More

    ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಿ

    ಬಾಗಲಕೋಟೆ: ನಗರೋತ್ಥಾನ-೩. ೪, ೧೫ನೇ ಹಣಕಾಸು ಹಾಗೂ ಎಸ್‌ಎಫ್‌ಸ ಯೋಜನೆಯಡಿ ಬಾಗಲಕೋಟೆ ನಗರದಲ್ಲಿ ೧೨.೯೧ ಕೋಟಿ ರೂ.ಗಳ ೮೨ ಕಾಮಗಾರಿಗಳಿಗೆ ಶಾಸಕ ವೀರಣ್ಣ ಚರಂತಿಮಠ ಸೋಮವಾರ ಭೂಮಿ ಪೂಜೆ ನೆರವೇರಿಸಿದರು.
    ನಗರದ ವಲ್ಲಭಾಯಿ ಚೌಕ್‌ನಲ್ಲಿ ನಗರಸಭೆ ವತಿಯಿಂದ ಹಮ್ಮಿಕೊಂಡ ೮೨ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿ ಅವರು, ನಗರೋತ್ಥಾನ ಹಂತ-೩ ಯೋಜನೆಯಡಿ ೧.೭ ಕೋಟಿ ರೂ. ರೂ.ಗಳ ಕಾಮಗಾರಿ, ಮುಖ್ಯಮಂತ್ರಿಗಳ ಅಮೃತ್ ನಗರೋತ್ಥಾನ ಹಂತ-೪ರಡಿ ೬.೪೬ ಕೋಟಿ ರೂ., ಪ್ರಸಕ್ತ ಸಾಲಿನ ೧೫ನೇ ಹಣಕಾಸು ಯೋಜನೆಯಡಿ ೩.೬೮ ಕೋಟಿ ರೂ., ಎಸ್.ಎಫ್.ಸಿ ಹಾಗೂ ಎಸ್.ಸಿ.ಪಿ, ಟಿ.ಎಸ್.ಪಿ ಅಡಿ ೨೭.೩೨ ಲಕ್ಷ ರೂ. ಹಾಗೂ ನಗರಸಭೆ ಸ್ಥಳೀಯ ನಿಯಡಿ ೭೩.೭೯ ಲಕ್ಷ ರೂ.ಗಳಲ್ಲಿ ಒಟ್ಟು ೮೨ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದರು.
    ಈ ಎಲ್ಲ ಕಾಮಗಾರಿಗಳು ಮಾರ್ಚ ಅಂತ್ಯದೊಳಗೆ ಪೂರ್ಣಗೊಳಿಸಬೇಕು. ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುವ ಮೂಲಕ ವೇಗವಾಗಿ ಕೆಲಸ ನಡೆಸಬೇಕು. ಕಾಮಗಾರಿ ಪರಿಶೀಲನೆಗೆ ಉಸ್ತುವಾರಿ ನೇಮಿಸಿ ಗುಣಮಟ್ಟದ ಕೆಲಸವಾಗುವಂತೆ ನೋಡಿಕೊಳ್ಳಲಾಗುತ್ತದೆ. ವಾರದಲ್ಲಿ ಒಂದು ದಿನ ಕಾಮಗಾರಿ ಪರಿಶೀಲಿಸುವ ಕಾರ್ಯವಾಗಬೇಕು. ಅಂದಾಗ ಮಾತ್ರ ಕಾಮಗಾರಿ ಗುಣಮಟ್ಟವಾಗಿರಲು ಸಾಧ್ಯವಾಗುತ್ತದೆ. ಜನರಿಗೆ ಮೂಲಭೂತ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ನಮಗೆ ಜನರ ಹಿತದೃಷ್ಠಿ ಮುಖ್ಯವಾಗಿದೆ ಎಂದು ಹೇಳಿದರು.
    ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಉಪಾಧ್ಯಕ್ಷ ಬಸವರಾಜ ಅವರಾದಿ, ಬುಡಾದ ಅಧ್ಯಕ್ಷ ಬಸವಲಿಂಗಪ್ಪ ನಾವಲಗಿ, ನಗರಸಭೆ ಸಭಾಪತಿ ಅಂಬಾಜಿ ಜೋಶಿ, ಬಿಟಿಡಿಎ ಸದಸ್ಯರಾದ ಶಿವಾನಂದ ಟವಳಿ, ವಿಧಾನ ಪರಿಷತ್ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ, ಬಿಟಿಡಿಎ ಮಾಜಿ ಅಧ್ಯಕ್ಷ ಜಿ.ಎನ್.ಪಾಟೀಲ, ನಗರಸಭೆ ಸದಸ್ಯರು ಹಾಗೂ ನಗರಸಭೆ ಆಯುಕ್ತ ವಾಸಣ್ಣ ಆರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts