More

    ಕಾನೂನು ಚೌಕಟ್ಟಿನಲ್ಲಿ ಸಮಸ್ಯೆಗಳಿಗೆ ಪರಿಹಾರ

    ಬಸವಕಲ್ಯಾಣ: ನಗರದ ತಹಸಿಲ್ ಕಚೇರಿಯಲ್ಲಿ ಬುಧವಾರ ಜಿಲ್ಲಾಧಿಕಾರಿ ಗೋವಿಂದ ರಡ್ಡಿ ಅವರು ಸಾರ್ವಜನಿಕರಿಂದ ಕುಂದು-ಕೊರತೆಗಳ ಅಹವಾಲು ಸ್ವೀಕರಿಸಿದರು. ಕಾನೂನಿನ ಚೌಕಟ್ಟಿನಲ್ಲಿ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿದರು.

    ರೈತ ಮುಖಂಡರು, ಸಾರ್ವಜನಿಕರ ಸಮಸ್ಯೆಗಳನ್ನು ಸಮಾಧಾನದಿಂದ ಆಲಿಸಿದ ಜಿಲ್ಲಾಧಿಕಾರಿ, ಬಹುತೇಕ ಅಜರ್ಿಗಳನ್ನು ಸ್ಥಳದಲ್ಲಿ ಇತ್ಯರ್ಥಪಡಿಸಿದರು. ವಿವಿಧ ಇಲಾಖೆಗೆ ಸಂಬಂಧಪಟ್ಟ ಕೆಲ ಅಜರ್ಿಗಳ ವಿಚಾರವಾಗಿ ಅಧಿಕಾರಿಗಳಗೆ ಕರೆ ಮಾಡಿ ಸಮಸ್ಯೆ ಪರಿಹಾರಕ್ಕೆ ತಕ್ಷಣ ಕ್ರಮ ಕೈಗೊಳ್ಳುವ ಜತೆಗೆ ವರದಿ ನೀಡುವಂತೆ ಸೂಚಿಸಿದರು.
    ಅಹವಾಲು ಸ್ವೀಕರಿಸುವ ಮಾಹಿತಿ ಮೊದಲೇ ಇದ್ದ ಹಿನ್ನೆಲೆಯಲ್ಲಿ ನಗರ ಸೇರಿದತೆ ಗ್ರಾಮೀಣ ಪ್ರದೇಶದ ಕೆಲವರು ತಮ್ಮ ಸಮಸ್ಯೆಗೆ ಪರಿಹಾರದ ನಿರೀಕ್ಷೆಯಲ್ಲಿ ಸಮಯಕ್ಕೂ ಮುನ್ನವೇ ತಹಸಿಲ್ ಕಚೇರಿಗೆ ಆಗಮಿಸಿದ್ದರು. ಡಿಸಿ ಬರುತ್ತಲೇ ಕೆಲವರು ನಿಯೋಗದ ಮೂಲಕ ಮನವಿ ಪತ್ರ ಸಲ್ಲಿಸಿದರು. ಸಾರ್ವಜನಿಕರು ಒಬ್ಬೊಬ್ಬರಾಗಿ ಭೇಟಿ ಮಾಡಿ ಸಮಸ್ಯೆಯನ್ನು ಹೇಳಿಕೊಂಡರು.

    ಕಬ್ಬಿಗೆ ನಿಗದಿತ ದರ ನೀಡಲು ಕ್ರಮ ಕೈಗೊಳ್ಳಬೇಕು. ರಾತ್ರಿ ಹೊಲಗದ್ದೆಗಳಲ್ಲಿ ರೈತರು ಹಲವು ರೀತಿಯ ಸಮಸ್ಯೆ ಎದುರಿಸುತ್ತಿದ್ದು, ರಾತ್ರಿ ವೇಳೆಯಲ್ಲಿ ಹೊಲ-ಗದ್ದೆಗಳಿಗೆ ಸಿಂಗಲ್ ಫೇಸ್ ವಿದ್ಯುತ್ ಕಲ್ಪಿಸಬೇಕು. ಕಾಡು ಹಂದಿ ಕಾಟ ನಿಯಂತ್ರಿಸಬೇಕು. ಬೆಳೆ ವಿಮೆ ಕೆಲ ಪ್ರದೇಶಕ್ಕೆ ಸೀಮಿತವಾಗಿದ್ದು, ಎಲ್ಲರಿಗೂ ವಿಸ್ತರಿಸಲು ರಾಜ್ಯ ರೈತ ಸಂಘದ ತಾಲೂಕು ಉಪಾಧ್ಯಕ್ಷ ಸಂತೋಷಕುಮಾರ ಗುದಗೆ ನೇತೃತ್ವದಲ್ಲಿ ಮನವಿ ಪತ್ರ ಸಲ್ಲಿಸಿಕೆಯಾಯಿತು.

    ಹೊಲಗದ್ದೆಗಳಲ್ಲಿ ಕಾಡು ಹಂದಿಗಳು ದಾಳಿ ಇಟ್ಟು ಬೆಳೆ ನಾಶ ಮಾಡುತ್ತಿವೆ. ನಿಯಂತ್ರಣಕ್ಕೆ ಸಂಬಂಧಿಸಿದ ಅಧಿಕಾರಿಗಳ ಜತೆಗೆ ಚಚರ್ಿಸಲು ವಿಶೇಷ ಸಭೆ ಕರೆಯುವಂತೆ ರಾಜ್ಯ ರೈತ ಸಂಘ (ಕೋಡಿಹಳ್ಳಿ ಚಂದ್ರಶೇಖರ ಬಣ) ಜಿಲ್ಲಾ ಉಪಾಧ್ಯಕ್ಷ ಚಂದ್ರಶೇಖರ ಜಮಖಂಡಿ, ತಾಲೂಕು ಕಾಯರ್ಾಧ್ಯಕ್ಷ ಸುಭಾಷ ರಗಟೆ ನೇತೃತ್ವದಲ್ಲಿ ಪದಾಧಿಕಾರಿಗಳು ಜಿಲ್ಲಾಧಿಕಾರಿಗೆ ಮನವಿ ಮಾಡಿದರು. ರೈತರ ಕಬ್ಬಿನ ಬಾಕಿ ಹಣ ಬಿಡುಗಡೆ ಮಾಡಲು ಕಾಖರ್ಾನೆಯವರಿಗೆ ಸೂಚನೆ ನೀಡಬೇಕು ಎಂದು ಕೋರಿದರು.

    ನಿರಂತರ ಮಳೆಯಿಂದಾಗಿ ಬಡಜನರ ಮನೆಗಳು ಬಿದ್ದಿರುವ ಹಿನ್ನೆಲೆಯಲ್ಲಿ ಅವರಿಗೆ ಪರಿಹಾರ ಧನ ನೀಡುವ ಜತೆಗೆ ಹೊಸ ಮನೆ ಮಂಜೂರು ಮಾಡಬೇಕು. ಉನ್ನತ ವ್ಯಾಸಂಗದ ವಿದ್ಯಾಥರ್ಿ ವೇತನಕ್ಕಾಗಿ ನಗರಸಭೆಗೆ ಅಜರ್ಿ ಸಲ್ಲಿಸಿ ವರ್ಷ ಕಳೆದರೂ ವಿದ್ಯಾಥರ್ಿಗಳಿಗೆ ಬಂದಿಲ್ಲ. ಸಫಾಯಿ ಕರ್ಮಚಾರಿಗಳಿಗೆ ಸಕರ್ಾರದ ಸೌಲಭ್ಯಗಳನ್ನು ಕಲ್ಪಿಸಲು ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಮುಖಂಡ ಧನರಾಜ ರಾಜೋಳೆ ಮನವಿ ಮಾಡಿದರು.

    ತಾಲೂಕಿನಲ್ಲಿ ಬಗರ್ ಹುಕುಂ ಸಾಗುವಳಿ ಮಾಡುತ್ತಿರುವ ರೈತರಿಗೆ ಜಮೀನು ಮಂಜೂರು ಮಾಡಬೇಕು ಮತ್ತು ಸಾರ್ವಜನಿಕ ಆಸ್ಪತ್ರೆಯಲ್ಲಿ ಬಾಣಂತಿಯರಿಗೆ ಉತ್ತಮ ರೀತಿಯಲ್ಲಿ ಚಿಕಿತ್ಸೆ ನೀಡಲು ಅನುಭವ ಹೊಂದಿದ ಸ್ಟಾಫ್ನಸರ್್ಗಳನ್ನು ಕರ್ತವ್ಯಕ್ಕೆ ನಿಯೋಜನೆ ಮಾಡಬೇಕು ಎಂದು ಆಲ್ ಇಂಡಿಯಾ ಸಮತಾ ಸೈನಿಕ ದಳದ ತಾಲೂಕು ಅಧ್ಯಕ್ಷ ಎಂ.ಮಾರುತಿ ಫುಲೆ ಕೋರಿದರು. ಸಹಾಯಕ ಆಯುಕ್ತ ರಮೇಶ ಕೋಲಾರ, ತಹಸೀಲ್ದಾರ್ ಸಾವಿತ್ರಿ ಸಲಗರ, ಗ್ರೇಡ್-2 ತಹಸೀಲ್ದಾರ್ ಪಲ್ಲವಿ ಬೆಳಕೆರೆ ಇತರರಿದ್ದರು.

    ಸ್ಥಳದಲ್ಲಿಯೇ ಅರ್ಜಿ ವಿಲೇವಾರಿ: ನಾಲ್ಕು ಗಂಟೆಗೂ ಹೆಚ್ಚು ಕಾಲ ಸಾರ್ವಜನಿಕರ ಕುಂದುಕೊರತೆಯನ್ನು ಆಲಿಸಿದ ಜಿಲ್ಲಾಧಿಕಾರಿ ಗೋವಿಂದ ರಡ್ಡಿ ಅವರು, ಬಹುತೇಕ ಅಜರ್ಿಗಳನ್ನು ಸ್ಥಳದಲ್ಲಿಯೇ ವಿಲೇವಾರಿ ಮಾಡುವ ಮೂಲಕ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಂಡರು. ಸಲ್ಲಿಕೆಯಾದ 60ಕ್ಕೂ ಹೆಚ್ಚು ಅಜರ್ಿ, ಅಹವಾಲುಗಳಲ್ಲಿ 40ಕ್ಕೂ ಹೆಚ್ಚು ತಕ್ಷಣ ವಿಲೇವಾರಿ ಮಾಡಲಾಗಿದ್ದು, ಉಳಿದ ಅಜರ್ಿಗಳಿಗೆ ಸಂಬಂಧಿಸಿದಂತೆ ಸೂಕ್ತ ಕ್ರಮಕ್ಕಾಗಿ ಆಯಾ ಇಲಾಖೆ ಅಧಿಕಾರಿಗಳಿಗೆ ನಿದರ್ೇಶನ ನೀಡಿದರು. ರಸ್ತೆ ಸಮಸ್ಯೆ, ಹೊಲಗಳಿಗೆ ದಾರಿ, ಪಹಣಿ ತಿದ್ದುಪಡಿ, ರಸ್ತೆ ಅತಿಕ್ರಮಣ ಹಾಗೂ ಬೆಳೆ ಹಾನಿ, ಮನೆ ಕುಸಿತ ಸೇರಿದಂತೆ ಇತರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಅಹವಾಲುಗಳು ಸಲ್ಲಿಕೆಯಾಗಿದ್ದು, ಕೆಲವರು ಸಮಸ್ಯೆ ಜಟೀಲ ಕುರಿತು ಡಿಸಿ ಗಮನಕ್ಕೆ ತಂದು ಪರಿಹಾರ ಕಂಡುಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts