More

    ಕಾನೂನು ಅರಿವಿನಿಂದ ಅನ್ಯಾಯಕ್ಕೆ ಕಡಿವಾಣ

    ರಾಣೆಬೆನ್ನೂರ: ಮಾನವನ ಹಕ್ಕು ಉಲ್ಲಂಘನೆ ಆದಾಗ ಅಥವಾ ಅನ್ಯಾಯಕ್ಕೆ ಒಳಗಾದಾಗ ಅವರಿಗೆ ನ್ಯಾಯ ಒದಗಿಸಿ ಕೊಡಲು ಕಾನೂನು ಇದೆ. ಆದ್ದರಿಂದ ಪ್ರತಿಯೊಬ್ಬರೂ ಕಾನೂನು ಬಗ್ಗೆ ಅರಿತುಕೊಳ್ಳಬೇಕು ಎಂದು 1ನೇ ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾಧೀಶ ರಾಜೇಶ ಕಮತೆ ಹೇಳಿದರು.

    ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಪೊಲೀಸ್ ಇಲಾಖೆ ವತಿಯಿಂದ ನಗರದ ಕೆ.ವಿ. ಪಾಲಿಟೆಕ್ನಿಕ್ ವಿದ್ಯಾಲಯದಲ್ಲಿ ಗುರುವಾರ ಏರ್ಪಡಿಸಿದ್ದ ಶಾಶ್ವತ ಲೋಕ ಅದಾಲತ್, ಪೋಕ್ಸೊ ಹಾಗೂ ಬಾಲ ನ್ಯಾಯ ಕಾಯ್ದೆಗಳ ಕುರಿತ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ಪ್ರತಿಯೊಂದು ಅನ್ಯಾಯ, ಅತ್ಯಾಚಾರದಂಥ ಪ್ರಕರಣಗಳಲ್ಲಿ ನ್ಯಾಯ ಸಿಗಲು ಸಾಧ್ಯವಿದೆ. ಆದರೆ, ಯಾವ ಪ್ರಕರಣಕ್ಕೆ ಏನು ಮಾಡಬೇಕು. ಯಾವ ಪ್ರಕರಣ ಯಾವ ಕಾನೂನು ವ್ಯಾಪ್ತಿಯಲ್ಲಿ ಬರುತ್ತದೆ ಎಂಬ ಸಾಮಾನ್ಯಜ್ಞಾನವನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಅಂದಾಗ ನಿಮಗೆ ಅನ್ಯಾಯದ ವಿರುದ್ಧ ಹೋರಾಡಲು ಸಾಧ್ಯವಾಗುತ್ತದೆ ಎಂದರು.

    ಪ್ರಧಾನ ದಿವಾಣಿ ಹಾಗೂ 1ನೇ ಹೆಚ್ಚುವರಿ ಜೆಎಂಎಫ್​ಸಿ ನ್ಯಾಯಾಧೀಶ ಪಿ. ಶಿವರಾಜ ಮಾತನಾಡಿ, ಇಂದು ತಂತ್ರಜ್ಞಾನ ಬಹಳ ಮುಂದೆ ಹೋಗಿದೆ. ವಿದ್ಯಾರ್ಥಿಗಳು ಹಾಗೂ ಜನತೆ ಅದನ್ನು ಒಳ್ಳೆಯದಕ್ಕೆ ಬಳಸಿಕೊಳ್ಳಬೇಕು. ಅಂದಾಗ ಸುರಕ್ಷಿತವಾಗಿ ಸಾರ್ಥಕದ ಕಡೆಗೆ ಬದುಕು ಸಾಗುತ್ತದೆ ಎಂದರು.

    ವಿದ್ಯಾಲಯದ ಪ್ರಾಚಾರ್ಯ ವಾಸುದೇವ ಐರಣಿ ಅಧ್ಯಕ್ಷತೆ ವಹಿಸಿದ್ದರು. ಪೋಸ್ಕೊ ಹಾಗೂ ಬಾಲ ನ್ಯಾಯ ಕಾಯ್ದೆ ಕುರಿತು ಗ್ರಾಮೀಣ ಠಾಣೆ ಸಿಪಿಐ ಸುರೇಶ ಸಗರಿ ಮತ್ತು ಶಾಶ್ವತ ಲೋಕ ಅದಾಲತ್ ಹಾಗೂ ಮಧ್ಯಸ್ಥಿಕೆ ಕುರಿತು ವಕೀಲ ಆರ್.ಡಿ. ಗೊರವರ ಉಪನ್ಯಾಸ ನೀಡಿದರು.

    ವಕೀಲರ ಸಂಘದ ಅಧ್ಯಕ್ಷ ಎಂ.ಬಿ. ಗೌಡಪ್ಪಗೌಡ್ರ, ಉಪಾಧ್ಯಕ್ಷ ವಿಠಲ ಪುಠಾಣಿಕರ, ಪ್ರಮುಖರಾದ ಕೆ.ಆರ್. ಬ್ಯಾಡಗಿ, ಅಭಿಲಾಷ ಬ್ಯಾಡಗಿ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts