More

    ಕಾರವಾರ ಕಲ್ಲಂಗಡಿ ಗೋವಾ ಮಾರುಕಟ್ಟೆಗೆ

    ಕಾರವಾರ: ತಾಲೂಕಿನಲ್ಲಿ ಬೆಳೆದ ಕಲ್ಲಂಗಡಿ ಗೋವಾಕ್ಕೆ ತೆರಳಲಿದೆ. ಶಾಸಕಿ ರೂಪಾಲಿ ನಾಯ್ಕ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ ಅವರ ಜತೆ ನಡೆಸಿದ ಮಾತುಕತೆ ಫಲಪ್ರದವಾಗಿದೆ.

    ಅಸ್ನೋಟಿ, ಮುಡಗೇರಿ, ಭೈರಾ ಮುಂತಾದೆಡೆ ಸಾವಿರಾರು ಎಕರೆ ಪ್ರದೇಶದಲ್ಲಿ ಕಲ್ಲಂಗಡಿ ಬೆಳೆಸಲಾಗಿದೆ. ಪ್ರತಿ ಬಾರಿ ಈ ಕಲ್ಲಂಗಡಿಯನ್ನು ಹುಬ್ಬಳ್ಳಿ ಭಾಗದ ವ್ಯಾಪಾರಸ್ಥರು ಖರೀದಿ ಮಾಡುತ್ತಿದ್ದರು. ಆದರೆ, ಈಗ ಕರೋನಾ ಭೀತಿಯಲ್ಲಿ 1600 ಟನ್​ಗಳಷ್ಟು ಕಲ್ಲಂಗಡಿಗೆ ಬೇಡಿಕೆಯೇ ಇಲ್ಲವಾಗಿದೆ. ಇದರಿಂದ ರೈತರು ಆತಂಕಿತರಾಗಿದ್ದರು, ಶಾಸಕಿ ರೂಪಾಲಿ ನಾಯ್ಕ ಅವರ ಮೊರೆ ಹೋಗಿದ್ದರು.

    ಶುಕ್ರವಾರ ಗೋವಾ ಸಿಎಂ ಸಾವಂತ ಅವರನ್ನು ಸಂರ್ಪಸಿ ಈ ಬಗ್ಗೆ ಮನವಿ ಮಾಡಿದ್ದರು. ಅದಕ್ಕೆ ಸ್ಪಂದಿಸಿದ ಸಿಎಂ ಅಲ್ಲಿನ ತೋಟಗಾರಿಕೆ ಅಧಿಕಾರಿಗಳಿಗೆ ಸೂಚಿಸಿದ್ದರು. ಗೋವಾ ತೋಟಗಾರಿಕೆ ಅಧಿಕಾರಿಗಳು ಶಾಸಕರಿಗೆ ಕರೆ ಮಾಡಿ ಕಲ್ಲಂಗಡಿಯನ್ನು ಈಗಿನ ಮಾರುಕಟ್ಟೆ ಬೆಲೆಗೆ ಖರೀದಿ ಮಾಡುವ ಬಗ್ಗೆ ಚರ್ಚೆ ನಡೆಸಿದ್ದಾರೆ.

    ಪಣಜಿ ಹಾಗೂ ಮಡಗಾಂವ ಎಪಿಎಂಸಿ ಯಾರ್ಡಗೆ ಇಲ್ಲಿನ ಕಲ್ಲಂಗಡಿ ಸಾಗಾಟ ಶನಿವಾರ ಆರಂಭವಾಗಿದೆ. ಕಾರವಾರ ಹಾಗೂ ಗೋವಾದ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಮಟ್ಟದಲ್ಲೇ ಮಾತುಕತೆ, ಸಾಗಾಟ, ಮಾರಾಟ ಎಲ್ಲವೂ ನಡೆಯಲಿದೆ. ಕಾರವಾರ ನಗರದಲ್ಲಿ ಈಗ ಹಣ್ಣು ಹಂಪಲು ವಿತರಣೆಗೆ ಹೋಗುವ ಗಾಡಿಗಳಲ್ಲೂ ಮಾರಾಟ ವ್ಯವಸ್ಥೆ ಮಾಡುವುದಾಗಿ ಬೆಳೆಗಾರರಿಗೆ ಭರವಸೆ ನೀಡಿದ್ದಾರೆ. ಶನಿವಾರ ಮುಡಗೇರಿ ಭಾಗಕ್ಕೆ ತೆರಳಿ ಬೆಳೆಗಾರರ ಜತೆ ಶಾಸಕಿ ರೂಪಾಲಿ ನಾಯ್ಕ ಈ ಬಗ್ಗೆ ರ್ಚಚಿಸಿದರು.

    ಆಹಾರ ಸಾಮಗ್ರಿ ಪೂರೈಸಿ: ಕಾರವಾರ: ಕರೊನಾ ಸೋಂಕು ನಿಯಂತ್ರಣಕ್ಕಾಗಿ ಲಾಕ್ ಡೌನ್ ಅವಧಿಯಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಆಹಾರ ಸಾಮಗ್ರಿಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಶಾಸಕಿ ರೂಪಾಲಿ ನಾಯ್ಕ ಅಧಿಕಾರಿಗಳಿಗೆ ಸೂಚಿಸಿದರು.

    ತಮ್ಮ ಕಾರ್ಯಾಲಯದಲ್ಲಿ ಶುಕ್ರವಾರ ಸಭೆ ನಡೆಸಿ ಮಾತನಾಡಿದರು. ನಗರ ಹಾಗೂ ಗ್ರಾಮೀಣ ಭಾಗದಲ್ಲಿ ದಿನಸಿ, ತರಕಾರಿ, ಹಾಲು, ಹಣ್ಣು, ಮೊಟ್ಟೆ, ನೀರು ಮತ್ತಿತರ ಅಗತ್ಯ ವಸ್ತುಗಳು ಎಲ್ಲೆಡೆ ಸರಬರಾಜು ಆಗುವಂತೆ ಕ್ರಮ ವಹಿಸಬೇಕು. ಪ್ರತಿ ಗ್ರಾಮಪಂಚಾಯಿತಿ ಮಟ್ಟದಲ್ಲಿ ನೋಡಲ್ ಅಧಿಕಾರಿಯನ್ನು ನೇಮಕ ಮಾಡಬೇಕು. ಅವರು ಮತ್ತು ಪಿಡಿಒ ಸೇರಿ ಆಹಾರ ಸಾಮಗ್ರಿಗಳ ವಿತರಣೆಯ ಉಸ್ತುವಾರಿ ವಹಿಸಬೇಕು ಎಂದು ಸೂಚಿಸಿದರು.

    ಕರೊನಾ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳು, ತಯಾರಿಗಳ ಬಗ್ಗೆ ಮಾಹಿತಿ ಪಡೆದು ಸೂಚನೆಗಳನ್ನು ನೀಡಿದರು. ಕ್ರಿಮ್್ಸ ನಿರ್ದೇಶಕ ಗಜಾನನ ನಾಯಕ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಶಿವಾನಂದ ಕುಡ್ತಲಕರ್, ತಹಸೀಲ್ದಾರ್ ಆರ್.ವಿ.ಕಟ್ಟಿ, ಡಿವೈಎಸ್​ಪಿ ಅರವಿಂದ ಕಲಗುಜ್ಜಿ, ಸಿಪಿಐ ಸಂತೋಷ ಶೆಟ್ಟಿ, ನಗರಸಭೆ ಇಇ ಆರ್.ಪಿ.ನಾಯಕ, ತಾಪಂ ಇಒ ಆನಂದ, ಸಮಾಜ ಕಲ್ಯಾಣಾದಿಕಾರಿ ಪ್ರವೀಣ ಪಾಟೀಲ, ತೋಟಗಾರಿಕೆ ಅಧಿಕಾರಿ ಅಕ್ಷಯಕುಮಾರ ಉಪಾಧ್ಯ ಹಾಗೂ ದಯಾನಂದ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts