More

    ಕಾಡಾನೆ ಕಿವಿಯಲ್ಲಿ ಕಾಣಿಸಿಕೊಂಡ ಹುಳು

    ಮುಂಡಗೋಡ: ಕ್ಯಾತನಳ್ಳಿ ಅರಣ್ಯ ಪ್ರದೇಶದಲ್ಲಿ ಕಾಡಾನೆವೊಂದು ಗಜಪಡೆಯೊಂದಿಗೆ ಕಾದಾಡಿ ತನ್ನ ಎರಡೂ ಕಿವಿಗಳಿಗೆ ಗಾಯ ಮಾಡಿಕೊಂಡು ಕಿವಿಗಳಲ್ಲಿ ಹುಳುಗಳು ಬಿದ್ದ ಸ್ಥಿತಿಯಲ್ಲಿ ಕ್ಯಾತನಳ್ಳಿ ಕೆರೆಯಲ್ಲಿ ಗುರುವಾರ ಕಾಣಿಸಿಕೊಂಡಿದೆ.

    ಸುಮಾರು 10 ವರ್ಷದ ಹೆಣ್ಣು ಕಾಡಾನೆ ಗಜಪಡೆಯೊಂದಿಗೆ ಕಾದಾಡಿ ತನ್ನ ಎರಡೂ ಕಿವಿಗಳಿಗೆ ಗಂಭೀರ ಗಾಯಪಡಿಸಿಕೊಂಡು ಗಜಪಡೆಯಿಂದ ದೂರವಾಗಿ ಒಂಟಿಯಾಗಿ ನೋವಿನಿಂದ ಅಲ್ಲಿಂದಿಲ್ಲಿಗೆ ಅಡ್ಡಾಡುತ್ತಿದೆ. ನಂತರ ಅರಣ್ಯ ಇಲಾಖೆಯವರು ಪಶು ಸಂಗೋಪನಾ ಇಲಾಖೆಯ ವೈದ್ಯರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪಶು ವೈದ್ಯರಿಗೆ ಕಾಡಾನೆಯ ಕಿವಿಗೆ ಹುಳು ಬಿದ್ದಿರುವುದು ಗಮನಕ್ಕೆ ಬಂದಿದೆ. ಕಾಡಾನೆಗೆ ಚಿಕಿತ್ಸೆ ನೀಡಲಾಗದೆ ಅವರು ಸಿಂಪಡಣೆ ಮಾಡುವ ಔಷಧವನ್ನು ಅರಣ್ಯ ಇಲಾಖೆಯವರಿಗೆ ನೀಡಿದ್ದಾರೆ. ಗಾಯಗೊಂಡ ಕಾಡಾನೆಯ ಚಲನ-ವಲನಗಳ ಬಗ್ಗೆ ನಿಗಾ ಇಡಲು ಅರಣ್ಯ ಸಿಬ್ಬಂದಿಗೆ ಮೇಲಧಿಕಾರಿಗಳು ಸೂಚಿಸಿದ್ದಾರೆ ಎಂದು ಅರಣ್ಯ ಇಲಾಖೆಯ ಮೂಲಗಳಿಂದ ತಿಳಿದು ಬಂದಿದೆ.

    ಕಾಡಾನೆಗೆ ಚಿಕಿತ್ಸೆ ನೀಡುವುದು ಕಷ್ಟದ ಕೆಲಸ. ಏಕೆಂದರೆ ಅದು ದಾಳಿ ಮಾಡಲು ಬರುತ್ತದೆ. ಗಾಯ ಬಹಳ ಆಗಿದೆ. ಹುಳುಗಳು ಬಹಳ ಬಿದ್ದಿದ್ದು, ಒಂದು ಕಿವಿಯೇ ಇಲ್ಲದಂತಾಗಿದೆ. ಶಿವಮೊಗ್ಗದ ಆನೆ ತಜ್ಞ ಡಾ. ವಿನಯ ಅವರು ಬಂದು ಅರಿವಳಿಕೆ ಮದ್ದು ನೀಡಿ ಮೊದಲು ಪ್ರಥಮ ಚಿಕಿತ್ಸೆ ನೀಡಬೇಕು. ನಂತರ ಅದನ್ನು ಸಕ್ರಿಬೈಲ್​ಗೆ ಸ್ಥಳಾಂತರಿಸಿ ಹೆಚ್ಚಿನ ಚಿಕಿತ್ಸೆ ನೀಡಬೇಕು. ಹಾಗೆಯೇ ಬಿಟ್ಟರೆ ಕಾಡಾನೆ ಜೀವಕ್ಕೆ ಅಪಾಯವಿದೆ.

    | ಜಯಚಂದ್ರ ಕೆಂಪಾಶಿ ಪಶು ವೈದ್ಯಾಧಿಕಾರಿ, ಮುಂಡಗೋಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts