More

    ಕಾಡಾನೆ ದಾಳಿಗೆ ವಿವಿಧ ಬೆಳೆ ನಾಶ

    ಬೂದಿಕೋಟೆ: ಬೂದಿಕೋಟೆ ಗ್ರಾಮದ ಸುತ್ತಮುತ್ತಲಿನ ನೀಲಗಿರಿ ತೋಪುಗಳಲ್ಲಿ ಮೊಕ್ಕಾಂ ಹೂಡಿದ್ದ ಕಾಡಾನೆಗಳ ದಾಳಿ ಮುಂದುವರಿದಿದ್ದು, ಅಪಾರ ಪ್ರವಾಣದ ಟೊವ್ಯಾಟೊ, ರಾಗಿ, ಆಲೂಗಡ್ಡೆ, ಬೀನ್ಸ್, ಕ್ಯಾರೆಟ್ ಸೇರಿ ಹಲವಾರು ಬೆಳೆ ನಾಶವಾಗಿವೆ.
    ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀಡು ಬಿಟ್ಟಿರುವ ಆನೆಗಳ ಹಿಂಡು ಎರಡು ದಿನಗಳಿಂದ ಬೆಳೆ ನಾಶ ವಾಡುತ್ತಿದ್ದು, ಬುಧವಾರ ರಾತ್ರಿ ಬೂದಿಕೋಟೆ, ವಾರಾಂಡಹಳ್ಳಿ, ಬುಡ್ಡಗಾನಹಳ್ಳಿ ಗ್ರಾಮಗಳಿಗೆ ಲಗ್ಗೆ ಇಟ್ಟಿವೆ.

    ಬೂದಿಕೋಟೆಯ ರೈತರಾದ ಮುರುಗನ್ ಎಂಬುವವರ ಕ್ಯಾರೆಟ್ ಬೆಳೆ, ಧನಶೇಖರ್ ಅವರ ಆಲೂಗಡ್ಡೆ ಬೆಳೆ, ರಾಮಕೃಷ್ಣಪ್ಪ ಹಾಗೂ ವೆಂಕಟೇಶ್ ಅವರ ರಾಗಿ, ಸಂಜೀವಪ್ಪ ಮತ್ತು ರಾಮೂರ್ತಿ ಎಂಬುವವರ ಟೊಮ್ಯಾಟೊ, ವಾರಾಂಡಹಳ್ಳಿ ರೈತ ವೆಂಕಟೇಶ್ ಅವರ ಟೊವ್ಯಾಟೊ ಹಾಗೂ ಮುನಿರಾಜು ಅವರ ಬೀನ್ಸ್, ಬೊಮ್ಮಗಾನಹಳ್ಳಿ ಶಿವಪ್ಪ, ಬುಡ್ಡಗಾನಹಳ್ಳಿಯ ವೆಂಕಟೇಶ್ ಅವರ ಟೊಮ್ಯೊಟೊ ಬೆಳೆ ನಾಶವಾಡಿವೆ.

    ಆನೆಗಳ ಹಾವಳಿಯಿಂದ ಲಕ್ಷಾಂತರ ರೂ. ನಷ್ಟವಾಗಿದೆ. ಪ್ರತಿ ಬಾರಿ ಬೆಳೆ ನಷ್ಟ ಪರಿಹಾರಧನಕ್ಕೆ ಬೆಳೆ ದೃಢೀಕರಣ ಸೇರಿ ಹಲವು ದಾಖಲೆಗಳಿಗೆ ಸಾವಿರಾರು ರೂ. ಖರ್ಚು ವಾಡಿ ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸುತ್ತೇವೆ. ಆದರೆ, ಇದುವರೆಗೂ ಪರಿಹಾರ ಸಿಕ್ಕಿಲ್ಲ.
    ಶಿವಪ್ಪ, ರೈತ, ಬೊಮ್ಮಗಾನಹಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts