More

    ಕಾಟಾಚಾರದ ಕಾರ್ಯಕ್ರಮ ಆಗದಿರಲಿ  -ಶಾಸಕ ಬಸವಂತಪ್ಪ ತಾಕೀತು – ಮಾಯಕೊಂಡದಲ್ಲಿ ಜನತಾ ದರ್ಶನ

    ದಾವಣಗೆರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನರ ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸಲು ಜನತಾ ದರ್ಶನ ರೂಪಿಸಿದ್ದಾರೆ. ಇದು ಕಾಟಾಚಾರದ ಕಾರ್ಯಕ್ರಮ ಆಗಬಾರದು ಎಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಅಧಿಕಾರಿಗಳಿಗೆ ತಾಕೀತು ಮಾಡಿದರು.
    ಮಾಯಕೊಂಡದಲ್ಲಿ ತಾಲೂಕು ಆಡಳಿತ, ವಿವಿಧ ಇಲಾಖೆಗಳ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಸ್ವೀಕರಿಸಿದ ಅರ್ಜಿಗಳನ್ನು ಮುಂದಿನ ಜನತಾ ದರ್ಶನದೊಳಗಾಗಿ ಬಗೆಹರಿಸಿ ಪರಿಹಾರ ಕಲ್ಪಿಸಬೇಕು. ಅದರ ವರದಿಯನ್ನೂ ನೀಡಬೇಕು. ಹಾಗಾದಾಗ ಇದು ಯಶಸ್ಸು ಪಡೆಯಲಿದೆ ಎಂದರು.
    ಸರ್ಕಾರವೇ ಜನರ ಮನೆ ಬಾಗಿಲಿಗೆ ಬರುವ ಈ ವಿನೂತನ ವೇದಿಕೆಯನ್ನು ಸಾರ್ವಜನಿಕರು ಸರಿಯಾಗಿ ಬಳಸಿಕೊಳ್ಳಬೇಕು. ಜನರ ಸಮಸ್ಯೆಗಳನ್ನು ಪರಿಹರಿಸುವುದು ನಮ್ಮ ಸರ್ಕಾರದ ಬದ್ಧ್ದತೆಯಾಗಿದೆ ಎಂದು ಹೇಳಿದರು.
    ಸಿದ್ದರಾಮಯ್ಯ ಸರ್ಕಾರ ನಾಲ್ಕು ಗ್ಯಾರಂಟಿ ಈಡೇರಿಸಿದ್ದು ರಾಜ್ಯದ ಬಡವರು ಮತ್ತು ಮಧ್ಯಮ ವರ್ಗದ ಜನರಿಗೆ ಇದರ ಲಾಭ ದೊರೆತಿದೆ ಎಂದು ತಿಳಿಸಿದರು.
    ಗ್ರಾಪಂ ಅಧ್ಯಕ್ಷೆ ಶಿವಮ್ಮ, ಜಿಪಂ ಮಾಜಿ ಸದಸ್ಯ ವೆಂಕಟೇಶ್, ಉಪತಹಸೀಲ್ದಾರ್ ಹಾಲೇಶಪ್ಪ, ಎಡಿಎಲ್ಆರ್ ಕಸ್ತೂರಿ, ಸಹಾಯಕ ಸಿಡಿಪಿಒ ನೇತ್ರಾವತಿ, ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸುನೀತಾ, ಪಿಡಿಒ ನಾಗರಾಜ್, ಆಎಫ್‌ಒ ದರ್ಶನ್, ಎಇಇ ಪುಟ್ಟಸ್ವಾಮಿ, ಮುಖಂಡ ಬಿ.ಟಿ.ಹನುಮಂತಪ್ಪ, ಗೋಪಾಲ, ರುದ್ರೇಶ್ ಇದ್ದರು. ಸಲ್ಲಿಕೆಯಾದ 60 ಅರ್ಜಿಗಳಲ್ಲಿ 30ಕ್ಕೆ ಸ್ಥಳದಲ್ಲಿಯೇ ಪರಿಹಾರ ನೀಡಲಾಯಿತು. ವಿವಿಧ ಯೋಜನೆಗಳ ಆದೇಶ ಪತ್ರ ನೀಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts