More

    ಕಾಡಾನೆ ಹಾವಳಿಗೆ ಪರಿಹಾರ ಕಲ್ಪಿಸಿ

    ಮುಂಡಗೋಡ: ತಾಲೂಕಿನ ಶಿಂಗನಳ್ಳಿ ಮತ್ತು ಹುಲಿಹೊಂಡ ಗ್ರಾಮದ ರೈತರು ಕಾಡಾನೆ ಹಾವಳಿಯಿಂದ ಅಪಾರ ಬೆಳೆ ಹಾನಿಯಾಗಿದ್ದು, ಪರಿಹಾರ ನೀಡುವಂತೆ ಮತ್ತು ಆನೆ ದಾಳಿ ತಡೆಯಲು ಶಾಶ್ವತ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿ ಸೋಮವಾರ ಉಪತಹಸೀಲ್ದಾರ್ ಜಿ.ಬಿ. ಭಟ್ಟ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

    ಕೆಲ ದಿನಗಳಿಂದ ಶಿಂಗನಳ್ಳಿ, ಹುಲಿಹೊಂಡ, ನಂದಿಪುರ ಗ್ರಾಮಗಳ ರೈತರ ಜಮೀನುಗಳಿಗೆ ಕಾಡಾನೆಗಳ ಹಿಂಡು ನುಗ್ಗಿ ಗೋವಿನ ಜೋಳ, ಬಾಳೆ, ಅಡಕೆ ಇನ್ನಿತರ ಬೆಳೆಗಳನ್ನು ನಾಶ ಮಾಡುತ್ತಿವೆ. ಇದರಿಂದ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ವಿವಿಧ ಸಂಘ-ಸಂಸ್ಥೆ ಮತ್ತು ಬ್ಯಾಂಕ್​ಗಳಲ್ಲಿ ಸಾಲ ಮಾಡಿ ಹಣ ತಂದು ಬೆಳೆ ಬೆಳೆಯುತ್ತೇವೆ. ಆದರೆ, ಆನೆಗಳು ಬಂದು ನಾಶ ಮಾಡಿ ಹೋಗುತ್ತವೆ. ಈ ಬಗ್ಗೆ ಅರಣ್ಯಾಧಿಕಾರಿಗಳಿಗೆ ಮನವಿ ಮಾಡಿದರೆ ಆ ಕ್ಷಣ ಬಂದು ಆನೆ ಓಡಿಸಿ ಹೋಗುತ್ತಾರೆ. ತದನಂತರ ಮತ್ತೆ ಕಾಡಾನೆಗಳು ಬಂದು ಬೆಳೆ ನಾಶ ಮಾಡಿ ಹೋಗುತ್ತಿದ್ದು, ಇದರಿಂದ ರೋಸಿ ಹೋಗಿದ್ದೇವೆ. ಆನೆ ದಾಳಿ ತಡೆಯಲು ಶಾಶ್ವತ ಪರಿಹಾರ ಕಲ್ಪಿಸುವಂತೆ ಉಪತಹಸೀಲ್ದಾರ್ ಜಿ.ಬಿ. ಭಟ್ಟ ಅವರಿಗೆ ಮನವಿ ಸಲ್ಲಿಸಿದರು.

    ಈ ವೇಳೆ ಪ್ರಭು ಪಾಟೀಲ್, ರವಿ ರಾವಳ, ಪ್ರಭಾಕರ ಮೇಲಿನಮನಿ, ಅಕ್ಬರಸಾಬ ಹುಲಗೂರ, ಹಜರೇಸಾಬ್ ಹುಲಗೂರ, ವಾಸು ಮುದ್ದಕ್ಕನವರ, ಗಣಪತಿ ಎಸ್.ಡಿ., ಪರಸಪ್ಪ ಮುದ್ದಕ್ಕನವರ, ಫಕೀರಪ್ಪ ಮೇಲಿನಮನಿ, ಹೈದರಸಾಬ ಹುಲಗೂರ, ಇಂದಿರಾ ತಳ್ಳಳ್ಳಿ, ಶೃತಿ ಆಲಳ್ಳಿ, ಫರೀದಾ ಹುಲಗೂರ, ಫಾತಿಮಾ ಹುಲಗೂರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts