More

    ಕಾಯಕ ನಿಷ್ಠೆ ಮೇಲು ಎಂದು ಸಾರಿದ್ದ ಚಂದಯ್ಯ

    ಬೆಳಗಾವಿ: ಜಾತಿ, ಧರ್ಮಗಳ ಭೇದ&ಭಾವ ತೊಲಗಿಸಲು 12ನೇ ಶತಮಾನದಲ್ಲಿ ಶ್ರಮಿಸಿದ ಅನೇಕ ಶರಣರಲ್ಲಿ ನುಲಿಯ ಚಂದಯ್ಯ ಅವರೂ ಒಬ್ಬರಾಗಿದ್ದಾರೆ. ಇಂತಹ ಶ್ರೇಷ್ಠ ಶರಣ ಇಡೀ ಜಗತ್ತಿಗೆ ಲಿಂಗ ನಿಷ್ಠೆಗಿಂತ ಕಾಯಕ ನಿಷ್ಠೆ ಮೇಲು ಎನ್ನುವ ದಿವ್ಯ ಸಂದೇಶ ಸಾರಿದ್ದಾರೆ ಎಂದು ನಿವೃತ್ತ ಪ್ರಾಧ್ಯಾಪಕ ಐ.ಎಸ್​.ಕುಂಬಾರ ಹೇಳಿದರು.

    ನಗರದ ಕುಮಾರ ಗಂಧರ್ವ ರಂಗ ಮಂದಿರದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ನುಲಿಯ ಚಂದಯ್ಯನವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
    ಗುರು, ಲಿಂಗ, ಜಂಗಮ ತತ್ವವನ್ನು ಜಗತ್ತಿಗೆ ಪಸರಿಸಿದ ಶರಣ ನುಲಿಯ ಚಂದಯ್ಯ ಅವರು ನುಡಿದಂತೆ ನಡೆದ ಶ್ರೇಷ್ಠ ವಚನಕಾರ. ಬಸವಣ್ಣನವರ ಸಾಮಾಜಿಕ, ಧಾರ್ಮಿಕ ಚಿಂತನೆಗೆ ಆಕರ್ಷಿತರಾಗಿ ಕಾಯಕ ಯೋಗಿಯಂತೆ ಬದುಕಿದರು ಎಂದರು.

    ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಜಿಲ್ಲಾ ಕೊರಮ ಸಮಾಜದ ೇಮಾಭಿವೃದ್ಧಿ ಸಂದ ಅಧ್ಯಕ್ಷ ರಾಮಜಿ ಭಜಂತ್ರಿ, ಮಂಗಳವಾದ್ಯ ಹಾಗೂ ಬ್ಯಾಂಡ್​ ಕಲಾವಿದರ ಸಂದ ಅಧ್ಯಕ್ಷ ಪರಶುರಾಮ ವಾಜಂತ್ರಿ, ಕೊರಮ ಸಮಾಜದ ಜಿಲ್ಲಾ ಮುಖಂಡರಾದ ಚಂದ್ರು ಸುಬಸಾರೆ, ಯಮನಪ್ಪ ಭಜಂತ್ರಿ, ಪ್ರವಿಣ ಕಣಗಲೆ, ಸಂಜು ವಾಜಂತ್ರಿ ಇದ್ದರು. ಇದಕ್ಕೂ ಮೊದಲು ಬೆಳಗಾವಿ ನಗರದ ಅಶೋಕ ವೃತ್ತದಿಂದ ಕುಮಾರ ಗಂಧರ್ವ ಕಲಾ ಮಂದಿರದವರೆಗೆ ಕುಂಭ ಮೇಳದೊಂದಿಗೆ ನುಲಿಯ ಚಂದಯ್ಯನವರ ಭಾವಚಿತ್ರದ ಮೆರವಣಿಗೆ ಜರುಗಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts