲ್ಲಿ ದಿಗ್ಬಂಧನಕ್ಕೆ ಒಳಪಡಿಸಿದ ಘಟನೆ ಶುಕ್ರವಾರ ನಡೆಯಿತು. ವಾಸ್ಕೋ-ಬೆಂಗಳೂರು ರೈಲಿನಲ್ಲಿ ಮಂಗಳೂರಿಗೆ ತೆರಳುತ್ತಿದ್ದ ಮಂಗಳೂರು ಮೂಲದ ವ್ಯಕ್ತಿಯುನ್ನು ಕಾರವಾರ ನಿಲ್ದಾನದಲ್ಲಿ ಆರ್​ಪಿಎಫ್ ಸಿಬ್ಬಂದಿ ಇಳಿಸಿಟ್ಟುಕೊಂಡರು. ಆದರೆ, ಅವರನ್ನು ತಪಾಸಣೆ ನಡೆಸಲು ಯಾರೂ ಇಲ್ಲದ ಕಾರಣ ಜನರು ಕರೊನಾ ಆತಂಕ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts