More

    ಕಾಯ್ದೆ ತಿದ್ದುಪಡಿ ಕೈಬಿಡಲು ಮನವಿ

    ಹುಬ್ಬಳ್ಳಿ: ರೈತರು ಬೆಳೆದ ಹೆಸರು, ಸೋಯಾಬೀನ್, ಮೆಕ್ಕೆಜೋಳವನ್ನು ಶೀಘ್ರವೇ ಬೆಂಬಲ ಬೆಲೆಯಲ್ಲಿ ಖರೀದಿ ಮಾಡಬೇಕು. ಕರ್ನಾಟಕ ಭೂ ಸುಧಾರಣೆ ಕಾಯ್ದೆ ತಿದ್ದುಪಡಿಯನ್ನು ಕೈಬಿಡಬೇಕು ಎಂದು ಹುಬ್ಬಳ್ಳಿ ತಾಲೂಕು ರೈತ ಸಂಘದ ಪದಾಧಿಕಾರಿಗಳು, ಧಾರವಾಡದಲ್ಲಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರಿಗೆ ಪ್ರತ್ಯೇಕ ಮನವಿ ಸಲ್ಲಿಸಿದರು.

    ರೈತರು ಬೆಳೆದ ಬೆಳೆಗಳನ್ನು ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಖರೀದಿಸಲಾಗುತ್ತಿದೆ. ಹಾಗಾಗಿ ರೈತರು ಸಾಕಷ್ಟು ಸಂಕಷ್ಟ ಎದುರಿಸುತ್ತಿದ್ದಾರೆ. ಶೀಘ್ರವೇ ಖರೀದಿ ಕೇಂದ್ರ ತೆರೆಯಬೇಕು. ರಾಜ್ಯ ಸರ್ಕಾರ ಜಾರಿಗೆ ತಂದಿರುವ ಭೂ ಸುಧಾರಣಾ ಕಾಯ್ದೆ ರೈತ ವಿರೋಧಿಯಾಗಿದೆ. ಕಾಪೋರೇಟ್ ಕಂಪನಿಗಳ ಪರವಾಗಿದೆ. ಕೂಡಲೇ ಈ ತಿದ್ದುಪಡಿ ಕಾಯ್ದೆಯನ್ನು ಕೈಬಿಡಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

    ಸಂಘದ ಅಧ್ಯಕ್ಷ ಪರ್ವತಪ್ಪ ಬಣಗಳ್ಣವರ, ನಿಂಗನಗೌಡ ಪಾಟೀಲ, ಚನ್ನಬಸಪ್ಪ ಅಸುಂಡಿ, ಫಕ್ಕೀರಪ್ಪ ಕಲ್ಲಣ್ಣವರ, ಸಿದ್ದಪ್ಪ ಮೇಟಿ, ಹನುಮಂತಗೌಡ್ರ ಪಾಟೀಲ, ಡಿ.ಟಿ. ಪಾಟೀಲ, ಗುರುಸಿದ್ದಪ್ಪ ಉಗರಗೋಳ, ಗುರುಸಿದ್ದಪ್ಪ ಕಟಗಿ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts